
ಮುಂಬಯಿ, ಮಾ.31: ಬ್ಯಾಂಕ್ನ ಶಾಖೆಯನ್ನು ಸ್ಥಳಾಂತರಿಸುವುದು ಅತ್ಯಂತ ಕಷ್ಟಕರ ಹಾಗೂ ಜವಾಬ್ದಾರಿಯುತ ಕೆಲಸವಾಗಿದೆ. ಸ್ಥಳಾಂತರ ಪ್ರಕ್ರಿಯೆಯು ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗಳಿಂದ ಕೂಡಿ ಜಾಗರೂಕತೆಯಿಂದ ನೆರವೇರಿಸ ಬೇಕಾಗುತ್ತದೆ. ಬ್ಯಾಂಕಿಂಗ್ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಯಾವುದೇ ಅಡಚಣೆ ಉಂಟಾಗದಂತೆ ಶಾಖೆ ಸ್ಥಳಾಂತರ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಯೋಚಿಸಿಬೇಕಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಅತ್ಯಂತ ಗೌರವ, ವಿಶ್ವಾಸಕ್ಕೆ ಪಾತ್ರವಾದ ಮಾಡೆಲ್ ಬ್ಯಾಂಕ್ ಸುಸಂಘಟಿತ ಹಾಗೂ ಗ್ರಾಹಕ ಸೇವೆಗೆ ಧ್ವನಿಯಾದ ಬ್ಯಾಂಕ್ ಆಗಿದ್ದು, ಘಾಟ್ಕೋಪರ್ ಶಾಖೆ ಬ್ಯಾಂಕ್ನ ಅಗ್ರಗಣ್ಯ ಶಾಖೆಗಳಲ್ಲಿ ಒಂದಾಗಿದೆ. ದೈನಂದಿನ ವ್ಯವಹಾರ ಹಾಗೂ ಗ್ರಾಹಕರ ಸೇವೆಯಲ್ಲಿ ಮಹತ್ವದ ಪಾತ್ರವಹಿಸಿದ ಮಾಡೆಲ್ ಬ್ಯಾಂಕ್ ಜನಸ್ನೇಹಿ ಹಣಕಾಸು ಸಂಸ್ಥೆಯಾಗಿದೆ ಎಂದು ಮಾಡೆಲ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಡೆಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ (ಶೆಡ್ಯೂಲ್ಡ್ ಬ್ಯಾಂಕ್) ತನ್ನ ಸ್ಥಳಾಂತರಿತ ಘಾಟ್ಕೋಪರ್ ಪೂರ್ವದ ಶಾಖೆಯನ್ನು ಇಂದಿಲ್ಲಿ ಸೋಮವಾರ ಪೂರ್ವಾಹ್ನ ಸ್ಥಾನೀಯ ಪಂತ್ ನಗರದ ಮ್ಹಾಡಾ ಲೇಔಟ್ನ ಶುಭಂ ಅವೆನ್ಯೂ ಕಟ್ಟಡದಲ್ಲಿ ಶುಭಾರಂಭಗೊಳಿಸಿದ್ದು, ಆಲ್ಬರ್ಟ್ ಡಿ’ಸೋಜಾ ರಿಬ್ಬನ್ ಕತ್ತರಿಸಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಶಾಖೆ ಸ್ಥಳಾಂತರದ ವೇಳೆ ಗ್ರಾಹಕರಿಗೆ ಯಾವುದೇ ಅಸೌಕರ್ಯವಾಗದಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದು, ಗ್ರಾಹಕರಿಗೆ ಸುಧಾರಿತ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಶಾಖೆ ಸ್ಥಳಾಂತರದ ಮೂಲಕ ಗ್ರಾಹಕರಿಗೆ ಇನ್ನಷ್ಟು ಸುಗಮ ಮತ್ತು ಪರಿಣಾಮಕಾರಿ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದ್ದು, ಬ್ಯಾಂಕ್ ಪರಿವಾರದ ಸಮನ್ವಯದ ಪ್ರಯತ್ನದಿಂದ ತ್ವರಿತ ಮತ್ತು ಅನುಕೂಲಕರ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now