
ಮುಂಬಯಿ, : ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಬಿಎಸ್‍ಕೆಬಿ ಎಸೋಸಿಯೇಶನ್ (ಗೋಕುಲ) ಸಹಯೋಗದೊಂದಿಗೆ ಶ್ರೀ ಗಣೇಶ ಚತುಥಿರ್üಯನ್ನು ಕಳೆದ ಬುಧವಾರ (ಆ.27) ಡಾ| ಸುರೇಶ್ ಎಸ್. ರಾವ್ ಕಟೀಲು ಮತ್ತು ವಿಜಯಲಕ್ಷಿ ್ಮ ಸುರೇಶ್ ರಾವ್ ದಂಪತಿ ಯಜಮಾನತ್ವದಲ್ಲಿ ವೇ| ಮೂ| ಗಣೇಶ್ ಭಟ್ ಅವರ ಪ್ರಧಾನ ಪೌರೋಹಿತ್ಯದಲ್ಲಿ, 12 ತೆಂಗಿನಕಾಯಿ ಗಣಹೋಮ ನೆರವೇರಿಸುವುದರೊಂದಿಗೆ ಮೂರು ದಿನಗಳ ಶ್ರೀ ಗಣೇಶೋತ್ಸವಕ್ಕೆ ಚಾಲನೆ ನೀಡಿತು.
ಮಂಗಳವಾರ (ಆ.26) ಪರಿಸರ ಪ್ರೇಮಿ ಶ್ರೀ ಗಣೇಶ ಮೂರ್ತಿಯನ್ನು ತಂದು ಗೋಕುಲ ಸಭಾಗೃಹದಲ್ಲಿ ಅಲಂಕೃತ ಮಂಟಪದಲ್ಲಿರಿಸಿ, ಮಾರನೇ ದಿನ ಬುಧವಾರ ಗೋಕುಲದ ಪ್ರಧಾನ ಅರ್ಚಕ ವೇ| ಮೂ| ದರೆಗುಡ್ಡೆ ಶ್ರೀನಿವಾಸ್ ಭಟ್ ಅವರು ವಿಧಿವತ್ತಾಗಿ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೈದು ಮಂಗಳಾರತಿ ಬೆಳಗಿದರು. ಬಳಿಕ ಎರಡು ದಿವಸಗಳಲ್ಲಿ ಡಾ| ಅರುಣ್ ರಾವ್, ಶೈಲಿನಿ ಎ.ರಾವ್ ಮತ್ತು ಪ್ರಶಾಂತ್ ಹೆರ್ಲೆ, ಶ್ರೀಲಕ್ಷ್ಮಿಪಿ.ಹೆರ್ಲೆ ದಂಪತಿಗಳ ಯಜಮಾನತ್ವದಲ್ಲಿ ತೆಂಗಿನಕಾಯಿ ಗಣಹೋಮ ನೆರವೇರಿತು. ಪ್ರತಿದಿನ ದೇವಾಲಯದ ಸಭಾಗೃಹದಲ್ಲಿ ಶ್ರೀ ಗಣೇಶ ಮೂರ್ತಿಗೆ ಅರ್ಚಕ ವರ್ಗದವರು ಮಂಗಳಾರತಿ ಬೆಳಗಿದ ನಂತರ, ಯುವ ವಿಭಾಗದವರ ನೇತೃತ್ವದಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಗಣೇಶ ಆರತಿ ಹಾಡಿನೊಂದಿಗೆ ಸಾರ್ವಜನಿಕ ಆರತಿ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಹರಿಕೃಷ್ಣ ಭಜನಾ ಮಂಡಳಿ ಮತ್ತು ಗೋಕುಲ ಮತ್ತು ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಭಜನೆ, ವಿದುಷಿ ಉಮಾ ಕುಮಾರ್ ರವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ರಾಧಾಕೃಷ್ಣ ನೃತ್ಯ ಅಕಾಡೆಮಿಯವರಿಂದ ಭರತನಾಟ್ಯ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಮತ್ತು ಜೈ ಅಂಬೆ ಭಜನಾ ಮಂಡಳಿಯಿಂದ ಭಜನೆ, ಗೋಕುಲ ಸದಸ್ಯೆಯರಿಂದ ನೃತ್ಯ ರೂಪಕ, ವಿದುಷಿ ಮಧುರಾರವರಿಂದ ಕಥಕ್ ನೃತ್ಯ, ವಿದುಷಿ ದಿವ್ಯ ಪ್ರಸಾದ್ ಮತ್ತು ಕುಮಾರಿ ಬಿಂದು, ಕಲಾ ಬಿಂದು ಭರತನಾಟ್ಯ ಶಾಲೆ, ಬೆಂಗಳೂರು ಇವರಿಂದ ಭರತನಾಟ್ಯ, ಶ್ರೀ ಸ್ಕಂದ ಭಜನಾ ಮಂಡಳಿಯಿಂದ ಭಜನೆ, ವಿದುಷಿ ಸಂಧ್ಯಾ ಪ್ರಸನ್ನ ಭಟ್ ಮತ್ತು ಕುಮಾರಿ ವೈಷ್ಣವಿ, ಪಿ.ಭಟ್, ನೆಲ್ಲಿತೀರ್ಥ ಇವರಿಂದ ಭಕ್ತಿ ಸಂಗೀತ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಜರಗಿದವು. ಯುವ ವಿಭಾಗದರು ಎಲ್ಲಾ ವಯೋಮಾನದವ ರಿಗಾಗಿ ಪರಿಸರ ಪ್ರೇಮಿ ಗಣೇಶ ಮೂರ್ತಿ ತಯಾರಿಸುವ ಕಾರ್ಯಾಗಾರವನ್ನುಕುಮಾರಿ ಅದಿತಿ ಮಂಜರಬೆಟ್ಟು ರವರ ಪರಿಕಲ್ಪನೆ ಮತ್ತು ನೇತೃತ್ವದಲ್ಲಿ ಏರ್ಪಡಿಸಿದ್ದರು. ಅನೇಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಅತ್ಯಂತ ಮನಮೋಹಕ ಗಣೇಶ ಮೂರ್ತಿಗಳನ್ನು ತಯಾರಿಸಿದ್ದರು.
ಶುಕ್ರವಾರ (ಆ.29) ಸಂಜೆ ಆರತಿಯಾದ ನಂತರ, ನಾಸಿಕ್ ಧೋಲ್ ವಾದನ, ನೃತ್ಯ ಸಹಿತ ಅತ್ಯಂತ ವೈಭವದ ಮೆರವಣಿಗೆಯ ಮೂಲಕ ಶ್ರೀ ಗಣೇಶ ಮೂರ್ತಿಯನ್ನು ಗೋಕುಲ ವಠಾರದಲ್ಲಿ ವಿಸರ್ಜಿಸುವುದ ರೊಂದಿಗೆ ಮೂರು ದಿನಗಳ ಗಣೇಶೋತ್ಸವ ಸಂಪನ್ನಗೊಂಡಿತು. ಮೂರು ದಿನಗಳಲ್ಲಿ ಶ್ರೀ ದೇವರ ದರ್ಶನಕ್ಕೆ ಆಗಮಿಸಿದ ಸರ್ವ ಭಕ್ತಾದಿಗಳಿಗೆ ತೀರ್ಥ- ಪ್ರಸಾದ ವಿತರಿಸಲಾಯಿತು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now