
ಮುಂಬಯಿ, ಫೆ.06: ಮಹಾರಾಷ್ಟ್ರ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ ಆಗಿದ್ದು ಇತ್ತೀಚೆಗೆ ವಿಧಿವಶರಾದ ಅಜಿತ್ ಪವಾರ್ಗೆ ಇಂದಿಲ್ಲಿ ಶುಕ್ರವಾರ ಸಂಜೆ ಜೋಗೇಶ್ವರಿ ಪೂರ್ವದ ಮೇಘವಾಡಿ ಇಲ್ಲಿನ ಜಿ.ಬಿ.ಪಂತ್ ಫೌಂಡೇಶನ್ ಸಭಾಂಗಣದಲ್ಲಿ ಜೋಗೇಶ್ವರಿ ಪೂರ್ವ ವಿಧಾನಸಭೆಯ ವತಿಯಿಂದ ‘ಸರ್ವ ಪಕ್ಷಗಳ ಶ್ರದ್ಧಾಂಜಲಿ ಸಭೆ’ ಆಯೋಜಿಸಿ ಶ್ರದ್ಧಾಂಜಲಿ ಕೋರಲಾಯಿತು.
ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್ಸಿಪಿ-ಶರದ್ ಪವಾರ್) ಇದರ ಮುಂಬಯಿ ಪ್ರದೇಶ ಉಪಾಧ್ಯಕ್ಷ ಚಿತ್ರಾಪು ಲಕ್ಷ್ಮಣ್ ಸಿ.ಪೂಜಾರಿ ಮತ್ತು ಅವರ ಸುಪುತ್ರ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಪರಿಮಂಡಳದ ೩ಕೆ ಪೂರ್ವ ಸಮಿತಿ ಸದಸ್ಯ, ಎನ್ಸಿಪಿ-ಎಸ್ಪಿ ಯುವ ನೇತಾರ ನಿರಂಜನ್ ಲಕ್ಷ ಣ್ ಪೂಜಾರಿ ಇವರುಗಳ ಪ್ರಧಾನ ಸಂಯೋಜನೆಯಲ್ಲಿ ಆಯೋಜಿಸಲ್ಪಟ್ಟಿತು.

ಶ್ರದ್ಧಾಂಜಲಿ ಸಭೆಯಲ್ಲಿ ರಾಷ್ಟ್ರ ಮತ್ತು ಮಹಾರಾಷ್ಟ್ರದ ರಾಜಕೀಯದಲ್ಲಿ ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದ ತುಂಬಲಾಗದ ನಷ್ಟವಾಗಿದೆ. ಅವರ ನೆನಪಿಗೆ ನಮನ ಸಲ್ಲಿಸಲು ಈ ಭಾವನಾತ್ಮಕ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ ಎಂದು ನಿರಂಜನ್ ಎಲ್.ಪೂಜಾರಿ ತಿಳಿಸಿದರು.
ಗಜಾನನ ಲಾಡ್, ವಿನಯ್ ಸಾಳ್ವಿ, ಕಾಂಚನ್ ಸಾಳುಂಖೆ, ಅಭಿಷೇಕ್ ಕದಂ ಇವರುಗಳ ಸಂಯೋಜನೆ ಮತ್ತು ಆಲ್-ರೌಂಡ್ ಅಜಿತ್ ದಾದಾ ಲವರ್ಸ್ ತಂಡವು ಹಮ್ಮಿಕೊಂಡ ಶೋಕಸಭಾ ಸಭೆಯಲ್ಲಿ ಜೋಗೇಶ್ವಾರಿ ಪೂರ್ವದ ಶಾಸಕ ಅನಂತ್ ಬಾಳಾ ನಾರ್ (ಶಿವಸೇನಾ-ಯುಬಿಟಿ), ಬಿಎಂಸಿ ನಗರಸೇವಕರಾದ ಅಜಿತ್ ಬಾಲಕೃಷ್ಣ ರಾಣೆ (ದಿಂಡೋಶಿ), ಶಿವಾನಿ ಶೈಲೇಶ್ ಪರಬ್ (ಶಂಕರವಾಡಿ), ಮಾನ್ಸಿ ಮಧುಕರ್ ಜುವತ್ಕರ್ (ಶಿವಸೇನೆ-ಯುಬಿಟಿ), ವಿದ್ಯಾ ಭಾರತ್ ಆರ್ಯ(ಎಂಎನ್ಎಸ್), ಲೋನಾ ಆರ್.ರವಾತ್ (ಡಿಸೋಜಾ), ಚಿತ್ರಾಪು ಲಕ್ಷ್ಮಣ್ ಸಿ.ಪೂಜಾರಿ, ಇನ್ನಿತರ ರಾಜಕಾರಣಿಗಳು, ಗಣ್ಯರನೇಕರು ಹಾಜರಿದ್ದು ಆಗಲಿದ ದಿವ್ಯಾತ್ಮಕ್ಕೆ ಬಾಷ್ಪಾಂಜಲಿ ಕೋರಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now