
ಮುಂಬಯಿ, ಏ.07: ಭಾರತದ ಬೀಚ್ ಗೇಮ್ಸ್ ಫೆಡರೇಶನ್ (ಬಿಜಿಎಫ್‌ಐ) ಸಂಸ್ಥೆಯು ಹಿರಿಯ ಜುಡೋ ಆಡಳಿತಗಾರ ಹಾಗೂ ಬೋಂಬೆ ಜುಡೋ ಕ್ಲಬ್ ನಿರ್ದೇಶಕರಾಗಿರುವ ಯತೀಶ್ ನಾರಾಯಣ್ ಬಂಗೇರ ಅವರನ್ನು ಯುವ ಮತ್ತು ಶಾಲಾ ಬೀಚ್ ಗೇಮ್ಸ್ ಅಭಿವೃದ್ಧಿ ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಿದೆ.
ಉಡುಪಿ ಕಾಪು ಮೂಲತಃ ಯತೀಶ್ ಬಂಗೇರ ಅವರನ್ನು ಫೆಡರೇಶನ್ ಪರವಾಗಿ ಸ್ವಾಗತಿಸಿದ ಬಿಜಿಎಫ್‌ಐ, ಜುಡೋ ಮತ್ತು ಸಂಬಂಧಿತ ಕ್ರೀಡಾ ಕ್ಷೇತ್ರಗಳಲ್ಲಿ ಆಟಗಾರ, ತರಬೇತುದಾರ, ಆಡಳಿತಗಾರ ಹಾಗೂ ಅಂತರರಾಷ್ಟ್ರೀಯ ತೀರ್ಪುಗಾರ (ಇಂಟರ್‌ನೇಶನಲ್ ರೆಫ್ರೀ) ಆಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ವಿಶೇಷವಾಗಿ ಪ್ರಶಂಸಿದೆ. ಮುಂಬಯಿಯ ಜುಡೋ ಕ್ಲಬ್‌ನಲ್ಲಿ ಯತೀಶ್ ಬಂಗೇರ ಅವರ ನಾಯಕತ್ವದಲ್ಲಿ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಚಾಂಪಿಯನ್‌ಗಳು ಹೊರಹೊಮ್ಮಿದ್ದು, ಶಾಲಾ ಮತ್ತು ಕಾಲೇಜು ಮಟ್ಟದ ಕ್ರೀಡಾ ವ್ಯವಸ್ಥೆಯೊಂದಿಗೆ ಅವರ ದೀರ್ಘಕಾಲದ ನಿಕಟ ಸಂಬಂಧವೂ ಇದೆ.
ಆದ್ದರಿಂದ ಇವರ ಆಯ್ಕೆ ನಡೆಸಿ ಈ ಎಲ್ಲಾ ಕಾರ್ಯಕ್ರಮಗಳನ್ನು ಏಕೀಕೃತ ರಾಷ್ಟ್ರೀಯ ಸ್ಪರ್ಧಾ ಪಿರಮಿಡ್ ವ್ಯವಸ್ಥೆಗೆ ಸಮರ್ಪಕವಾಗಿ ಸಂಯೋಜಿಸುವ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ ಎಂದು ಬಿಜಿಎಫ್‌ಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಜಯಂತಕುಮಾರ್ ಸಿಂಗ್ ತಿಳಿಸಿದ್ದಾರೆ.
ಜಯಂತಕುಮಾರ್ ಮಾತನಾಡಿ, ಯತೀಶ್ ಬಂಗೇರ ಅವರ ಕ್ರೀಡಾ ಕ್ಷೇತ್ರದ ಅಪಾರ ಅನುಭವ ಮತ್ತು ದೂರದೃಷ್ಟಿಯ ಮಾರ್ಗದರ್ಶನವನ್ನು ಬಳಸಿಕೊಂಡು ಯುವಕರು, ಶಾಲೆಗಳು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಬೀಚ್ ಕ್ರೀಡೆಗಳ ಬಲವಾದ ಮತ್ತು ಸ್ಥಿರವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವೆವು. ಅವರ ನಾಯಕತ್ವದಲ್ಲಿ ಭಾರತದಲ್ಲಿ ಮೂಲಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಬಲಿಷ್ಠ ಪ್ರತಿಭಾ ಸರಪಳಿ ನಿರ್ಮಾಣವಾಗಲಿದೆ” ಎಂದು ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now