
ಮುಂಬಯಿ, ಆ.29: ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರ ವಲಯದ ಅಧ್ಯಕ್ಷ, ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಉದ್ಯಮಿ ಗುತ್ತಿಗೆದಾರರೂ, ಕಾರ್ಕಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯಥಿಯಾಗಿದ್ದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಇಂದಿಲ್ಲಿ ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿಗೆ ಆಗಮಿಸಿ ಮಹಾನಗರದಲ್ಲಿನ ವಿವಿಧ ಗಣಪತಿ ಮಂಡಲಗಳಿಗೆ ಭೇಟಿಯನ್ನಿತ್ತರು.

ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ಕಿಂಗ್ ಸರ್ಕಲ್ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ವಾರ್ಷಿಕವಾಗಿ ಪೂಜಿಸಲ್ಪಡುವ ಶ್ರೀ ವಿನಾಯಕನ ದರ್ಶನವನ್ನು ಪಡೆದ ಉದಯ್ ಕುಮಾರ್ ಶೆಟ್ಟಿ, ಮೊದಲಾಗಿ ಪ್ರಭಾದೇವಿಯಲ್ಲಿನ ಶ್ರೀ ಸಿದ್ಧಿ ವಿನಾಯಕ ಮಂದಿರಕ್ಕೆ ಭೇಟಿಗೈದು ಶ್ರೀ ಮಹಾಗಣಪತಿ ದರ್ಶನಗೈದರು. ಬಳಿಕ ಮಹಾನಗದಲ್ಲಿನ ವಿವಿಧ ಗಣಪತಿ ಮಂಡಳಗಳಿಗೆ ಭೇಟಿನೀಡಿದ್ದು, ಕೊನೆಯಲ್ಲಿ ವಿಶ್ವಪ್ರಸಿದ್ದ್ಧ ಲಾಲ್‌ಭಾಗ್ ಕಾ ರಾಜಾ ಗಣಪತಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಜೊತೆ ಕಾರ್ಯದರ್ಶಿ ಗಿರೀಶ್ ಆರ್.ಶೆಟ್ಟಿ, ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್‌ನ ಆಡಳಿತ ಮಂಡಳಿ ಟ್ರಸ್ಟಿ ಭಾಸ್ಕರ ಆರ್.ಶೆಟ್ಟಿ ಧಾರಾವಿ, ನ್ಯಾಯವಾದಿ ಗಿರೀಶ್ ಶೆಟ್ಟಿ ಉಡುಪಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now