ಮೌಂಟ್ ರೋಸರಿಯಲ್ಲಿ ಚಿಣ್ಣರ ಘಟಿಕೋತ್ಸವ

ಮೌಂಟ್ ರೋಸರಿಯಲ್ಲಿ ಚಿಣ್ಣರ ಘಟಿಕೋತ್ಸವ

0Shares

ಎಳೆಯ ಕಂದಮ್ಮಗಳು ನಿಮ್ಮದೇ ಪ್ರತಿರೂಪ. ಈಗಿನ ಹೆತ್ತವರು ಇಬ್ಬರೂ ಸುಶಿಕ್ಷಿತರು. ನಿಮ್ಮ ಕನಸುಗಳನ್ನು ಕಲ್ಪನೆಗಳನ್ನು ಅವರಲ್ಲಿ ತುರುಕಿಸಬೇಡಿ. ಅವರ ಕನಸುಗಳನ್ನು ಬೆಳೆಸುವ ಪೋಶಿಸುವ ಮಾರ್ಗದರ್ಶಕರಾಗಿ. ನಿಮ್ಮ ಕುಟುಂಬದ ಮುಂದಿನ ಸದಸ್ಯ ಹೇಗಿರಬೇಕು ಹಾಗೆ ಬೆಳೆಸಿ. ನೀವೇ ಅವರಿಗೆ ಆದರ್ಶರಾಗಿರಿ ಎಂದು ಖ್ಯಾತ ಪ್ರಸೂತಿ ತಜ್ಞೆ ಡಾ| ರಾಜಲಕ್ಷ್ಮೀ ಹೇಳಿದರು

ಅವರು ಮಾಂಟ್ ರೋಸರಿ ಆಂಗ್ಲ ಶಾಲೆಯ ಚಿಣ್ಣರಿಗೆ ಪದವಿ ಪ್ರಧಾನಮಾಡಿ ಮಾತನಾಡಿದರು. ಘಟಿಕೋತ್ಸವದ ಅಧ್ಯಕ್ಷರಾದ ಸಂಚಾಲಕ ಫಾ| ಡಾ| ರಾಕ್ ಡಿಸೋಜ ಮಾತನಾಡಿ ಎಳವೆಯಲ್ಲಿರುವ ಲವಲವಿಕೆ ಉತ್ಸಾಹ ಮತ್ತು ಕ್ರೀಯಾಶೀಲತೆ ಬೆಳೆಯುತ್ತಾ ಮಾಯವಾಗುತ್ತದೆ ಮುಂದೆ ಕ್ಷೀಣಿಸುತ್ತಾ ಬರುತ್ತದೆ. ಮಾಧ್ಯಮ ಮೊಬೈಲ್‍ಗಳಿಂದ ದೂರವಿಟ್ಟು ಕೈಯಲ್ಲಿ ಪುಸ್ತಕ ನೀಡಿ ಓದಿನ ರುಚಿ ಹೆಚ್ಚಿಸಿರಿ ಎಂದು ಕರೆ ನೀಡಿದರು. ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ ಡಿಮೆಲ್ಲೊ ವಾರ್ಷಿಕ ವರದಿಯನ್ನು ಸಭೆಯ ಮುಂದೆ ಇರಿಸಿದರು. ಶಿಕ್ಷಕಿ ವಿವೀನಾ ಸಿಕ್ವೇರಾ ಪ್ರತಿಜ್ಞಾ ವಿಧಿ ಭೋದಿಸಿದರು. ಚಿಣ್ಣರ ಪರವಾಗಿ ಯಶಸ್ ನಾಯಕ್, ರೀಯಾನ್ನಾ, ಭವಿತ್ ಶೆಟ್ಟಿಗಾರ್, ಶಾರ್ವರಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಹೆತ್ತವರ ಪರವಾಗಿ ಶ್ರೀಮತಿ ಸೀಮಾ, ರೋಶನ್ ಡಿಸೋಜ ಚಿಣ್ಣರ ಶಾಲೆಯ ಕಾರ್ಯವೈಖರಿಯನ್ನು ಕೊಂಡಾಡಿದರು. ಯು.ಕೆ.ಜಿಯ 92 ಮಕ್ಕಳಿಗೆ ಪದವಿ ಪ್ರಧಾನ ಮಾಡಲಾಯಿತು. ಚಿಣ್ಣರಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಸಾದರಪಡಿಸಲಾಯಿತು. ವೇದಿಕೆಯಲ್ಲಿ ಹೆತ್ತವರ ಪ್ರತಿನಿಧಿಗಳಾದ ಆಬ್ದುಲ್ ಕರೀಮ್, ನಮ್ಯ ಡಿಸೋಜ, ಚಿಣ್ಣರ ವಿಭಾಗದ ಸಂಯೋಜಕಿ ಸಫೀನಾ ಉಪಸ್ಥಿತರಿದ್ದರು. ಶಿಕ್ಷಕಿ ರೇಶ್ಮಾ ಡಿಸೋಜ ಸ್ವಾಗತಿಸಿದರು. ಸಫೀನಾ ವಂದಿಸಿದರು. ಚಿಣ್ಣರಾದ ದಕ್ಷ್, ದೀಯಾ, ರೀಯಾ, ನಿತಾಲಿ, ಆಯಾನ್ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now