
ಮುಂಬಯಿ, ಜ.26: ಇತ್ತೀಚೆಗೆ ನಡೆದ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಚುನಾವಣೆಯಲ್ಲಿ ಸ್ಥಾನೀಯವಾಗಿ ಹೊಸದಾಗಿ ಚುನಾಯಿತರಾದ ಕಾರ್ಪೋರೇಟರ್‌ಗಳಾದ ಅಂಕಿತ್ ಸುನಿಲ್ ಪ್ರಭು (ವಾರ್ಡ್ 54), ಸುಹಾಸ್ ವಾಡ್ಕರ್ (ವಾರ್ಡ್ 41) ಮತ್ತು ಯೋಗಿತಾ ಪ್ರಶಾಂತ್ ಕದಂ (ವಾರ್ಡ್ 37) ಇವರು ಮಲಾಡ್ ಪೂರ್ವದ ತಾನಾಜಿನಗರ ಕುರಾರ್ ವಿಲೇಜ್‌ನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರಕ್ಕೆ ಭೇಟಿ ನೀಡಿದರು.
ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ ಉಪಸ್ಥಿತ ಪದಾಧಿಕಾರಿಗಳನ್ನೊಳಗೊಂಡು ಮಂದಿರಕ್ಕೆ ಬರಮಾಡಿಕೊಂಡರು. ಬಳಿಕ ಕಾರ್ಪೋರೇಟರ್‌ಗಳು ಸನ್ನಿಧಿಯಲ್ಲಿನ ಶ್ರೀ ದುರ್ಗಾಪರಮೇಶ್ವರಿಗೆ ಪೂಜೆ ನೆರವೇರಿಸಿ ಗೆಲುವಿಗಾಗಿ ವಂದಿಸಿದರು. ಮಂದಿರದ ಪ್ರಧಾನ ಅರ್ಚಕರಾದ ಸೂಡ ರಾಘವೇಂದ್ರ ಭಟ್ ಅವರು ತೀರ್ಥ ಪ್ರಸಾದವನ್ನಿತ್ತು ಅನುಗ್ರಹಿಸಿದರು.
ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ, ಗೌ| ಪ್ರ| ಕಾರ್ಯದರ್ಶಿ ಸೋಮಪ್ಪ ಬಿ.ಕೋಟ್ಯಾನ್, ಗೌ| ಕೋಶಾಧಿಕಾರಿ ಬಾಬು ಎಂ.ಸುವರ್ಣ, ಮತ್ತು ಸಮಿತಿ ಸದಸ್ಯರು ನೂತನ ನಗರಸೇವಕರಿಗೆ ಹಾರೈಸಿ ಮಾತೆಯ ಅನುಗ್ರಹವು ಸಮಗ್ರತೆ ಮತ್ತು ಶಕ್ತಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸುವ ಅವರ ಪ್ರಯಾಣಕ್ಕೆ ಮಾರ್ಗದರ್ಶನ ನೀಡಲಿ ಎನ್ನುತ್ತಾ ಯಶಸ್ಸನ್ನು ಮತ್ತು ಮುಂದೆ ಪರಿಣಾಮಕಾರಿ ನಾಯಕತ್ವವನ್ನು ಹಾರೈಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now