ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಪ್ರಶಸ್ತಿಗೆ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ರಚಿತ ‘ಅದೆಲ್ಲಾ ಬಿಟ್ಟು’ ಆಯ್ಕೆ
????????????????????????????????????

ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಪ್ರಶಸ್ತಿಗೆ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ರಚಿತ ‘ಅದೆಲ್ಲಾ ಬಿಟ್ಟು’ ಆಯ್ಕೆ

0Shares

ಮುಂಬಯಿ, ಫೆ.೦೫: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಜನವರಿಯಿಂದ ಡಿಸೆಂಬರ್ ೨೦೨೪ರ ಅಂತ್ಯದವರೆಗೆ ಪ್ರಕಟವಾದ ಒಟ್ಟು ೫೪ ಪ್ರಕಾರದ ದತ್ತಿಗಳ ೫೮ ಪ್ರಶಸ್ತಿಗಳಿಗೆ ಕೃತಿಗಳನ್ನು ಬರಹಗಾರರಿಂದ ಆಹ್ವಾನಿಸಿದ್ದು ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಮುಂಬಯಿಯಲ್ಲಿನ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ‘ಅದೆಲ್ಲಾ ಬಿಟ್ಟು’ ಕಥಾಸಂಕಲನವು ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ.

ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು ೯೦೦ ಕೃತಿಗಳು ಸ್ಪರ್ಧೆಗೆ ಬಂದಿದ್ದು, ಡಾ| ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ೧೯ ಜನ ಪರಿಣಿತ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಆಯಾ ಪ್ರಕಾರಗಳಲ್ಲಿ ವಿದ್ವತ್ ಹೊಂದಿದ ಸದಸ್ಯರುಗಳ ೫ ತಂಡಗಳನ್ನು ರಚಿಸಿ ಪುಸ್ತಕಗಳನ್ನು ಆಯ್ಕೆ ಮಾಡಲಾಯಿತು ಎಂದು ಆಡಳಿತಾಧಿಕಾರಿ ಕೆ.ಎಂ ಗಾಯಿತ್ರಿ ತಿಳಿಸಿದ್ದಾರೆ.

ಶ್ರೀನಿವಾಸ ಜೋಕಟ್ಟೆ ಅವರು ಈಗಾಗಲೇ ೪೬ ಕೃತಿಗಳನ್ನು ಪ್ರಕಟಿಸಿದ್ದು ಅವರ ಏಳು ಕೃತಿಗಳಿಗೆ ಈ ತನಕ ವಿವಿಧ ಪ್ರಶಸ್ತಿಗಳು ದೊರೆತಿವೆ. ಮಂಗಳೂರು ವಿವಿ ದ್ವಿತೀಯ ಬಿಕಾಂ ಪಠ್ಯದಲ್ಲೂ ಇವರ ಕತೆ ಆಯ್ಕೆಯಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಸೇತು ಪ್ರಶಸ್ತಿ,ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ,, ವಿಕಾಸ ಪುಸ್ತಕ ಬಹುಮಾನ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ , ಕಸಾಪದ ಕೆ ವಾಸುದೇವಾಚಾರ್ ದತ್ತಿಪ್ರಶಸ್ತಿ ಅವರ ಕೃತಿಗಳಿಗೆ ಈ ತನಕ ದೊರೆತಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now