ಗೋಕುಲದಲ್ಲಿ ಮಕರ ಸಂಕ್ರಮಣ ಪರ್ವಕಾಲದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ.

ಗೋಕುಲದಲ್ಲಿ ಮಕರ ಸಂಕ್ರಮಣ ಪರ್ವಕಾಲದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ.

0Shares

ಮುಂಬಯಿ (ಆರ್‌ಬಿಐ), ಜ.16: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಶತಮಾನ ಸಂಭ್ರಮದಲ್ಲಿರುವ ಬಿಎಸ್‌ಕೆಬಿ ಅಸೋಸಿಯೇಶನ್‌ನ ಸಹಯೋಗದೊಂದಿಗೆ ಮಕರ ಸಂಕ್ರಮಣ ಪರ್ವ, ಪವಿತ್ರ ಉತ್ತರಾಯಣ ಪ್ರಾರಂಭ ಕಾಲದ ನಿಮಿತ್ತ ಸಾಯನ್ ಪೂರ್ವದ ಗೋಕುಲ ಸಭಾಗೃಹದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಕಳೆದ ಮಂಗಳವಾರ ಅತ್ಯಂತ ಸಂಭ್ರಮದಿಂದ ಆಚರಿಸಿತು.

ವೇ| ಮೂ| ದರೆಗುಡ್ಡೆ ಶ್ರೀನಿವಾಸ್ ಭಟ್ ಅವರ ಪ್ರಧಾನ ಪೌರೋಹಿತ್ಯದಲ್ಲಿ ದೇವತಾ ಪ್ರಾರ್ಥನೆ, ಸೇವಾಥಿಗಳಿಗೆ ಸಾಮೂಹಿಕ ಸಂಕಲ್ಪದೊಂದಿಗೆ ಪೂಜಾ ವಿಧಿವಿಧಾನಗಳು ಸಾಂಪ್ರದಾಯಿಕವಾಗಿ ನೆರವೇರಿದವು.

ಮಹಾಮಂಗಳಾರತಿಯಾದ ನಂತರ ಶ್ರೀನಿವಾಸ್ ಭಟ್ ತಮ್ಮ ಪ್ರಾರ್ಥನೆಯಲ್ಲಿ ಮಕರ ಸಂಕ್ರಮಣದ ಈ ಪರ್ವ ಕಾಲದಲ್ಲಿ ಗೋಕುಲ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ, ಸಹಸ್ರ ನಾಮಾರ್ಚನೆ, ಹರಿನಾಮ ಸಂಕೀರ್ತನೆಯೊಂದಿಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಾವು ಆಚರಿಸಿದ್ದೇವೆ. ಸದ್ಭಕ್ತರಿಗೆಲ್ಲಾ ಭಗವಂತ ಆಯುರಾರೋಗ್ಯ ಸುಖ ಸಂಪತ್ತನ್ನಿತ್ತು ರಕ್ಷಿಸಲಿ, ಶತಮಾನೋತ್ಸವ ದ ಎಲ್ಲಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಅನುಗ್ರಹ ವಚನಗಳನ್ನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗೋಕುಲ ಭಜನಾ ಮಂಡಳಿ ಮತ್ತು ವಲಯದ ಭಜನಾ ಮಂಡಳಿಗಳಾದ ಗೋಪಾಲಕೃಷ್ಣ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ, ಸ್ಕಂದ ಭಜನಾ ಮಂಡಳಿಯವರಿಂದ ಪ್ರೇಮಾ ರಾವ್ ನಿರೂಪಣೆಯಲ್ಲಿ “ಪಾಂಡುರಂಗ ವಿಠಲ” ವಿಷಯ ಆಧಾರಿತ ದಾಸರ ಪದಗಳ ಹರಿನಾಮ ಸಂಕೀರ್ತನೆ ನೆರವೇರಿತು. ಗೋಕುಲ ಮಹಿಳಾ ವಿಭಾಗದವರಿಂದ ಅರಿಸಿನ ಕುಂಕುಮ, ಎಳ್ಳು೦ಡೆ ವಿತರಣೆ ಜರಗಿತು.

ಈ ಸಂದರ್ಭದಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್‌ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಸಹಿತ ಅಸೋಸಿಯೇಶನ್ ನ ಪದಾಧಿಕಾರಿಗಳು, ಕಾರ್ಯಕಾರೀ ಸಮಿತಿ ಸದಸ್ಯರು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ಥ ಮಂಡಳಿ ಮತ್ತು ಧಾರ್ಮಿಕ ಸಮಿತಿ ಸದಸ್ಯರು ಹಾಗೂ ಸುಮಾರುನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ದೇವರಿಗೆ ನಿತ್ಯ ಪೂಜೆಯಾದ ನಂತರ ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ ನೆರವೇರಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now