ಆಟೋಟ ಸ್ಪರ್ಧೆ ತನ್ನ ಲಕ್ಷವನ್ನು ನಿರ್ಧರಿಸಿ ಜೀವನಕ್ಕೆ ಸ್ಫೂರ್ತಿ ನೀಡುತ್ತದೆ : ಶ್ರೀನಿವಾಸ್ ಸಾಫಲ್ಯ

ಆಟೋಟ ಸ್ಪರ್ಧೆ ತನ್ನ ಲಕ್ಷವನ್ನು ನಿರ್ಧರಿಸಿ ಜೀವನಕ್ಕೆ ಸ್ಫೂರ್ತಿ ನೀಡುತ್ತದೆ : ಶ್ರೀನಿವಾಸ್ ಸಾಫಲ್ಯ

0Shares

ಮುಂಬಯಿ, ಜ.೨೧: ಸಾಫಲ್ಯ ಕ್ರೀಡಾ -ಸ್ಫರ್ಧೆ -೨೦೨೬ ಕಳೆದ ರವಿವಾರ ಕಾಂದಿವಲಿ ಪಶ್ಚಿಮದಲ್ಲಿನ ಪೊಯಿಸರ್ ಜಿಮ್‌ಖಾನ್ ಇಲ್ಲಿ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಅಧ್ಯಕ್ಷತೆಯಲ್ಲಿ ಜರಗಿತು. ಬೆಳಿಗ್ಗೆ ನಡೆದ ಮಾರ್ಚ್ ಪಾಸ್ ನಂತರ ದೀಪ ಪ್ರಜ್ವಲನೆ ಹಾಗು ಪ್ರಾರ್ಥನೆಯ ಮುಖೇನ ಆಟೋಟ ಸ್ಫರ್ಧೆ ಪ್ರಾರಂಭಗೊಂಡಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಗ್ನೇಶ್ ಮಂಜೇಶ್ವರ ಉದ್ಯಮಿ ಟೈಗರ್ಸ್ ಅಂತರಾಷ್ಟ್ರೀಯ ಲಾಜಿಸ್ಟಿಕ್ಸ್ ಮಾತನಾಡಿ ಸಂಘದ ಅಧ್ಯಕ್ಷರ ಶ್ರೀನಿವಾಸ್ ಸಾಪಲ್ಯರ ನೇತೃತ್ವದ ಮುಖೇನ ಮಹತ್ತರವಾದ ಅಭಿವೃದ್ಧಿಯನ್ನು ಕಂಡಿದೆ, ನನ್ನ ತೀರ್ಥರೂಪರರು ಮೊದಲು ಈ ಸಂಘದಲ್ಲಿ ಸೇವೆ ಮಾಡುತ್ತಿದನ್ನು ನೆನಪಿಸಿದರು, ಈಗ ನನ್ನನು ಈ ಸಂಘಕ್ಕೆ ನೀವು ಜೋಡಿಸಿದ್ದೀರಿ, ನನಗೂ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ಬಹಳ ಸಂತೋಷವನ್ನು ಕೊಟ್ಟಿದೆ ಎಂದರು. ಮಕ್ಕಳು ಮಹನೀಯರು ಮತ್ತು ತುಂಬಾ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದೀರಿ ಇದು ಒಂದು ಒಗ್ಗಟ್ಟಿನ ಪ್ರತೀಕ. ಎಲ್ಲಾ ಸ್ಪರ್ಧಾಳುಗಳಿಗೆ ನನ್ನ ಅಭಿನಂದನೆಗಳು, ಇಂತಹ ಕಾರ್ಯಕ್ರಮಗಳು ನಿರಂತರ ಜರಗಲಿ ಎಂದು ನುಡಿದರು.

ಅತಿಥಿಯಾಗಿ ಆಗಮಿಸಿದ ನರೇಶ್ದೇವಾಡಿಗ, ಉಪ ಅಧ್ಯಕ್ಷರುದೇವಾಡಿಗ ಸಂಘ ಮುಂಬೈ, ಸಭೆಯನ್ನು ಉದ್ದೇಶಿಸಿ, ಸಂಘದ ಬೆಳವಣಿಗೆಗೆ ಯುವ ಪೀಳಿಗೆಯ ಸಹಕಾರ ?ಕೊಡುಗೆ ಬಹಳ ಪ್ರಾಮುಖ್ಯ, ಇದರಿಂದ ಸಂಘ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ. ಈ ಆದುನಿಕ ಬದುಕಿನಲ್ಲಿ, ಅಲ್ಪ ಸಮಯ ನಮ್ಮ ದೇಹಕ್ಕೆ ಮೀಸಲಾಗಿರುವುದು ಹಾಗು ಇಂತಹ ಸ್ಫರ್ಧೆಯಲ್ಲಿ ಭಾಗಿಯಾಗುವುದು, ನಮ್ಮ ಮನಸ್ಸಿನ ಸಂತುಲನವನ್ನು ಕಾಪಾಡಲು ಪೂರಕವಾಗುತ್ತ್ತದೆ ಎಂದು ಎಲ್ಲಾ ಸ್ಪರ್ಧಾಳುಗಳಿಗೆ ಅಭಿನಂದಿಸಿದರು. ಮೋಹನ್ಮಂಜೇಶ್ವರ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದಿಸಿದರು. ಶ್ರೀನಿವಾಸ ಸಾಫಲ್ಯರು ಸಭೆಯನ್ನು ಉದ್ದೇಶಿಸಿ, ಸೋಲು ?ಗೆಲುವಿನ ಮೂಲ. ತಾವು ಸೋತಾಗ ನಮ್ಮ ಸೋಲಿನ ವಿಶ್ಲೇಷಣೆ, ನಮ್ಮ ಮುಂದಿನ ಜೀವನಕ್ಕೆ ಪಾಠವನ್ನು ಕಲಿಸುತ್ತದೆ. ಗೆದ್ದವರು ತಮ್ಮ ಇಟ್ಟ ಲಕ್ಷವನ್ನು ಇನ್ನಷ್ಟ್ಟ ತೀವ್ರಗೊಳಿಸಿ ಮುಂದಿನ ಗೆಲುವಿಗೆ ಸಿದ್ಧರಾಗಬೇಕು.

ಸೋತು ಗೆದ್ದವರು ಹಾಗು ಗೆದ್ದು ?ಸೋತವರು ತಮ್ಮ ಬದುಕಿನ ಜೀವನದ ಪುಟ್ಟಕ್ಕೆ ತಾನೆ ಬ್ರಹ್ಮ್ಮನಾಗುತ್ತಾರೆ. ಇದುವೇ ಜೀವನದ ಆಟ. ಸಂಸಾರವೇ ಒಂದು ಬದುಕಿನ ಪಂದ್ಯ. ಸಾಫಲ್ಯ ಬಾಂದವರು ಒಟ್ಟು ಕೂಡಿ ನಡೆಯುವ ಈ ಪಂದ್ಯಾಟ ನಮ್ಮ ಜೀವನಕ್ಕೆ ಒಳ್ಳೆಯ ಮದುರ ಭಾವನೆ ಹಾಗು ಬಾಂಧ್ಯವ್ಯಕ್ಕೆ ಸಂಕೇತವಾಗಲಿ. ಇದರಿಂದ ಸಂಘಟನೆ

ಬೆಳೆಯುವಂತಾಗಲಿ ಎಂದು ಎಲ್ಲಾ ಸ್ಫರ್ದಿಗಳಿಗೆ ಶುಭಕೋರಿದರು. ಸಾಫಲ್ಯ ಸಮಾಜದ ಯುವ ಪ್ರತಿಭೆ, ರಾಷ್ಟ್ರೀಯ ಅಥ್ಲೆಟಿಕ್ಕು ಮಾರಿ ಖುಷಿ (ಟೇಬಲ್ಟೆನಿಸ್ಹಾ) ಹಾಗು ಕುಮಾರಿ ರಶಿ ಹರೀಶ್ಸುವರ್ಣ (ಥ್ರೋಬಾಲ್ನ್ಯಾಷನಲ್ಚಾಂಪ್) ಇವರನ್ನು ಘಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಜೀವನ್ಸಿ ರಿಯನ್, ಆಟೋಟ ವಿಭಾಗದ ಕಾರ್ಯಾಧ್ಯಕ್ಷರು, ಸ್ಫರ್ಧೆಯ ನಿಯಮ ಹಾಗು ಸಂಘದ ಚಟುವಟಿಕೆಯ ಬಗ್ಗೆ ವಿವರಣೆ ನೀಡಿದರು. ಜೊತೆ ಕಾರ್ಯದರ್ಶಿಯಾದ ಕಿರಣ್ಕುಮಾರ್ಮತ್ತುಕು. ಐಶ್ವರ್ಯ ಕಾರ್ಯಕ್ರಮವನ್ನು ನೀರೂಪಿಸಿದರು, ಕು. ಶ್ರೇಯ, ಕು. ಅನ್ವಿತ ಅತಿಥಿಗಳನ್ನು ಹಾಗು ಸನ್ಮಾನಿತರನ್ನು ಪರಿಚಯಿಸಿದರು, ಮಹಿಳಾ ವಿಭಾಗದ ಅಧ್ಯಕ್ಷಿ ಲಕ್ಷ್ಮಿಮಂಡೋನ್, ಯುವ ವ್ಹಿಭಾಗದ ಅಧ್ಯಕ್ಷಿಕುಂ. ಸಂದ್ಯಾ ಪುತ್ರನ್, ಉಪಾಧ್ಯಕ್ಷರಾದ ಕೃಷ್ಣ ಕುಮಾರ್ಬಂಗೇರ, ಕೋಶಾಧಿಕಾರಿ ಹೇಮಂತ್ ಪಳಿಗ, ಕಲಾ ಬಂಗೇರ, ರತಿಕ ಸಾಫಲ್ಯ, ವ್ರಿಷ್ಟಿ ಸಾಲಿಯಾನ್, ಸತೀಶ್ಪುತ್ರನ್, ವಂದನಾ ಪುತ್ರನ್, ಶೋಭಾ ಬಂಗೇರ, ಪ್ರತಿಭಾ ಸಫಲಿಗ, ಮೀನಾಕ್ಷಿ ಸಪಳಿಗ, ಸತೀಶ್ಕುಂ ದರ್, ಜಗನ್ನಾಥ್ಕ ರ್ಕೇರ, ಸಂತೋಷ್ಕುಂ ದರ್, ಕವಿತಾ ಪುತ್ರನ್ಸ ಹಕರಿಸಿದರು. ಕಾರ್ಯಕ್ರಮಕ್ಕೆ ಸಹಕಾರವಿತ್ತ ಶ್ರೀಮತಿ ಮಲ್ಲಿಕಾ ಸಪಳಿಗ, ಮಹೇಶ್ಬಂಗೇರ ಮತ್ತು ಹೇಮಂತ್ಸ ಪಳಿಗ ಗೌರವಿಸಲಾಯಿತು.

ಕಾರ್ಯದರ್ಶಿ ಶ್ರೀಯುತ ಭಾಸ್ಕರ್ಸಪಳಿಗ ಧನ್ಯವಾದವನ್ನುಗೈದರು. ಈ ಕ್ರೀಡಾ ಸ್ಪರ್ಧೆಗೆ ಮೊದಲು ಆಗಮಿಸಿದ ೨೦೦ ಸದ್ಯಸರಿಗೆ ವಿಶೇಷ, ಆಕರ್ಷಕ ಉಡುಗೊರೆ ನೀಡಲಾಯಿತು. ಹಿರಿಯರಿಗೆ ಕೇವಲು ಜರ್ನಲ್ನಾ ಲೆಜ್ವಿಷಯದ ಬಗ್ಗೆ ಪ್ರಾಸ್ಟ್ನವಳಿ ಜರಗಿತು ಹಾಗು ವಿಶೇಷ ಬಹುಮಾನ ನೀಡಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now