
ಮುಂಬಯಿ, ಫೆ.03: ನ್ಯಾಶನಲ್ ಕೋ.ಆಪರೇಟಿವ್ ಬ್ಯಾಂಕ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ), ನ್ಯಾಶನಲ್ ಫೆಡರೇಶನ್ ಆಫ್ ಅರ್ಬನ್ ಕೋ.ಆಪರೇಟಿವ್ ಬ್ಯಾಂಕ್ಸ್ (ಎನ್‌ಎಎಫ್‌ಸಿಯುಬಿ), ಕರ್ನಾಟಕ ಅರ್ಬನ್ ಕೋ.ಆಪರೇಟಿವ್ ಬ್ಯಾಂಕ್ಸ್ ಫೆಡರೇಶನ್ (ಕೆಎಸ್‌ಯುಸಿಬಿಎಫ್) ಮತ್ತು ಈಪ್ಲಸ್ ಇಂಟೆಲೆಕ್ಚುವಲ್ ವಿಡಿಯಾ ಸಂಯುಕ್ತವಾಗಿ ಕಪೋಲಿ ಅಲ್ಲಿನ ನೊವೆಟಾಲ್ ತಾರಾ ಹೊಟೇಲ್ ಸಭಾಗೃಹದಲ್ಲಿ ಕಳೆದ ಶನಿವಾರ ಆಯೋಜಿಸಿದ್ದ ಸಹಕಾರಿ ಬ್ಯಾಂಕುಗಳ ಸಮಾವೇಶದಲ್ಲಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ‘ಐಕಾನಿಕ್ ಲೀಡರ್’ ಯುಥ್ ಚೇರ್ಮನ್ ಅವಾರ್ಡ್ 2025 ಗೌರವ ಪ್ರದಾನಿಸಿ ಗೌರವಿಸಿತು.
ಬ್ಯಾಂಕಿಂಗ್ ಕ್ಷೇತ್ರದ ಸಾಧಕ ದಿಗ್ಗಜರ ಉಪಸ್ಥಿತಿಯಲ್ಲಿ ಇಂಡಿಯನ್ ಬ್ಯಾಂಕ್’ಸ್ ಅಸೋಸಿಯೇಶನ್ (ಐಬಿಎ) ಇದರ ಉಪ ಮುಖ್ಯ ಕಾರ್ಯನಿರ್ವಾಹಕ ಗೋಪಾಲ್ ಮುರಳಿ ಭಗತ್ ಅವರು ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಇವರಿಗೆ ಪ್ರಶಸ್ತಿ ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಬಿ.ಸಾಲಿಯಾನ್ ಮತ್ತು ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (ಸಿಐಎಸ್‌ಒ) ಭಾಸ್ಕರ್ ರಾವ್ ಉಪಸ್ಥಿತರಿದ್ದರು.
ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ಯುವ ನಾಯಕತ್ವ, ದೂರದೃಷ್ಟಿ ಮತ್ತು ನಾವೀನ್ಯತೆಗೆ ನೀಡುವ ಗುರುತಿಸುವಿಕೆ ಆಗಿದೆ. ಕಿರಿಯ ವಯಸ್ಸಿನಲ್ಲೇ ಕಾರ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಬ್ಯಾಂಕ್‌ನ ಮೇಲೆ ಗ್ರಾಹಕರ ನಂಬಿಕೆ ಮತ್ತು ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸೂರ್ಯಕಾಂತ್‌ರ ಗುರುತರ ಕೊಡುಗೆಯನ್ನು ಪ್ರಶಸ್ತಿ ಮಂಡಳಿ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಯುವ ಕಾರ್ಯಾಧ್ಯಕ್ಷರ ನಾಯಕತ್ವದಲ್ಲಿ ಬ್ಯಾಂಕ್ ಆಧುನಿಕ ತಂತ್ರಜ್ಞಾನ ಅಳವಡಿಕೆ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ವಿಸ್ತರಣೆ ಮತ್ತು ಗ್ರಾಹಕ ಸಂತೃಪ್ತಿಯಲ್ಲಿ ಗಮನಾರ್ಹ ಪ್ರಗತಿ ಭಾರತ್ ಬ್ಯಾಂಕ್ ಸಾಧಿಸಿದೆ. ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ಯುವಶಕ್ತಿ ಮತ್ತು ಆಧುನಿಕ ಚಿಂತನೆಯ ಸಂಕೇತವಾಗಿ ಅವರು ಬೆಳೆದಿದ್ದು ಜೊತೆಗೆ ಗ್ರಾಹಕರೂ ಪಥಸಂಸ್ಥೆಯನ್ನೂ ಮುನ್ನಡೆಸುತ್ತಿರುವುದನ್ನು ಮನವರಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಮಾವೇಶದ ಸಂಘಟಕರು ತಿಳಿಸಿದ್ದಾರೆ.
ಪುರಸ್ಕೃತ ಕಾರ್ಯಾಧ್ಯಕ್ಷರ ಪ್ರತಿಕ್ರಿಯೆ:
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಸುವರ್ಣ, ಈ ಪ್ರಶಸ್ತಿಯು ನಮ್ಮ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಹಾಗೂ ಸಂಪೂರ್ಣ ತಂಡದ ಶ್ರಮ ಮತ್ತು ಸಮರ್ಪಣೆಯ ಫಲವಾಗಿದೆ. ನಾವು ಯುವಪೀಳಿಗೆಗೆ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಜೊತೆಗೆ, ಸಾಂಪ್ರದಾಯಿಕ ಸಹಕಾರತತ್ವಗಳನ್ನು ಕಾಪಾಡಿ ಕೊಳ್ಳಲು ಬದ್ಧರಾಗಿದ್ದೇವೆ ಹಾಗೂ ಡಿಜಿಟಲ್ ಪರಿವರ್ತನೆ, ಸೈಬರ್ ಸುರಕ್ಷತೆ ಮತ್ತು ಗ್ರಾಹಕ ಕೇಂದ್ರಿತ ಸೇವೆಗಳಲ್ಲಿ ನಾವು ಅತ್ಯಾಧುನಿಕ, ಅವಿಷ್ಕಾರಿತ ತಂತಜ್ಞಾನದ ಸದ್ಭಳಕೆ ಮಾಡುತ್ತಿದ್ದೇವೆ. ಪ್ರತಿಯೊಬ್ಬ ಗ್ರಾಹಕನಿಗೂ ಸುರಕ್ಷಿತ, ವೇಗವಾದ, ಮತ್ತು ವಿಶ್ವಾಸಾರ್ಹ ಬ್ಯಾಂಕಿಂಗ್ ಅನುಭವವನ್ನು ನೀಡುವುದೇ ನಮ್ಮ ಉದ್ದೇಶವಾಗಿದೆ. ಪ್ರಶಸ್ತಿಗಳು ಕೇವಲ ವೈಯಕ್ತಿಕ ಗೌರವಗಳಷ್ಟೇ ಅಲ್ಲ, ಸಹಕಾರಿ ಬ್ಯಾಂಕಿಂಗ್ ವಲಯದ ಸಮಗ್ರ ಉತ್ಕೃಷ್ಟತೆಯ ಸಂಕೇತವಾಗಿದೆ. ವಿಶೇಷವಾಗಿ ಸಾಮಾನ್ಯ ಜನತೆಗೆ ಬ್ಯಾಂಕಿಂಗ್ ಸೇವೆಗಳನ್ನು ಲಭ್ಯಗೊಳಿಸುವಲ್ಲಿ ಇವುಗಳ ಪಾತ್ರ ಅಪರಿಮಿತವಾಗಿದೆ. ಈ ಗೌರವವು ನಮ್ಮನ್ನು ಇನ್ನೂ ಹೆಚ್ಚಿನ ಜವಾಬ್ದಾರಿಯೊಂದಿಗೆ ಮುಂದುವರಿಯಲು ಪ್ರೇರೇಪಿಸುತ್ತದೆ ಎಂದರು.
ಡಿಜಿಟಲ್ ಯುಗದಲ್ಲಿ ಸಹಕಾರಿ ಬ್ಯಾಂಕುಗಳು ತಂತ್ರಜ್ಞಾನ ಅಳವಡಿಕೆ, ಸೈಬರ್ ಸುರಕ್ಷತೆ ಮತ್ತು ಗ್ರಾಹಕ ಸೇವೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಬೇಕಾಗಿದೆ. ಆ ದಿಶೆಯಲ್ಲಿ ಭಾರತ್ ಬ್ಯಾಂಕ್ ಅಳವಡಿಸಿ ಕೊಂಡಿರುವ ಹೆಜ್ಜೆಗಳಿಗೆ ಇಂತಹ ಪ್ರಶಸ್ತಿಗಳು ರಾಷ್ಟ್ರೀಯ ಮಾನ್ಯತೆಯಾಗಿದೆ. ಯುವನಾಯಕತ್ವ ಮತ್ತು ಆಧುನಿಕ ತಂತ್ರಜ್ಞಾನದ ಸಂಯೋಜನೆಯು ಸಹಕಾರಿ ವಲಯದ ಭವಿಷ್ಯಕ್ಕೆ ಮಾರ್ಗದರ್ಶಿಯಾಗುತ್ತದೆ. ಭಾರತ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ, ತಾಂತ್ರಿಕ ನಾವೀನ್ಯತೆ, ಮತ್ತು ಸುರಕ್ಷತೆಯನ್ನು ಒದಗಿಸಲು ಬದ್ಧವಾಗಿದೆ. ಈ ಪ್ರಶಸ್ತಿಗಳು ಬ್ಯಾಂಕ್‌ನ ಉತ್ಕೃಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲುಗಲ್ಲು ಆಗಿದೆ. ಈ ಮಹತ್ವದ ಸಾಧನೆ ಶಕ್ತಿಶಾಲಿ ನಾಯಕತ್ವ, ತಂಡದ ಸಮನ್ವಯ ಹಾಗೂ ಸಂಪೂರ್ಣ ಭಾರತ್ ಬ್ಯಾಂಕ್ ಪರಿವಾರದ ನಿಷ್ಠೆ ಮತ್ತು ಪರಿಶ್ರಮದ ಪ್ರತಿಬಿಂಬವಾಗಿದೆ. ಸಹಕಾರಿ ಬ್ಯಾಂಕಿಂಗ್ ಭಾರತದ ಆಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಬ್ಯಾಂಕ್ ಮುಖೇನ ಇನ್ನೂ ಒಟ್ಟಾಗಿ ನಾವು ಬೆಳೆಯುತ್ತೇವೆ. ಒಟ್ಟಾಗಿ ನಾವು ಮುನ್ನಡೆಯುತ್ತೇವೆ ಎಂಬ ಧ್ಯೇಯದೊಂದಿಗೆ ಸಾಗುತ್ತೇವೆ ಎಂದೂ ಸೂರ್ಯಕಾಂತ್ ಸುವರ್ಣ ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now