
ಅನುದಾನಿತ ಕೊಲಕಡಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೆ.ಪಿ.ಎಸ್.ಕೆ ಸ್ಮಾರಕ ಪ್ರೌಢಶಾಲೆಯಲ್ಲಿ ಎಂ ಆರ್ ಪಿ ಎಲ್ ನ ಸಿ ಎಸ್ ಆರ್ ಅನುದಾನದ ನೂತನ ಕಟ್ಟಡ “ಜಾಗೃತಿ” ಎಂಬ ಆರ್ಟ್ ಗ್ಯಾಲರಿಯ ಉದ್ಘಾಟನೆ,ಮತ್ತು 2024- 25 ನೇ ಸಾಲಿನ ಎಸ್.ಎಸ್.ಎಲ್. ಸಿ.ಅಂತಿಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವವನ್ನು ಕೆ.ಪಿ.ಎಸ್.ಕೆ. ಸ್ಮಾರಕ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಯಿತು.
ನೂತನ ಆರ್ಟ್ ಗ್ಯಾಲರಿ “ ಜಾಗೃತಿ” ಯನ್ನು ಎಂ.ಆರ್.ಪಿ.ಎಲ್. ನ ಎಚ್.ಆರ್ ಎರೋಮ್ಯಾಟಿಕ್ಸ್ ನ ಪ್ರಬಂಧಕ ಶ್ರೀಯುತ ಶ್ರೀಶ ಎಂ ಕರ್ಮಾರನ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಚಿತ್ರಕಲೆಯನ್ನು ಅಳವಡಿಸಿಕೊಂಡಾಗ ಅವರಲ್ಲಿ ಸಾಮಾಜಿಕ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಸಂಚಾರಕರಾದ ಗಂಗಾಧರ ಶೆಟ್ಟಿ ಬರ್ಕೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವೆಂಕಿ ಪಲಿಮಾರ್ ಮಾತನಾಡಿ ಸಮಾಜದಲ್ಲಿ ಕೆಟ್ಟ ಚಟಗಳ ಬಗ್ಗೆ ಹಾಗೆಯೇ ಪರಿಸರ ಜಾಗೃತಿ, ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳೇ ತಯಾರಿಸಿರುವ ಕಲಾಕೃತಿಗಳನ್ನು ನೂತನ ಆರ್ಟ್ ಗ್ಯಾಲರಿಯಲ್ಲಿ ಜೋಡಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ/ ವಾಸುದೇವ ಬೆಳ್ಳೆ ಮಾತನಾಡಿ ಕವಿಗೆ ಯಾವ ವಸ್ತು ನಿರೂಪಯುಕ್ತವಾದ ವಸ್ತುವಲ್ಲ ಹಾಗೆಯೇ ಕಸದಲ್ಲಿಯೂ ಕಲೆಯನ್ನು ಅರಳಿಸುವವರು ಅಲ್ಲದೆ ಕಲಾತಪಸ್ವಿ ಶ್ರೀಯುತ ವೆಂಕಿಪಲ್ಲಿಮಾರ್. ಶಿಕ್ಷಣದ ಅರಿವಿನ ತಳಕ್ಕೆ ಇಳಿಯಬೇಕಾದರೆ ಅಹಂಕಾರ ಸಲ್ಲದು,ವಿದ್ಯೆಯ ಮೂಲಕ ವ್ಯಕ್ತಿಯಲ್ಲಿ ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣವಾಗಬೇಕು ಎಂದರು.
ವೇದಿಕೆಯಲ್ಲಿ ಕಾರ್ಕಳದ ಬೈಲೂರು ಹೊಸಬೆಳಕು ಆಶ್ರಮದ ನಿರ್ದೇಶಕಿ ಶ್ರೀಮತಿ ತನುಲ ತರುಣ್,ಪ್ರಾಥಮಿಕ ಶಾಲೆಯ ಸಂಚಾಲಕರಾದ ಶ್ರೀಮತಿ ಶಾಂತಿ ಮನೋಹರ ಕಾಮತ್, ಧ್ವಜಾರೋಹಣ ಮಾಡಿದ ನಿವೃತ್ತ ಮುಖ್ಯ ಶಿಕ್ಷಕ ಶಂಕರ್ ಶೆಟ್ಟಿ ಕೊಲಕಾಡಿ ವಿದ್ಯಾ ಪ್ರಚಾರಣೆ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷ ಶ್ರೀ ಮನೋಹರ ಕೋಟ್ಯಾನ್, ವಿದ್ಯಾ ಪ್ರಚಾರಣಿ ಸಂಘದ ಕಾರ್ಯದರ್ಶಿ ನಿತಿನ್ ಪ್ರಕಾಶ್, ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ವಿದ್ಯಾ ಪ್ರಚಾರಣೆ ಸಂಘದ ಕಾರ್ಯದರ್ಶಿ ಶ್ರೀ ನಾಗಭೂಷಣ್ ರಾವ್ ಸ್ವಾಗತಿಸಿ ಶಿಕ್ಷಕಿ ಅಂಬಾಭವಾನಿ ವಂದಿಸಿದರು. ಶಿಕ್ಷಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now