ಗಾಣಿಗ ಸಮಾಜ ಮುಂಬಯಿ (ರಿ.) ಪೂರೈಸಿದ 27ನೇ ವಾರ್ಷಿಕ ಮಹಾಸಭೆ

ಗಾಣಿಗ ಸಮಾಜ ಮುಂಬಯಿ (ರಿ.) ಪೂರೈಸಿದ 27ನೇ ವಾರ್ಷಿಕ ಮಹಾಸಭೆ

0Shares

ಗಾಣಿಗ ಸಮಾಜ ಮುಂಬಯಿ (ರಿ.) ಪೂರೈಸಿದ 27ನೇ ವಾರ್ಷಿಕ ಮಹಾಸಭೆ
ಮುಂಬಯಿ ಗಾಣಿಗರಲ್ಲಿ ಐಕತೆಯ ಹುರುಪು ಕಾಣುತ್ತಿದೆ : ಬೈಕಾಡಿ ಬಿ.ವಿ ರಾವ್

ಮುಂಬಯಿ, ಜ. 15 : ಮಹಾನಗರದಲ್ಲಿ ನೆಲೆಸಿರುವ ಗಾಣಿಗ ಸಮಾಜ ಜನತೆಯಲ್ಲಿ ಐಕತೆಯ ಹುರುಪು ಕಾಣುತ್ತಿದೆ. ನಮ್ಮ ಹಿರಿಯರ ಅನುಭವದಂತೆ ಸಮಾಜ ಸುಧಾರಕರಲ್ಲಿ ದುರಾಸೆ ಸಲ್ಲದು. ಅಂತೆಯೇ ನಿಸ್ವಾರ್ಥ ಸಾಮಾಜಿಕ ಕಳಕಳಿಯುಳ್ಳವರು ಸ್ವಾರ್ಥ ಮರೆತು ಭಗವತ್ವಜ್ಞೆ ಸದಾಚಾರವಾಗಿರಿಸಬೇಕು. ಇದರಂತೆಯೇ ಗಾಣಿಗ ಸಮಾಜದ ಪರಂಪರಿಕಾಧಾರಿತ ಸಂಸ್ಕೃತಿಯೊಂದಿಗೆ ಮುನ್ನಡೆಯುವ ಪ್ರಯತ್ನಕ್ಕೆ ನಾವು ಸೇವೆ ಮೂಲಕ ಒಗ್ಗೂಡಬೇಕು ಎಂದು ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಬೈಕಾಡಿ ವಾಸುದೇವ ರಾವ್ (ಬಿ.ವಿ ರಾವ್) ತಿಳಿಸಿದರು.

ಕಳೆದ ಆದಿತ್ಯವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಗಾಣಿಗ ಸಮಾಜ ಮುಂಬಯಿ (ರಿ.) ತನ್ನ 27ನೇ ವಾರ್ಷಿಕ ಮಹಾಸಭೆಯನ್ನು ನಡೆಸಿತ್ತು. ಸಭೆಯ ಅಧ್ಯಕ್ಷತೆವಹಿಸಿ ಬೈಕಾಡಿ ವಾಸುದೇವ ರಾವ್ (ಬಿ.ವಿ ರಾವ್) ಸಭೆಯನ್ನುದ್ದೇಶಿಸಿ ಮಾತನಾಡಿ ತಮ್ಮ ಐದು ವರ್ಷದ ಅಧ್ಯಕ್ಷತೆಯ ಅವಧಿಯಲ್ಲಿ ನೀಡಿದ ಸಹಕಾರಕ್ಕೆ ತುಂಬು ಕೃತಜ್ಞತೆಯನ್ನು ಹೇಳಿದರು ಹಾಗೂ ಮುಂದೆ ಕೂಡ ತಮ್ಮ ಸಹಯೋಗ ಮತ್ತು ಬೆಂಬಲದ ಭರವಸೆಯನ್ನು ನೀಡಿದರು.

ಸಭೆಯಲ್ಲಿ ಗೌರವಾಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಹಿರಿಯ ಸದಸ್ಯ, ಸಲಹೆಗಾರ ಯು. ಬಾಲಚಂದ್ರ ಕಟ್ಪಾಡಿ, ರತ್ನಾಕರ್ ಎ.ಶೆಟ್ಟಿ ಉಪಸ್ಥಿತರಿದ್ದು ಸಮಯೋಚಿತವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೇಶ್ ಕುತ್ಪಾಡಿ ಯವರು ಬಿಎಸ್‌ಕೆಬಿಎ (ಗೋಕುಲ) ಆಯೋಜಿತ ಫೆ. 8 ಮತ್ತು 9 ರಂದು ಜರಗಲಿರುವ ತುಳು ಕನ್ನಡಿಗರ ಆಟೋಟ ಸ್ಪರ್ಧೆಯಲ್ಲಿ ಗಾಣಿಗ ಸಮಾಜ ಮುಂಬಯಿ ಪಾಲ್ಗೊಳ್ಳುವಿಕೆಯ ಬಗ್ಗೆ ಸವಿವರವಾಗಿ ಸಭೆಗೆ ಮಾಹಿತಿ ನೀಡಿ ಎಲ್ಲ ವರ್ಗದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಗಾಣಿಗ ಮಾತನಾಡಿ ತಮ್ಮ ಅಧಿಕಾರದ ಅವಧಿಯಲ್ಲಿ ಸಮಾಜದ ಅಶಕ್ತರಿಗೆ ವಿದ್ಯೆ ಮತ್ತು ಆಪಾತ್ಕಾಲಾದ ನೆರವನ್ನು ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವದಾಗಿ ಹೇಳಿ ಈ ಕಾರ್ಯದಲ್ಲಿ ಸಮಾಜ ಬಾಂಧವರ ಸಹಯೋಗ ಯಾಚಿಸಿದರು.

ಹಿರಿಯ ಸದಸ್ಯ ವೆಂಕಟೇಶ ಗಾಣಿಗ ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನಿತ್ತರು. ಅನುಪಮ ರಾಘವೇಂದ್ರ ಪ್ರಾರ್ಥನೆಯನ್ನಾಡಿದರು. ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಗಾಣಿಗ ( 4ಉ) ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ ಅವರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಗಂಗಾಧರ್ ಗಾಣಿಗ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now