
ಕಲಾ ಸಂಘಟನೆ ತ್ರಿರಂಗ ಸಂಗಮ ಮುಂಬಯಿ ತೃತೀಯ ವಾರ್ಷಿಕ ಸಂಭ್ರಮ
ಮುಂಬಯಿ (ಆರ್‌ಬಿಐ), ಫೆ. ೦೯: ನಗರದ ಕಲಾ ಸಂಘಟನೆಯಾಗಿ ಮೂರು ವರ್ಷಗಳಿಂದ ಸೇವಾ ನಿರತ ತ್ರಿರಂಗ ಸಂಗಮ ಮುಂಬಯಿ ತನ್ನ ತೃತೀಯ ವಾರ್ಷಿಕೋತ್ಸವವನ್ನು ಇಂದಿಲ್ಲಿ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ನಿರ್ಮಿತ ಸ್ವರ್ಗೀಯ ಮಧ್ಯಗುತ್ತು ಶ್ರೀಮತಿಲೀಲಾವತಿ ಶ್ಯಾಮ ಶೆಟ್ಟಿ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ವೆಲ್‌ಕಮ್ ಪ್ಯಾಕೇಜಿಂಗ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ರವೀಂದ್ರನಾಥ ಎಂ.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ವಾರ್ಷಿಕೋತ್ಸವ ಸಮಾರಂಭವನ್ನು ಮಂಗಳೂರು ಇಸ್ಕಾನ್‌ನ ಅಧ್ಯಕ್ಷ ಗುಣಾಕರ ರಾಮದಾಸ ಪ್ರಭು ದೀಪ ಬೆಳಗಿಸಿ ಉದ್ಘಾಟಿಸಿದರು. ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿ ಅವರು ತುಳಸೀಕಟ್ಟೆಗೆ ನೀರುಗೈದು, ಥಾಣೆ ಬಂಟ್ಸ್ ಅಸೋ ಸಿಯೇಶನ್ ಮಾಜಿ ಅಧ್ಯಕ್ಷ ವೇಣುಗೋಪಾಲ್ ಎಲ್.ಶೆಟ್ಟಿ ಅವರು ಹಿಂಗಾರ ಅರಳಿಸಿ ಕಳಸೆಯಲ್ಲಿರಿಸಿ ವಿಧ್ಯುಕ್ತವಾಗಿ ಸಮಾರಂಭಕ್ಕೆ ಚಾಲನೆಯನ್ನಿತ್ತರು. ವಾಸ್ತುತಜ್ಞ ಅಶೋಕ ಪುರೋಹಿತ್ ಆಶೀರ್ವಚನಗೈದರು.
ಈ ಸಂದರ್ಭದಲ್ಲಿ ಅತಿಥಿsಗಳಾಗಿ ಅಭ್ಯಾಗತರುಗಳಾಗಿ ಸಮಾಜ ಸೇವಕರುಗಳಾದ ತೋನ್ಸೆ ಜಯಕೃಷ್ಣ ಶೆಟ್ಟಿ, ಎಲ್.ವಿ ಅಮೀನ್, ಅಶೋಕ್ ಶೆಟ್ಟಿ (ಥಾಣೆ ಬಂಟ್ಸ್), ಕಿಶೋರ್ ಶೆಟ್ಟಿ ಐಕಳ, ಉದಯ್ ಶೆಟ್ಟಿ ಮಲಾರಬೀಡು, ರಾಜೇಶ್ ಬಿ.ಶೆಟ್ಟಿ (ಜವಾಬ್), ಜಯಂತ್ ಎಂ.ಶೆಟ್ಟಿ ವರ್ತಕ್‌ನಗರ್, ಉದ್ಯಮಿಗಳಾದ ಕೃಷ್ಣ ವೈ.ಶೆಟ್ಟಿ, ಮಹೇಶ್ ಎಸ್.ಶೆಟ್ಟಿ (ಬಾಬಾ’ಸ್), ಅಶೋಕ್ ಶೆಟ್ಟಿ ಪೆರ್ಮುದೆ (ಕಲ್ಪವೃಕ್ಷ), ಶಂಕರ್ ಎ.ಶೆಟ್ಟಿ ಕುಕ್ಕುಂದೂರು (ಭಾಂಡೂಪ್), ಜಯಂತ್ ಎನ್.ಶೆಟ್ಟಿ ಸೂರತ್, ಸರ್ವೋತ್ತಮ ಶೆಟ್ಟಿ ಅಬುಧಾಬಿ, ಎರ್ಮಾಳ್ ಹರೀಶ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅವಿನ್ ಅಧ್ಯಕ್ಷತೆಯಲ್ಲಿ ಕರ್ನೂರು ಒಂದು ನೆನಪು ಕಾರ್ಯಕ್ರಮ ಮತ್ತು ಕರ್ನೂರು ಪ್ರಶಸ್ತಿ ಪ್ರದಾನ ನಡೆಸಲ್ಪಟ್ಟಿತು. ಡಾ| ಪ್ರವೀಣ್ ಭಟ್ ಸಯಾನ್ ಶುಭ ಶಂಸನೆಗೈದರು. ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ರತ್ನಾ ಪ್ರಭಾಕರ್ ಶೆಟ್ಟಿ, ಅರುಣೋದಯ ಎಸ್.ರೈ, ಚಂದ್ರಶೇಖರ ಪಾಲೆತ್ತಾಡಿ, ಕುದಿ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದು ಸ್ವರ್ಗೀಯ ಕರ್ನೂರು ಕೊರಗಪ್ಪ ರೈ ಸ್ಮರಣಾರ್ಥ ಕರ್ನೂರು -ಸಂಸ್ಮರಣಾ ಪ್ರಶಸ್ತಿ ೨೦೨೫ನ್ನು ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಇವರಿಗೆ ಪ್ರದಾನಿಸಿ ಅಭಿನಂದಿಸಿದರು

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಶ್ರೀದೇವರಿಗೆ ದೀಪಬೆಳಗಿಸಿ ಸತ್ಕಾರ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಬಂಟರ ಸಂಘ ಮುಂಬಯಿ ಅಧ್ಯಕ ಪ್ರವೀಣ್ ಭೋಜ ಶೆಟ್ಟಿ, ಯುಎಇ ಬಂಟ್ಸ್ ದುಬಾಯಿ ಗೌರವಾಧ್ಯಕ್ಷ ಸರ್ವೋತ್ತಮ ಶೆಟ್ಟಿ, ಶ್ರೀರಥ್ ಫೈನಾನ್ಸ್ ಮುಖ್ಯಸ್ಥ ರತ್ನಾಕರ ಶೆಟ್ಟಿ ಮುಂಡ್ಕೂರು, ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ, ಇಸ್ಸಾರ್ ಫೈನಾಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ, ಉದ್ಯಮಿ ಎನ್.ಟಿ ಪೂಜಾರಿ ಉಪಸ್ಥಿತರಿದ್ದು ಐಕಳ ಹರೀಶ್ ಶೆಟ್ಟಿ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

ಸ್ಟಾರ್ ಕಲಾವಿದರಾದ ಸಂಗೀತ ನಿರ್ದೇಶಕ ಡಾ| ಗುರುಕಿರಣ್, ಕುಸಲ್ದರಸೆ ನವೀನ್ ಡಿ.ಪಡೀಲ್, ತುಳು ನಾಡ ಮಾಣಿಕ್ಯ ಅರವಿಂದ ಬೋಳಾರ್, ದಾಯ್ಜಿವರ್ಲ್ಡ್ ಖ್ಯಾತಿಯ ವಾಲ್ಟರ್ ನಂದಳಿಕೆ, ಕುದ್ರೋಳಿ ಗಣೇಶ್ ಇವರು ಮೆಗಾ ಮ್ಯಾಜಿಕ್ ಮೇಲೈಕೆಯಲ್ಲಿ ಸ್ಟಾರ್ ಕಲಾವಿದ ಸಮಾಗಮ ಜರುಗಿತು.
ಸಭೆ-ಸಮಾನ-ಸಂಭ್ರಮ, ಗಣ್ಯರ ಸಮಾಗಮದೊಂದಿಗೆ ದಿನಪೂರ್ತಿ ನಡೆಯಲಿರುವ ಸಮಾರಂಭದಲ್ಲಿ ನೃತ್ಯ-ನಾಟ್ಯ-ನರ್ತನ, ಮಹಾನಗರದ ಪ್ರತಿಷ್ಠಿತ ಸಂಘ ಸಂಸ್ಥೆಗಳ ಸದಸ್ಯರ ಗಾನ, ಗಾಯನ, ಗಮಕ ಸ್ಪರ್ಧೆ, ಹಾಸ್ಯ-ಹಬ್ಬ-ಹರುಷ, ಪಾಂಚಜನ್ಯ ಯಕ್ಷ-ಗಾನ-ನೃತ್ಯ-ವೈಭವ ನಡೆಸಲ್ಪಟ್ಟವು. ಬಡಗುತಿಟ್ಟುನ ವೈಭವದೊಂ ದಿಗೆ ಶ್ರೀರಕ್ಷಾ ಹೆಗಡೆ ಸಿದ್ಧಾಪುರ ಇವರ ಭಾಗವತಿಕೆ, ಎ.ಪಿ ಪಾಠಕ್ ಮದ್ದಳೆ, ಪ್ರಶಾಂತ್ ಕೈಗಡಿ ಚೆಂಡೆಯಲ್ಲಿ ಕಲಾವಿದರಾದ ನಿಹಾರಿಕಾ ಭಟ್ ಮತ್ತು ನಾಗಶ್ರೀ ಸಾಥ್ ಪಂಚಜನ್ಯ ಪ್ರಸಂಗ ಪ್ರದರ್ಶಿಸಿದರು.

ಮಲ್ಲಿಕಾ ಶೆಟ್ಟಿ ಮತ್ತು ತಾರಾ ರೈ ಪ್ರಾರ್ಥನೆಯನ್ನಾಡಿದರು. ತ್ರಿರಂಗ ಸಂಗಮದ ರೂವಾರಿ ಕರ್ನೂರು ಮೋಹನ್ ರೈ ಪ್ರಸ್ತಾವನೆಗೈದು ಸ್ವಾಗತಿಸಿದರು. ತ್ರಿರಂಗ ಸಂಗಮದ ರೂವಾರಿ ಅಶೋಕ್ ಪಕ್ಕಳ ಸಮನ್ವಯಕ ತ್ವದಲ್ಲಿ ಬರವುದ ಸುಗಿಪು-ಗೇನದ ತುಲಿಪು ವಿಚಾರ ಮಂಥನ ನಡೆಸಲ್ಪಟ್ಟಿತು. ನವನೀತ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು. ತ್ರಿರಂಗ ಸಂಗಮದ ರೂವಾರಿ ನವೀನ್ ಶೆಟ್ಟಿ ಇನ್ನಬಾಳಿಕೆ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























