ಗೋಕುಲ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ – ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

ಗೋಕುಲ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ – ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

0Shares

ಮುಂಬಯಿ, ಜ. 19: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಮಕರ ಮಾಸ ಪರ್ವಕಾಲದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನುಬಿ.ಎಸ್.ಕೆ. ಬಿ. ಎಸೋಸಿಯೇಶನ್ ಸಹಯೋಗದೊಂದಿಗೆ ಶನಿವಾರ ದಿನಾಂಕ 17.1.2026 ರಂದು ಸಂಭ್ರಮದಿಂದ ಆಚರಿಸಿತು

ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ಪೌರೋಹಿತ್ಯದಲ್ಲಿ ಜರಗಿದ ಶ್ರೀ ಸತ್ಯನಾರಾಯಣ ಪೂಜೆಯ ಯಜಮಾನತ್ವವನ್ನು ಸಂಸ್ಥೆಯ ಉಪಾಧ್ಯಕ್ಷರಾದ ವೈ. ಮೋಹನ್ರಾಜ್ ಮತ್ತು ಅವರ ಧರ್ಮಪತ್ನಿ ಸಾವಿತ್ರಿಯವರು ವಹಿಸಿದ್ದರು. ಶ್ರೀ ಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆಯಾದ ನಂತರ ಸೇವಾರ್ಥಿಗಳಿಗೆ ಸಾಮೂಹಿಕ ಸಂಕಲ್ಪವನ್ನು ರಾಮವಿಠಲ ಕಲ್ಲೂರಾಯರು ನೆರವೇರಿಸಿದರು. ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಪೂಜೆ ಮಹಾಮಂಗಳಾರತಿಯಾದ ನಂತರ, ವೇ.ಮೂ.ದರೆಗುಡ್ಡೆ ಶ್ರೀನಿವಾಸ್ ಭಟ್ ರವರು ತಮ್ಮ ಪ್ರಾರ್ಥನೆಯಲ್ಲಿ ” ಮಕರ ಸಂಕ್ರಮಣದ ಈ ಪರ್ವ ಕಾಲದಲ್ಲಿ ಗೋಕುಲ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ, ಸಹಸ್ರ ನಾಮಾರ್ಚನೆ, ಹರಿನಾಮ ಸಂಕೀರ್ತನೆಯೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಇಂದು ನಾವು ಆಚರಿಸಿದ್ದೇವೆ. ನೆರೆದ ಸದ್ಭಕ್ತರಿಗೆಲ್ಲಾ ಭಗವಂತ ಆಯುರಾರೋಗ್ಯ ಸುಖ ಸಂಪತ್ತನ್ನಿತ್ತು ರಕ್ಷಿಸಲಿ, ” ಎಂದು ಅನುಗ್ರಹ ವಚನಗಳನ್ನಾಡಿದರು. ಈ ಸಂದರ್ಭದಲ್ಲಿ ಡಾ. ಸಹನಾ ಪೋತಿಯವರ ಪ್ರಾಯೋಜಕತ್ವದಲ್ಲಿ ಸುವಾಸಿನಿ ಪೂಜೆಯನ್ನು ರೋಹಿಣಿ ಬಾಯಿರಿಯವರಿಗೆ ಮೋಹನ್ರಾಜ್ ದಂಪತಿ ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ ಮತ್ತು ಗೋಕುಲದ ವಲಯದ ಭಜನಾ ಮಂಡಳಿಗಳಾದ ಗೋಪಾಲಕೃಷ್ಣ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ, ಸ್ಕಂದ ಭಜನಾ ಮಂಡಳಿಯವರಿಂದ ಪ್ರೇಮಾ ರಾವ್ ರವರ ನಿರೂಪಣೆಯಲ್ಲಿ ಭಗವಂತನ “ಶ್ರೀ ಚರಣ ” ವಿಷಯ ಆಧಾರಿತ ದಾಸರ ಪದಗಳ ಹರಿನಾಮ ಸಂಕೀರ್ತನೆ ನೆರವೇರಿತು. ಗೋಕುಲ ಮಹಿಳಾ ವಿಭಾಗದವರಿಂದ ಅರಿಸಿನ ಕುಂಕುಮ, ಎಳ್ಳು೦ಡೆ ವಿತರಣೆ ಜರಗಿತು

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಮತ್ತು ಧಾರ್ಮಿಕ ಸಮಿತಿ ಸದಸ್ಯರು, ಬಿ. ಎಸ್.ಕೆ.ಬಿ. ಎಸೋಸಿಯೇಶನ್ ನ ಪದಾಧಿಕಾರಿಗಳು, ಕಾರ್ಯಕಾರೀ ಸಮಿತಿಯ ಸದಸ್ಯರು ಹಾಗೂ ಸುಮಾರು 200 ಕ್ಕೂ ಮಿಕ್ಕಿ ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ದೇವರಿಗೆ ನಿತ್ಯ ಪೂಜೆಯಾದ ನಂತರ ಸೇವಾರ್ಥಿಗಳಿಗೆ ಹಾಗೂ ನೆರೆದ ಸದ್ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನೆರವೇರಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now