
ಸಾಹಿತ್ಯ ಪ್ರಶಸ್ತಿ ಪಡೆದ ಕವಯತ್ರಿ ವಾಣಿ ಶೆಟ್ಟಿ ಅವರ ಕೃತಿ ಉದ್ಘಾಟಿಸಿದ ನನಗೆ ತುಂಬಾ ಸಂತೋಷವಾಗಿದೆ. ಯಾಕೆಂದರೆ ನಾನು ಅವರೂ ಚಿಕ್ಕಮಂಗಳೂರುನವರು. ಬರಹಗಾರರು ಇನ್ನೂ ಪುಸ್ತಕ ಬರೆಯುವ ಅಗತ್ಯವಿದೆ. ನಾವು ಬರೀ ಮೊಬೈಲ್‌ನ ಒಳಗೆ ಸೇರಿಕೊಂಡಿದ್ದೇವೆ. ಇಂತಹ ಪುಸ್ತಕ ಬರೆಯುವುದು ಸುಲಭವಲ್ಲ, ಸಮಯ, ಸಂಯಮ ಬೇಕು. ಜೊತೆಗೆ ಪುಸ್ತಕ ಬರೆಯುವ ದೈರ್ಯಬೇಕು. ಅದು ದೊಡ್ಡ ವಿಷಯ. ಪುಸ್ತಕ ಬರೆಯಬೇಕಾದರೆ ಆದಕ್ಕೆ ಪರಿಶ್ರಮ, ಅಲೋಚನೆ ಬೇಕು. ಇದೆಲ್ಲಾ ಸೇರಿ ೫೦ ಕವನ ಬರೆಯುವುದು ಎಂದರೆ ಅಭಿಮಾನದ ವಿಷಯ ಎಂದು ಬಂಟ್ಸ್ ಸಂಘ ಮುಂಬಯಿ ಗೌರವ ಪ್ರದಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ನುಡಿದರು.
ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿನ ಗುರು ನಾರಾಯಣ ಸಭಾಗೃಹದಲ್ಲಿ ಶ್ರೀ ಮೂಕಾಂಬಿಕಾ ಪ್ರಕಾಶನ ಮೂಡುಬಿದಿರೆ ಪ್ರಕಾಶಿತ ಕವಯತ್ರಿ ವಾಣಿ ಶೆಟ್ಟಿ ಮುಂಬಯಿ (ಮೂಡುಬಿದಿರೆ) ಇವರ `ಕಬಂಧಬಾಹು’ ಕವನ ಸಂಕಲನ ಬಿಡುಗಡೆ ಗೊಳಿಸಿ ಡಾ| ಆರ್.ಕೆ ಶೆಟ್ಟಿ ಮಾತನಾಡಿದರು.
ವಾಸ್ತು ಶಾಸ್ತ್ರಜ್ಞ ಅಶೋಕ್ ಪುರೋಹಿತ್ ಆಶೀರ್ವಚನಗೈದರು. ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ದಾಸ್ ಬಿಲ್ಡರ್ ಡೆವಲಪರ್ಸ್ ಮಂಗಳೂರು ಇದರ ನಿರ್ದೇಶಕ ಮೋಹನದಾಸ್ ಶೆಟ್ಟಿ, ಅತಿಥಿ ಆಭ್ಯಾಗತರುಗಳಾಗಿ ಉಪಸ್ಥಿತರಿದ್ದರು.
ನಾವೆಲ್ಲರೂ ಕನ್ನಡದಲ್ಲಿ ಮಾತನಾಡಬೇಕು ಏಕೆಂದರೆ ಇದು ಕನ್ನಡದ ಪುಸ್ತಕ. ಪುಸ್ತಕದ ವಿಮರ್ಶೆ ಮಾಡಿದಾಗ ಅರ್ಧ ಪುಸ್ತಕ ಓದಿದಾಗೇ ಆಯಿತು. ನಮ್ಮ ಕವಿಗಳು ಮನುಷ್ಯತ್ವ ಬಗ್ಗೆ ಆಳವಾಗಿ ತಿಳಿಸಿದವರು. ಇಂದು ನಮ್ಮ ಕವಿ ಶಾರದಾಂಬೆಯ ಪುತ್ರಿಯಾದ ಮೂಡಬಿದ್ರೆಯ ವಾಣಿ ಶೆಟ್ಟಿ ಅವರ ಎಲ್ಲಾ ಕೃತಿಗಳು ಮಾನವೀತೆಯ ದೃಷ್ಟಿಯನ್ನು ಪ್ರತಿಪಾದಿಸುತ್ತಿದೆ. ಮರಾಠಿ ಮಣ್ಣಿನಲ್ಲಿ ಆ ಚಿಕ್ಕಮಂಗಳೂರಿನಿಂದ ಇಲ್ಲಿ ಬಂದು ಕವಿತೆಯನ್ನು ಬರೆದು ಕನ್ನಡದ ಭಾಷಾಭಿಮಾನ ಉಳಿಸುವುದು ಒಂದು ದೊಡ್ಡ ಅಭಿಮಾನ ಅಧ್ಯಕ್ಷೀಯ ಭಾಷಣದಲ್ಲಿ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.
ಅತಿಥಿಗಳು ಸಂದರ್ಭೋಚಿತವಾಗಿ ಮಾಡಿ ಅಭಿನಂದಿಸಿದರು. ಕೃತಿಕರ್ತೆ ವಾಣಿ ಶೆಟ್ಟಿ ಕವನ ಸಂಕಲನಕ್ಕೆ ಸ್ಪಂದಿಸಿದ ಎಲ್ಲರನ್ನೂ ಅಭಿವಂದಿಸಿ ಅತಿಥಿಗಳಿಗೆ ಸ್ಮರಣಿಕೆ, ಪುಷ್ಪಗುಚ್ಫಗಳನ್ನೀಡಿ ಗೌರವಿಸಿದರು. ಪತ್ರಕರ್ತ-ಲೇಖಕ ಹರೀಶ್ ಹೆಜ್ಮಾಡಿ ಕೃತಿ ಪರಿಚಯಿಸಿದರು.
ಸುಶೀಲಾ ದೇವಾಡಿಗ ಪ್ರಾರ್ಥನೆಯನ್ನಾಡಿದರು. ನವೀನ್ ಪಡು ಇನ್ನ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ರಂಗನಟ-ನಿರ್ದೇಶಕ ರಮೇಶ ಶಿವಪುರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.
ಮನೋರಂಜನೇಯ ಅಂಗವಾಗಿ ಪ್ರಸಿದ್ಧ ಗಾಯಕ ಹರೀಶ್ ಶೆಟ್ಟಿ ಎರ್ಮಾಳ್ ಮತ್ತು ಪನ್ನಿ ಕ್ರಿಯೇಶನ್ಸ್ ತಂಡವು ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸಿತು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now