
ಮುಂಬಯಿ: ಅ. 6: ಕಾಂದಿವಿಲಿ ಪರಿಸರದಲ್ಲಿನ ಜಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಇದರ ನವರಾತ್ರಿಯ ಅಂಗವಾಗಿ ವಾರ್ಷಿಕ ಶಾರದ ಪೂಜೆಯು ಅ. 06ರಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12ರ ವರೆಗೆ ವಿವಿಧ ಧಾರ್ಮಿಕ ಶ್ರದ್ಧಾಭಕ್ತಿಯೊಂದಿಗೆ ಚಾರ್ಕೋಪ್ ಕನ್ನಡ ಭವನ ವಿಜಯ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ, ಚಾರ್ಕೋಪ್, ಸೆಕ್ಟರ್ 2, ಕಾಂದಿವಲಿ ಪಶ್ಚಿಮ ಇಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 9:00 ಗಂಟೆಗೆ ಶಾರದಾ ಮಾತೆಯ ಪ್ರತಿಷ್ಠಾಪನೆ ಸಂಕಲ್ಪ ಪೂಜೆ ನೆರವೇರಿತು ಬಳಿಕ ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ವೈದಿಕ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಶಾರದಾ ಪೂಜೆ ಜರುಗಿತು. ಮಹಿಳೆಯರಿಂದ ಆಯಿಗಿರಿ ನಂದಿನಿ ಶ್ಲೋಕ ಸಾಮೂಹಿಕ ಪ್ರಾರ್ಥನೆ ಜರುಗಿದ ನಂತರ ಮಹಾಮಂಗಳಾರತಿ ನೆರವೇರಿತು. ಕಾರ್ಯಕ್ರಮದಲ್ಲಿ ಬಳಗದ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿತು. ಆ ಬಳಿಕ ತೀರ್ಥ ಪ್ರಸಾದ ವಿತರಣೆ ನೆರವೇರಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಮಾಜಿ ಸಂಸದ ಬಳಗದ ಗೌರವಾಧ್ಯಕ್ಷ ಗೋಪಾಲ ಸಿ ಶೆಟ್ಟಿ ಶಾರದಾ ಪೂಜೆಯ ಪರ್ವಕಾಲದಲ್ಲಿ ಸರ್ವ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಜರುಗಿದ್ದು ನಮ್ಮ ಸಂಸ್ಕೃತಿ, ಪರಂಪರೆಯನ್ನು ಅರಿತುಕೊಂಡು ಹಬ್ಬವನ್ನು ಭಕ್ತಿಭಾವದೊಂದಿಗೆ ಆಚರಿಸಿ ಆಧ್ಯಾತ್ಮಿಕ ಉನ್ನತಿಯನ್ನು ಹೊಂದುವ ಮೂಲಕ ಶಾರದಾ ಮಾತೆಯ ಅನುಗ್ರಹ, ಶೌರ್ಯ ಮತ್ತು ಧೈರ್ಯ ಪ್ರತಿಫಲ ಎಲ್ಲರಿಗೂ ಲಭಿಸಲಿ ಎಂದು ಹಾರೈಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ದ ಅಂಗವಾಗಿ ಬಳಗದ ಸದಸ್ಯರು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಜರುಗಿತು. ತನುಜಾ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಬಳಗದ ಅಧ್ಯಕ್ಷರಾದ ರವೀಂದ್ರ ಎಂ ಶೆಟ್ಟಿ ದಂಪತಿಗಳು ಧಾರ್ಮಿಕ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಬಳಗದ ಗೌ. ಪ್ರ. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ ಕೋಟ್ಯಾನ್ ಗೌರವ ಕೋಶಾಧಿಕಾರಿ ರಾಜೀವಿ ಆರ್ ಕೋಟ್ಯಾನ್ ವಾರ್ಷಿಕೋತ್ಸವ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಚೇವಾರ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ ಶೆಟ್ಟಿ ಸಂಚಾಲಕಿ ಶಾಂತ ಎನ್ ಭಟ್, ವಿಶ್ವಸ್ಥರಾದ ಜಯ ಸಿ ಶೆಟ್ಟಿ , ಉದ್ಯಮಿ, ಸಮಾಜ ಸೇವಕ ಮುಂಡಪ್ಪ ಎಸ್ ಪಯ್ಯಡೆ, ಕಾಂದಿವಲಿ ಕನ್ನಡ ಸಂಘದ ಗೌರವಾಧ್ಯಕ್ಷ ಜಯಕರ ಶೆಟ್ಟಿ, ಮಾಜಿ ಅಧ್ಯಕ್ಷ ಶ್ಯಾಮ ಶೆಟ್ಟಿ, ಅಧ್ಯಕ್ಷ ರಾದ ಜಯಪಾಲ್ ಶೆಟ್ಟಿ, ಪೊಯಿಸರ್ ಜಿಮ್ಖಾನದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ. ಬಿಲ್ಲವರ ಎಸೋಸಿಯೇಶನ್ ಬೊರಿವಿಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್ ಬಿ ಅಮೀನ್, ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಉಪಸಮಿತಿಯ ಪಧಾದಿಕಾರಿಗಳು, ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ತುಳುಕನ್ನಡಿಗರು ಪರಿಸರದ ತುಳುಕನ್ನಡಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























