ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲಾ ಹಂತ ಅತ್ಯಂತ ಪ್ರಮುಖವಾದುದು. ಇಡೀ ವಿದ್ಯಾರ್ಥಿ ಜೀವನದ ಮೊತ್ತಮೊದಲ ಪಬ್ಲೀಕ್ ಪರೀಕ್ಷೆ ಹತ್ತನೇ ತರಗತಿಯ ಮಕ್ಕಳು ಎದುರಿಸುತ್ತಾರೆ. ಇಲ್ಲಿನ ಫಲಿತಾಂಶದ ಆಧಾರದ ಮೇಲೆ ನಿಮ್ಮ ಭವಿಷ್ಯ ನಿರ್ಧರಿತವಾಗುತ್ತದೆ. ಮುಂದಿನ ಓದಿನ ಆಯ್ಕೆ ಇಲ್ಲಿನ ಅಂಕಗಳ ಮೇಲೆ ಅವಲಂಬಿಸಿದೆ. ಸಾಧನೆಯ ಮೂಲಕ ಬದುಕು ಸಾರ್ಥಕವಾಗಲು ಪ್ರೌಢ ಶಿಕ್ಷಣವೇ ಭದ್ರ ಬುನಾದಿಯಾಗಿದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಶಿಕ್ಷಣ ಮಂಡಳಿಯ ಸದಸ್ಯರಾದ ಪ್ರೋಫೆಸರ್ ಆರ್ಚಿಬಾಲ್ಡ್ ಫುರ್ಟಾಡೋ ಹೇಳಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಪ್ರೌಢ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಳೆದ ಸಾಲಿನ ಪಬ್ಲೀಕ್ ಪರೀಕ್ಷೆಯಲ್ಲಿ ಸತತವಾಗಿ ಎಳನೇ ಬಾರಿ ನೂರು ಶೇಕಡಾ ಫಲಿತಾಂಶ ಪಡೆದ ಸಂಸ್ಥೆಯನ್ನು ಅಭಿನಂದಿಸಿ ಅತ್ಯುನ್ನತ ಶ್ರೇಣಿಯಲ್ಲಿ ಫಲಿತಾಂಶ ಪಡೆದ 37 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡೆ ಮತ್ತು ಪಠ್ಯೇತರ ವಿಷಯಗಳಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕಾರಿಸಲಾಯಿತು.
ಶಾಲಾ ಮುಖ್ಯಶಿಕ್ಷಕಿ ಸಿ| ಆನ್ಸಿಲ್ಲಾ ಡಿಮೆಲ್ಲೊ ಶಾಲಾ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ವಂದನೀಯ ಫಾ| ಡಾ| ರೋಕ್ ಡಿ’ಸೋಜ, ಸಹಾಯಕ ಧರ್ಮಗುರು ಫಾ| ಓಲಿವರ್ ನಜ್ರೆತ್, ಗೊರಟ್ಟಿ ಕಾನ್ವೆಂಟಿನ ಮುಖ್ಯಸ್ಥೆ ಸಿ| ಜೇನ್ ಮರಿಯಾ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಲೂಕ್ ಡಿಸೋಜ ಹಾಗೂ ಬ್ಯಾಪ್ಟಿಸ್ಟ್ ಡಾಯಸ್, ಶಿಕ್ಷಣ ರಕ್ಷಕ ಸಂಘದ ಅಧ್ಯಕ್ಷ ನಾಗರಾಜ್, ವಿದ್ಯಾರ್ಥಿ ಸಂಘದ ನಾಯಕಿ ಆಕ್ಷತಾ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ವಂದನೀಯ ಫಾ| ಡಾ| ರೋಕ್ ಡಿಸೋಜ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕೃಪಾ ಪೂಜಾರಿ ಮತ್ತು ವಿದ್ಯಾರ್ಥಿ ಸಂಘದ ಉಪನಾಯಕ ನೀಲ್ ಡಿಸೋಜ ನಿರೂಪಿಸಿದರು. ಶಿಕ್ಷಕಿ ವನೀತಾ ಫೆರ್ನಾಂಡಿಸ್ ವಂದಿಸಿದರು. ಭಾರತೀಯ ಸಂಸ್ಕ್ರತಿ ಬಿಂಬಿಸುವ ನೃತ್ಯ- ನಾಟಕಗಳ ಮೂಲಕ ವಿದ್ಯಾರ್ಥಿಗಳು ಸುಮಾರು ಎರಡುಸಾವಿರ ಪ್ರೇಕ್ಷಕರ ಮನರಂಜಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now