ಹೋಲಿ ಸ್ಪೀರಿಟ್ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ಸೇವೆ – ಎನ್‌ಸಿಪಿ ನಿಯೋಗ ಭೇಟಿ

ಹೋಲಿ ಸ್ಪೀರಿಟ್ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ಸೇವೆ – ಎನ್‌ಸಿಪಿ ನಿಯೋಗ ಭೇಟಿ

0Shares

ಮುಂಬಯಿ, : ಸರಕಾರದ ನಿಯಮದಂತೆ ಬಡ ಹಾಗೂ ಸಾಮಾನ್ಯ ವರ್ಗದವರಿಗೆ ಉಚಿತ ಚಿಕಿತ್ಸೆ ಮತ್ತು ಇನ್ನಿತರ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‌ಸಿಪಿ ಶರದ್‌ಚಂದ್ರ ಪವಾರ್) ಮುಂಬಯಿ ಪ್ರದೇಶದ ನಿಯೋಗವು ಅಂಧೇರಿ ಪೂರ್ವದ ಹೋಲಿ ಸ್ಪೀರಿಟ್ ಆಸ್ಪತ್ರೆಯ ಟ್ರಸ್ಟಿ ಮತ್ತು ನಿರ್ದೇಶಕರನ್ನು ಭೇಟಿ ಮಾತು.

ಎನ್‌ಸಿಪಿ ನಿಯೋಗವು ಭೇಟಿವಿತ್ತಾಗ ಮೊದಲ ನೋಟಕ್ಕೆ ಕಾಣುವಂತೆ ಸರಕಾರದ ಬೋರ್ಡ್ ಹಾಕಿಲ್ಲ ಅನ್ನುವುದನ್ನು ದೃಢಪಡಿಸಿಕೊಂಡ ವೀಕ್ಷಕರು ದೂರಿನ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. 30 ಹಾಸಿಗೆಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಒಪ್ಪಿಗೆ ನೀಡುವಂತೆ ಹಾಗೂ ಮುಖ್ಯ ಮುಂಭಾಗದಲ್ಲಿ ಎಲ್ಲರಿಗೂ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ಸೂಚನಾ ಫಲಕ ಹಾಕುವಂತೆ ಸೂಚಿಸಿದರು.

ನಿಯೋಗದ ಸಲಹೆಯನ್ನು ಪರಿಗಣಿಸಿದ ಆಸ್ಪತ್ರೆಯ ಮುಖ್ಯಸ್ಥರು ಬಡ ವರ್ಗದ ಮಧ್ಯಮ ವರ್ಗದವರಿಗೆ ಉಚಿತ ಚಿಕಿತ್ಸೆಗಾಗಿ 30 ವಿಧಿಸಿದ್ದು ಎಲ್ಲಾ ವಿಭಾಗಗಳ ಮುಖ್ಯಸ್ಥರ ಸಭೆ ನಡೆಸಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಲು ತಿಳಿಸಿದೆ.

ಕೆಲವೆಡೆ ಕೇಂದ್ರಗಳು ನಡೆಯುತ್ತಿದ್ದು, ರೋಗಿಗಳು ಮತ್ತು ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ನಡುವೆ ಸೂಕ್ತ ಸಂವಹನ ನಡೆಸಬೇಕು ಎಂದು ಆಸ್ಪತ್ರೆಯ ವತಿಯಿಂದ ವೈದ್ಯಕೀಯ ಕೇಂದ್ರಗಳನ್ನು ಪ್ರಾರಂಭಿಸಲು ಸೂಚನೆಗಳನ್ನು ನೀಡಲಾಗಿದ್ದು ಅದನ್ನು ಆಸ್ಪತ್ರೆಯು ಒಪ್ಪಿಕೊಂಡಿರುವ ಬಗ್ಗೆ ಎನ್‌ಸಿಪಿ (ಶರದ್ಚಂದ್ರ ಪವಾರ್) ಮುಂಬಯಿ ಪ್ರದೇಶ ಹಿರಿಯ ಉಪಾಧ್ಯಕ್ಷ, ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ತಿಳಿಸಿದರು.

ಭೇಟಿಯನ್ನಿತ್ತ ಎನ್‌ಸಿಪಿ ಮುಂಬಯಿ ಪ್ರಧಾನ ಕಾರ್ಯದರ್ಶಿ ವಿಲಾಸರಾವ್ ಶಿಂಧೆ, ಮಹಾನಗರ ಪಾಲಿಕಾ ವಾರ್ಡ್ 121ರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಸ್ಪತ್ರೆಯ ಟ್ರಸ್ಟಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಜನ ಸಂಪರ್ಕಾಧಿಕಾರಿಗಳು ಬರಮಾಡಿಕೊಂಡರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now