ಕ್ರೀಡೆಯಿಂದಲೂ ಭವಿಷ್ಯ ಕಟ್ಟಬಹುದು – ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ

ಕ್ರೀಡೆಯಿಂದಲೂ ಭವಿಷ್ಯ ಕಟ್ಟಬಹುದು – ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ

0Shares

ಉಡುಪಿ: ಒಲಂಪಿಕ್ಸ್ ಅಥವಾ ಯಾವುದೇ ಕ್ರೀಡಾಕೂಟದ ಪದಕ ಪಟ್ಟಿಯನ್ನು ಕಂಡು ದೇಶದ ಸಾಧನೆ ಉತ್ತಮವಾಗಿಲ್ಲವೆಂದು ಮಾತ್ರ ನಾವು ವಿಮರ್ಶೆ ಮಾಡುತ್ತೇವೆ. ಆದರೆ ಬಾಲ್ಯದಿಂದ ಕ್ರೀಡೆಗಳಿಗೆ ಹೆತ್ತವರಾಗಲಿ, ಶಿಕ್ಷಕರಾಗಲಿ ಅಥವಾ ಸಮಾಜವಾಗಲಿ ಪ್ರೋತ್ಸಾಹವನ್ನು ನೀಡುವುದು ವಿರಳ. ಕ್ರೀಡೆಯಿಂದ ಮಿಂಚಿ ಭವಿಷ್ಯ ಕಟ್ಟಿದ ಭಾರತರತ್ನ, ಖೇಲ್‌ ರತ್ನ, ಪದ್ಮ ಪ್ರಶಸ್ತಿಗಳನ್ನು ಪಡೆದ ನೂರಾರು ಕ್ರೀಡಾಪಟುಗಳು ನಮಗೆ ಮಾದರಿಯಾಗಬೇಕು. ನಮ್ಮ ನಿಲುವು ಕೇವಲ ಅಂಕಗಳನ್ನು ಗಳಿಸಿ ಕೆಲಸಗಿಟ್ಟಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಕ್ರೀಡಾ ಸಾಧನೆಯಿಂದಲೂ ನಮ್ಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಡಾ| ರೋಕ್ ಡಿ’ಸೋಜ ಹೇಳಿದರು.

ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗು ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ ಇವರು ಜಂಟಿಯಾಗಿ ಆಯೋಜಿಸಿದ ಪೆರ್ಡೂರು ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾ ಕೂಟವನ್ನು ವಿದ್ಯುಕ್ತವಾಗಿ ಉದ್ಘಾಟಸಿ ಮಾತನಾಡಿದರು.

ಪೆರ್ಡೂರು ಹೋಬಳಿಯ ಹನ್ನೊಂದು ಶಾಲೆಗಳ ಕ್ರೀಡಾಪಟುಗಳ ಪಥಸಂಚಲನದಲ್ಲಿ ವಂ|ಫಾ| ಓಲಿವರ್ ನಜ್ರತ್ ಗೌರವ ವಂದನೆಯನ್ನು ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣಾಧಿ ಕಾರಿ ಶ್ರೀ ಜಗದೀಶ್ ಕ್ರೀಡಾಜ್ಯೋತಿ ಪ್ರಜ್ವಲಿಸಿ ಕ್ರೀಡಾಪಟುಗಳನ್ನು ಹುರಿದುಂಬಿಸಿ ದಕ್ಷ ಆಯೋಜನೆಗೆ ಅಭಿನಂದಿಸಿ ದರು.

ಕಲ್ಯಾಣಪುರ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಓಟ, ಎಸೆತ, ಜಿಗಿತ ವಿಭಾಗಗಳಲ್ಲಿ ತಮ್ಮ ಪ್ರದರ್ಶನ ನೀಡಿ ಪದಕಗಳನ್ನು ಪಡೆದರು. ಪ್ರಥಮ ಸ್ಥಾನಿಗಳು ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದರು.

ಕ್ರೀಡಾಕೂಟದ ಉದ್ಘಾಟನ ಸಮಾರಂಭದ ವೇದಿಕೆಯಲ್ಲಿ ಡಾ|ವಿನ್ಸೆಂಟ್ ಆಳ್ವಾ , ಪ್ರಾಂಶುಪಾಲರು, ವಿಜಯ ಕುಮಾರ್ ಶೆಟ್ಟಿ, ಅಶೋಕ್ ಕೆ, ಲೂಕ್ ಡಿಸೋಜ, ರೋಹಿತಾಕ್ಷ, ಪ್ರಸನ್ನ ಕುಮಾರ್, ನಾಗರಾಜ್, ಶ್ರೀಮತಿ ರತ್ನಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಿ|ಆನ್ಸಿಲ್ಲಾ ರೋಶಿನಿ ಡಿಮೆಲ್ಲೊ ಸ್ವಾಗತಿಸಿದರು. ಅಶೋಕ್ ಚಿತ್ರಪಾಡಿ ನಿರೂಪಿಸಿ ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಅನಿತಾ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now