ಮುಂಬಯಿ, ನ.೦೭: ಸಂಘದಲ್ಲಿ ಸಮಿತಿ ಸದಸ್ಯರ ಭಾಗವಹಿಸುವಿಕೆ ಅತ್ಯವಶ್ಯಕ ಆಗಿದೆ. ಸುಮಾರು ಎಂಟು ದಶಕಗಳಿಂದ ಎಲ್ಲರೂ ತಮ್ಮ ಸಹಕಾರದಿಂದ ಸಂಘವನ್ನು ಬಲಪಡಿ ಮುನ್ನಡೆಸಿದ್ದಾರೆ. ಸದಸ್ಯರು ಒಗ್ಗೂಡಿ ಕೆಲಸ ಮಾಡುತ್ತಾ ಹೊಸಬರನ್ನು ಸಂಘಕ್ಕೆ ಸೇರ್ಪಡೆ ಮಾಡುವ ಪ್ರಯತ್ನ ಮಾಡಬೇಕಾಗಿದೆ. ಕಳೆದ ಮೂರು ವರ್ಷಗಳ ನನ್ನ ಸಾರಥ್ಯದ ಅವಧಿಗೆ ತಮ್ಮೆಲ್ಲರ ಸಹಕಾರ ಮತ್ತು ಸಹಾಯಗಳಿಗೆ ಋಣಿಯಾಗಿದ್ದು, ಮತ್ತೆ ನನ್ನ ಮೇಲಿನ ವಿಶ್ವಾಸದೊಂದಿಗೆ ಮುಂದಿನ ಮೂರು ವರ್ಷಗಳ ಅಧ್ಯಕ್ಷೆ ಸ್ಥಾನ ಒದಗಿಸಿದ್ದು ಪುನರಪಿ ಎಲ್ಲರ ಸಹಕಾರವನ್ನು ಬಯಸುತ್ತೇನೆ. ಎಲ್.ವಿ ಅಮೀನ್, ಬಿ. ಆರ್ ಪೂಂಜ, ನಾರಾಯಣ ಶೆಟ್ಟಿ ಮೊದಲಾದವರು ಈ ಸಂಘವನ್ನು ಎತ್ತರಕ್ಕೆ ಬೆಳೆಸಿದರು. ಮುಂದೆಯೂ ನಾವೆಲ್ಲರೂ ಜೊತೆಗೂಡಿ ಸಂಘವನ್ನು ಬಾಣೆತ್ತರಕ್ಕೆ ಬೆಳೆಸೋಣ ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ನುಡಿದರು.
ಕನ್ನಡ ಸಂಘ ಸಾಂತಾಕ್ರೂಜ್ ತನ್ನ ೬೭ನೇ ವಾರ್ಷಿಕ ಮಹಾಸಭೆಂiನ್ನು ಇಂದಿಲ್ಲಿ ಗುರುವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ನಡೆಸಿದ್ದು ಸಭಾಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣಗೈದು ಸುಜತಾ ಶೆಟ್ಟಿ ಮಾತನಾಡಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now