ಮುಂಬಯಿಯಲ್ಲಿ ಹೆಗ್ಗಡೆ ಸಮಾಜದ ಸಾಧನೆ ಸರ್ವೋತ್ಕೃ ಷ್ಟವಾಗಿದೆ

ಮುಂಬಯಿಯಲ್ಲಿ ಹೆಗ್ಗಡೆ ಸಮಾಜದ ಸಾಧನೆ ಸರ್ವೋತ್ಕೃ ಷ್ಟವಾಗಿದೆ

0Shares

ಮುಂಬಯಿ, ಫೆ.೦೧: ಮುಂಬಯಿ ಬದುಕು ಅಂದರನೇ ಬಿಡುವಿಲ್ಲದ ಜೀವನವಾಗಿದೆ. ಆ ಮಧ್ಯೆಯೂ ಹೆಗ್ಗಡೆ ಸಮಾಜದವ ಈ ಮಟ್ಟದ ಸಾಧನೆ ಅದ್ಭುತ ಕಾರ್ಯ ಕ್ಷಮತೆಯಾಗಿದೆ. ಇದು ಸ್ವಸಮಾಜದ ಮೇಲಿನ ನಿಮ್ಮ ಪ್ರೀತಿ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಇಂತಹ ಬಾಂಧವ್ಯವೇ ಸಮುದಾಯದ ಸಧೃಢತೆ ಆಗಿದೆ. ಸಮಾಜ ಮತ್ತು ಸಂಘಗಳು ಸಮಾನತೆಯಿಂದ ಸಾಗಿದಾಗಲೇ ಸಮುದಾಯಗಳ ಏಳಿಗೆ ಸುಲಭವಾಗುವುದು. ಇದು ಒಗ್ಗಟ್ಟಿನ ಮಹತ್ವವನ್ನು ಸಾರುತ್ತದೆ. ಇದಕ್ಕೆ ನಮ್ಮವರ ಮುಂಬಯಿ ಸಂಘದ ಸಾಧನೆ ಸರ್ವೋತ್ಕೃಷ್ಟವಾಗಿದೆ ಎಂದು ಯುನೈಟೆಡ್ ಕಿಂಗ್‌ಡಮ್‌ನ (ಇಂಗ್ಲೆಂಡ್) ಉದ್ಯಮಿ ಚಂದ್ರಹಾಸ್ ಹೆಗ್ಡೆ ಲಂಡನ್ ತಿಳಿಸಿದರು.

ಇಂದಿಲ್ಲಿ ಭಾನುವಾರ ನವಿಮುಂಬಯಿ ಐರೋಲಿ ಇಲ್ಲಿನ ಹೆಗ್ಗಡೆ ಭವನದ ಐತಮಜಲು ಶ್ರೀಮತಿ ಜಯಂತಿ ವಿತ್ತಲ ಹೆಗ್ಡೆ ಸ್ಮಾರಕ ಸಭಾಹೃಹದಲ್ಲಿ ಹೆಗ್ಗಡೆ ಸೇವಾ ಸಂಘ (ರಿ.) ಮುಂಬಯಿ ಸಂಭ್ರಮಿಸಿದ ಅರ್‍ವತ್ತೈದನೇ ವಾರ್ಷಿಕೋತ್ಸವ ಮತ್ತು ವಾರ್ಷಿಕ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಬೆಳಗಿಸಿ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಚಂದ್ರಹಾಸ್ ಹೆಗ್ಡೆ ಮಾತನಾಡಿದರು.

ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ಮನೋಜ್ ಹೆಗ್ಡೆ ಇವರ ಸಭಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಪ್ರಾಂಶುಪಾಲೆ ಶೀಲ ಶಿವರಾಮ ಹೆಗ್ಡೆ ವೇಣೂರು, ಗೌರವಾನ್ವಿತ ಅತಿಥಿಗಳಾಗಿ ಧನಂಜಯ ಹೆಗ್ಡೆ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಹೆಗ್ಗಡೆ ಸಮಾಜದ ಉಪಾಧ್ಯಕ್ಷ ರತ್ನಾಕರ್ ಎಂ.ಹೆಗ್ಡೆ ಮೂಡಬಿದ್ರಿ ಹಾಗೂ ಸಂಘದ ಗೌರವಾಧ್ಯಕ್ಷ ಆನಂದ್ ಹೆಗ್ಡೆ, ಉಪಾಧ್ಯಕ್ಷ ಅರುಣ್‌ಕುಮಾರ್ ಎನ್.ಹೆಗ್ಡೆ, ಗೌ| ಪ್ರ| ಕಾರ್ಯದರ್ಶಿ ಸುರೇಂದ್ರನಾಥ್ ಹೆಗ್ಡೆ, ಗೌ| ಪ್ರ| ಕೋಶಾಧಿಕಾರಿ ಸಿಎ| ಸುರೇಶ್ ಹೆಗ್ಡೆ, ಜೊತೆ ಕಾರ್ಯದರ್ಶಿ ರೂಪೇಶ್ ವಿ.ಹೆಗ್ಡೆ, ಜೊತೆ ಖಜಾಂಚಿ ಹರೀಶ್ ವಿ.ಹೆಗ್ಡೆ, ಮಹಿಳಾ ವಿಭಾಗಧ್ಯಕ್ಷೆ ಛಾಯಾ ಆರ್.ಹೆಗ್ಡೆ, ಯುವ ವಿಭಾಗಧ್ಯಕ್ಷ ಸುನೀಲ್ ಆರ್.ಹೆಗ್ಡೆ ವೇದಿಕೆಯಲ್ಲಿ ಆಸೀನರಾಗಿದ್ದರು.

ಹೆಗ್ಗಡೆ ಸೇವಾ ಸಂಘಮುಂಬಯಿ ಇದರ ಮಾಜಿ ಕೋಶಾಧಿಕಾರಿಯಾಗಿ ಸೇವೆಸಲ್ಲಿಸಿದ ರತ್ನಾಕರ್ ಎಂ.ಹೆಗ್ಡೆ ಇವರಿಗೆ ‘ಹಿರಿಯ ನಾಗರಿಕ ಪ್ರಶಸ್ತಿ’ ಮತ್ತು ಸುಂದರಿ ಬಾಬು ಹೆಗ್ಡೆ ಘಾಟ್ಕೋಪರ್ ಇವರಿಗೆ ‘ದಿ| ಶ್ರೀ ಶೇಠ್ ಬಾಬು ಹೆಗ್ಡೆ ಸ್ಮರಣಾರ್ಥ’ ಪ್ರಶಸ್ತಿ ಹಾಗೂ ರಂಜನಿ ವಸಂತ್ ಹೆಗ್ಡೆ ಕಲ್ಲಬೆಟ್ಟು ಇವರಿಗೆ ‘ದಿ| ಶ್ರೀ ಶೇಠ್ ಬಾಬು ಹೆಗ್ಡೆ ಸ್ಮರಣಾರ್ಥ’ ಪ್ರಶಸ್ತಿ (ಸ್ಮಾರಣಾರ್ಥ ಮರಣೋತ್ತರ ಪ್ರಶಸ್ತಿಗಳು) ಪ್ರದಾನಿಸಿ ಗೌರವಿಸಲಾಯಿತು. ಬಾಲಕೃಷ್ಣ ಹೆಗ್ಡೆ (ಮಂಜುಳಾ ಹೆಗ್ಡೆ ಸಹಿತ), ಏಳ್ನಾಡುಗುತ್ತು ರತ್ನಾಕರ ಹೆಗ್ಡೆ ಇವರನ್ನು ಸನ್ಮಾನಿಸಲಾಗಿದ್ದು, ಅಂತೆಯೇ ಸಂಘವು ವಾರ್ಷಿಕವಾಗಿ ಸಮಾಜದ ಅರ್ಹ ವಿದ್ಯಾಥಿಗಳಿಗೆ ಕೊಡಮಾಡುವ ಕೊಡುಗೈದಾನಿಗಳ ಸಹಯೋಗದ ಸ್ಮಾರಕ ಶಿಕ್ಷಣ ನಿಧಿ, ಪ್ರಮಾಣಪತ್ರ, ಪುಷ್ಫ್ಪಗಳನ್ನು ಅತಿಥಿವರ್ಯರು ವಿತರಿಸಿ ಶುಭಾರೈಸಿದರು

ರತ್ನಾಕರ್ ಹೆಗ್ಡೆ ಮಾತನಾಡಿ ಅಂದಿನ ಮತ್ತು ಇಂದಿನ ಕಾಲಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಸಂಘದ ಈ ಮಟ್ಟದ ಬೆಳವಣಿಗೆ ಶ್ಲಾಘನೀಯ. ಸ್ವಾರ್ಥದ ಬೇಕುಗಳನ್ನು ದೂರವಿಡಿಸಿ ಸಮಾಜಕ್ಕೆ ಕೊಡಬೇಕು ಅನುವುದನ್ನು ರೂಢಿಸಿ ಜೀವನದ ಸವಿಯನ್ನು ಅನುಭವಿಸಿ. ಸಮಾಜವನ್ನು ಮುನ್ನಡೆಸೋಣ ಎಂದರು.

ಇಲ್ಲಿನ ಈ ನನ್ನ ಗೌರವ ನನ್ನ ಸೌಭಾಗ್ಯವಾಗಿದೆ. ನಮ್ಮನಲ್ಲಿನ ಪ್ರತಿಭ್ವಾನಿತರು ಸಮಾಜದ ಹೆಗ್ಗಳಿಕೆಯಾಗಿದ್ದಾರೆ. ಹೆಗ್ಗಡೆ ಅನ್ನುವ ಸಂಸ್ಕೃತಿಯ ಮೂಲ ನಾವು ತಿಳಿಯುವ ಮತ್ತು ಭಾವೀ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ. ಅದಕ್ಕೆ ಸ್ವಸಮಾಜದ ಇಂತಹ ಉತ್ಸಹಗಳು ಪೂರಕವಾಗಿದೆ ಎಂದ ಧನಂಜಯ ಹೆಗ್ಡೆ ಹೇಳಿದರು.

ಶೀಲ ಹೆಗ್ಡೆ ಮಾತನಾಡಿ ಮುಂಬಯಿಯಲ್ಲಿ ಬೃಹತ್ ಹೆಗ್ಗಡೆ ಭವನ ರೂಪಿಸಿದ್ದು ನಮ್ಮವರದ್ದು ದೊಡ್ಡ ಸಾಧನೆಯಾಗಿದೆ. ಸಣ್ಣ ಸಮುದಾಯವಾದ ನಮ್ಮವರಿಂದ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೂ ಒದಗಿಸಿದ ವಿದ್ಯಾನಿಧಿಯೂ ಸಾಮಾನ್ಯ ಸಂಗತಿಯಲ್ಲ. ಆದ್ದರಿಂದಲೇ ಮುಂಬಯಿಯಲ್ಲಿನ ಹೆಗ್ಗಡೆ ಸಮಾಜ ಎಲ್ಲರ ಆಶಾಕಿರಣವಾಗಿದೆ ಎಂದರು.

ನಮಗೆ ಕರ್ಮಭೂಮಿ ಮುಂಬಯಿಯಲ್ಲಿ ಸ್ವ-ದೇವಸ್ಥಾನವಿಲ್ಲ, ದೈವ ದೇವರುಗಳ ಗುಡಿಗಳಿಲ್ಲಡ್. ನಮ್ಮದು ಏನಿದ್ದರೂ ತವರೂರಲ್ಲಿದೆ. ಆದರೆ ಮುಂಬಯಿಯಲ್ಲಿ ಹೆಗ್ಗಡೆ ಭವನವೇ ನಮ್ಮ ದೇಗುಲವಾಗಿದೆ. ಇಲ್ಲೇ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳು ನಡೆಸಲ್ಪಡುತ್ತಿವೆ. ಕಳೆದ ಸುಮಾರು ೭೮ ವರ್ಷಗಳಿಂದ ನಮ್ಮ ಹಿರಿಯರು ಮತ್ತು ನಾವು ಸಾಧ್ಯವಾದಷ್ಟು ಸೇವೆ ಮಾಡಿ ಹೆಗ್ಗಡೆ ಸಮಾಜದ ಅಭ್ಯುದಯಕ್ಕ್ಕೆ ಶ್ರಮಿಸಿದ್ದೇವೆ. ಮುಂದಿನ ಜನಾಂಗ ಇನ್ನಷ್ಟು ಶ್ರಮಿಸಿ ಸಮಾಜವನ್ನು ಮುನ್ನಡೆಸುವ ಆಶಯ ನಮ್ಮದಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಮನೋಜ್ ಹೆಗ್ಡೆ ನುಡಿದರು.

ಅಧ್ಯಕ್ಷ ಮನೋಜ್ ಹೆಗ್ಡೆ ಪದಾಧಿಕಾರಿಗಳನ್ನೊಳಗೊಂಡು ಬೆಳಿಗ್ಗೆ ಕುಲದೇವರಾದ ವೀರ ಮಾರುತಿ ದೇವರನ್ನು ಸ್ತುತಿಸಿ ದೀಪಹಚ್ಚಿ ದಿನಪೂರ್ತಿಯ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಧಾರ್ಮಿಕ ಪೂಜಾಧಿಗಳಾಗಿ ಬೆಳಿಗ್ಗೆ ಗಣಹೋಮ ನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಸಲಾಗಿದ್ದು ವಿದ್ವಾನ್ ಗುರುಪ್ರಸಾದ್ ಭಟ್ ತನ್ನ ಪೌರೋಹಿತ್ಯದಲ್ಲಿ ಮಹಾಪೂಜೆ ನಡೆಸಿ ಮಂಗಳಾರತಿಗೈದು ತೀರ್ಥಪ್ರಸಾದ ವಿತರಿಸಿ ಹರಸಿದರು. ಉಷಾ ಶಂಕರ್ ಹೆಗ್ಡೆ ಬೋರಿವಿಲಿ ಮತ್ತು ಭಾರತಿ ಮೋಹನ್‌ದಾಸ್ ಹೆಗ್ಡೆ ಥಾಣೆ ಹಾಗೂ ಪ್ರಜ್ಞಾ ಸುನೀಲ್ ಹೆಗ್ಡೆ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು

ಸಂಘದ ಮಾಜಿ-ಹಾಜಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಮತ್ತು ಸದಸ್ಯರನೇಕರು ಹಾಜರಿದ್ದು, ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಸಂಘದ ಮಕ್ಕಳು, ಮಹಿಳೆಯರು ಮತ್ತು ಸದಸ್ಯರು ಸಾಂಸ್ಕೃತಿಕ ವೈಭವವನ್ನು ಪ್ರಸ್ತುತಪಡಿಸಿದರು.ವಂದೇ ಮಾತರಂ ಭಾರತದ ರಾಷ್ಟ್ರೀಯ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಆದಿಗೊಳಿಸಲಾಯಿತು. ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ಪ್ರಭಾ ಹೆಗ್ಡೆ, ಡಾ| ನಯನಾಂಬಿಕ ಎಸ್.ಹೆಗ್ಡೆ, ಕೌಶಲ್ಯ ಹೆಗ್ಡೆ ಮತ್ತು ನಂದಿನಿ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಪಗುಚ್ಫ ಗಳನ್ನೀಡಿ ಗೌರವಿಸಿದರು. ಸಿಎ| ಸುರೇಶ್ ಹೆಗ್ಡೆ ಸಂಘದ ವಾರ್ಷಿಕ ವರದಿ ವಾಚಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಸವಿತಾ ಹೆಗ್ಡೆ ಪ್ರತಿಭಾನ್ವಿತರ ಮತ್ತು ಅರುಣ್‌ಕುಮಾರ್ ಎನ್.ಹೆಗ್ಡೆ ಗೌರಹ್ವಾನಿತರ ಯಾದಿ ವಾಚಿಸಿದರು. ತಾರಮತಿ ಹೆಗ್ಡೆ, ಸಜ್ಞ ಸುನೀಲ್ ಹೆಗ್ಡೆ, ಪ್ರಭಾ ಹೆಗ್ಡೆ ಥಾಣೆ, ಶುಭ ಹೆಗ್ಡೆ, ಅಪೂರ್ವ ಸಂತೋಷ್ ಹೆಗ್ಡೆ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು. ಸುಜತಾ ಹೆಗ್ಡೆ ಸನ್ಮಾನಿತರ ಪರ ಅಭಿವಂದಿಸಿದರು. ಮಾಧ್ಯಮ ಸಂಚಾಲಕ ಲ| ಮುರಳೀಧರ್ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಭಾ ಹೆಗ್ಡೆ ವಂದನಾರ್ಪಣೆಗೈದರು.

ಸಂಘದ ಮಾಜಿ-ಹಾಜಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಮತ್ತು ಸದಸ್ಯರನೇಕರು ಹಾಜರಿದ್ದು, ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಸಂಘದ ಮಕ್ಕಳು, ಮಹಿಳೆಯರು ಮತ್ತು ಸದಸ್ಯರು ಸಾಂಸ್ಕೃತಿಕ ವೈಭವವನ್ನು ಪ್ರಸ್ತುತಪಡಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now