ಡಾ| ಕಾರ್ನಾಡ್‌ರನ್ನು ಅಭಿನಂದಿ ಸಿದ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್

ಡಾ| ಕಾರ್ನಾಡ್‌ರನ್ನು ಅಭಿನಂದಿ ಸಿದ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್

0Shares

ಡಾ| ಕಾರ್ನಾಡ್‌ರನ್ನು ಅಭಿನಂದಿಸಿದ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ – ರಾತ್ರಿಶಾಲಾ ವಿದ್ಯಾಥಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ನಮ್ಮ ಹಿರಿಮೆ: ಸುರೇಂದ್ರ ಎ.ಪೂಜಾರಿ

ಮುಂಬಯಿ (ಆರ್‌ಬಿಐ), ಡಿ.೨೨: ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯ ಹಳೆ ವಿದ್ಯಾಥಿಯಾಗಿದ್ದು, ಇತ್ತೀಚೆಗಷ್ಟೇ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪ್ರಶಸ್ತಿ ೨೦೨೫ ಪುರಸ್ಕೃತರಾದ ಪ್ರಸಿದ್ಧ ಸಾಹಿತಿ, ಸಂಶೋಧಕ ಡಾ| ವಿಶ್ವನಾಥ್ ಕಾರ್ನಾಡ್ ಅವರನ್ನು ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ವತಿಯಿಂದ ಕಾರ್ನಾಡ್ ಅವರ ನಿವಾಸದಲ್ಲಿ ಇಂದಿಲ್ಲಿ ಅಭಿನಂದಿಸಲಾಯಿತು.

ಫೌಂಡೇಶನ್‌ನ ಅಧ್ಯಕ್ಷ ಸುರೇಂದ್ರ ಎ.ಪೂಜಾರಿ, ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್, ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಕೋಶಾಧಿಕಾರಿ ಟಿ.ವಿ ಪೂಜಾರಿ, ಜತೆ ಕಾರ್ಯದರ್ಶಿ ಅಶೋಕ್ ಸುವರ್ಣ, ನಿಧಿ ಸಂಗ್ರಹ ಸಮಿತಿಯ ಕಾರ್ಯಧ್ಯಕ್ಷ ಮುಂಜುನಾಥ್ ಪೂಜಾರಿ ಉಪಸ್ಥಿತರಿದ್ದು ಅಭಿನಂದಿಸಿ ಶುಭಾರೈಸಿದರು.

ಸುರೇಂದ್ರ ಎ.ಪೂಜಾರಿ ಮಾತನಾಡಿ ಮುಂಬಾಯಿಯ ರಾತ್ರಿ ಶಾಲೆಯ ಹಳೆ ವಿದ್ಯಾಥಿಯೋರ್ವರಿಗೆ ಇಂತಹ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ದೊರಕಿರುವುದು ರಾತ್ರಿ ಶಾಲೆಗಳ ಹಳೆ ವಿದ್ಯಾಥಿಗಳಿಗೆ ಅಭಿಮಾನದ ಸಂಗತಿಯಾಗಿದೆ ಡಾ| ಕಾರ್ನಾಡ್ ಅವರ ಸಾಧನೆ ರಾತ್ರಿ ಶಾಲೆಯ ಇತಿಹಾಸದಲ್ಲಿ ಮಹತ್ತರವಾದುದು ಎಂದು ಪ್ರಶಂಸೆ ವ್ಯಕ್ತಪಡಿಸಿ ಫೌಂಡೇಶನ್ ಪರವಾಗಿ ಅಭಿನಂದನೆ ಸಲ್ಲಿಸಿದರು.

ಡಾ| ಕಾರ್ನಾಡ್ ಅವರು ಈ ಪ್ರಶಸ್ತಿಯನ್ನು ತನ್ನ ಬದುಕಿಗೆ ದಾರಿ ಮಾಡಿಸಿದ ಮದರ್ ಇಂಡಿಯಕ್ಕೆ ಅರ್ಪಿಸುತ್ತೇನೆ ಎಂದರು.

ಕಥೆಗಾರರಾಗಿ, ಕವಿಯಾಗಿ, ನಾಟಕ ಕಲಾವಿದರಾಗಿ, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆಗಳ ಉಪನ್ಯಾಸಕರಾಗಿ, ಫುಟ್ಬಾಲ್ ಕ್ರೀಡಾಪಟುವಾಗಿ, ವಕೀಲರಾಗಿ, ಸಂಪಾದಕರಾಗಿ, ಬ್ಯಾಂಕರ್, ಉತ್ತಮ ವಾಗ್ಮಿ, ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು, ಹಿಂದಿ ಭಾಷಾ ಪ್ರಚಾರಕರಾಗಿ ಬಹುಮುಖ ವ್ಯಕ್ತಿತ್ವದ ಡಾ| ಕಾರ್ನಾಡ್ ೩೦ಕ್ಕಿಂತಲೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಮದರ್ ಇಂಡಿಯಾದ ಹೆಮ್ಮೆಯ ಹಳೆ ವಿದ್ಯಾಥಿ ಎಂದು ಅಶೋಕ್ ಸುವರ್ಣ ಪರಿಚಯಿಸಿ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now