
ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ಹಾಗೂ ಸಮುದಾಯ ವೈದ್ಯಕೀಯ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜ್, ಮಣಿಪಾಲ ಇವರ ಸಹಯೋಗದೊಂದಿಗೆ ಆಹಾರ ಸುರಕ್ಷತಾ ಕ್ರಮಗಳ ಬಿಗುವುಗೊಳಿಸುವ ಕುರಿತು ಸಂಬಂಧಪಟ್ಟ ವಿಭಾಗಗಳ ಪ್ರತಿನಿಧಿಗಳಿಗೆ ಎರಡು ದಿನಗಳ ತರಬೇತಿ ಕಾರ್ಯಗಾರವು ದಿನಾಂಕ 25 ಮತ್ತು 26, ಮಾರ್ಚ್, 2026 ರಂದು ಇಂಟರ್ಯಾಕ್ಟ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಗಾರವನ್ನು ಮಾಹೆ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ಕೆ. ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ದೇಶದಲ್ಲಿ ಕಲುಷಿತ ಆಹಾರ ಸೇವನೆಯಿಂದ ಪ್ರತಿವರ್ಷ ಸರಾಸರಿ 1,20,000 ಜನರು ಸಾವನ್ನಪ್ಪುತ್ತಿದ್ದು, ಆ ಕಾರಣದಿಂದ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಜಾಗ್ರತೆ, ಅಗತ್ಯ ಕ್ರಮಗಳು ದೊಡ್ಡ ಪ್ರಮಾಣದ ಆಹಾರ ತಯಾರಿಕಾ ಘಟಕಗಳಲ್ಲಿ ಆಹಾರ ಶುಚಿತ್ವ ಕಾಪಾಡಲು ಯಾಂತ್ರಿಕತೆಗೊಳಿಸಬೇಕಾದ, ಆಹಾರದ ಉತ್ಕ್ರಷ್ಟ ಮಟ್ಟದಲ್ಲಿ ಕಾಯ್ದುಕೊಳ್ಳಬೇಕಾದ ಅಗತ್ಯತೆಗಳ ಬಗ್ಗೆ ಸಲಹೆ ನೀಡಿದರು. ನಂತರ ಸಹ ಡೀನ್ ಡಾ. ವಿನೋದ್ ಸಿ. ನಾಯಕ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಹಮ್ಮಿಕೊಂಡ ಇಂತಹ ಕಾರ್ಯಗಾರಗಳು ಅತೀ ಅವಶ್ಯಕವೆಂದು ತಿಳಿಸಿದರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿ ಡಾ. ಪಶುಪತಿ, ರಾಷ್ಟ್ರೀಯ ಆಹಾರ ಸುರಕ್ಷತೆಗಳ ಸಲಹೆಗಾರರು ಮಾತನಾಡಿ, ಸಮುದಾಯದಲ್ಲಿ ಆಹಾರ ಸೇವನೆಗೆ ಸಂಬಂಧಿಸಿದ ಅನಾರೋಗ್ಯ ಅಥವಾ ಸಾವು ಸಂಭವಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಪ್ರತೀ ಆಹಾರ ತಯಾರಿಕಾ, ಸಂಗ್ರಹಣಾ, ವಿತರಣಾ ಘಟಕಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಮಾಹೆ ಮಣಿಪಾಲ ಕ್ಯಾಂಪಸ್ನ ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕ ಕಾರ್ಯದರ್ಶಿ ಡಾ. ದಿವ್ಯಾ ಅರವಿಂದ್ ಪ್ರಭು ಅವರು ವಂದಿಸಿದರು. ಡಾ. ರತ್ನಾ ಜೆಯ್ ಅವರು ಕಾರ್ಯಕ್ರಮ ನಿರೂಪಿಸಿದರು
ಎರಡು ದಿನಗಳ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಆಹಾರ ಸುರಕ್ಷತೆಗಳ ಸಲಹೆಗಾರರಾದ ಡಾ. ವಿ. ಪಶುಪತಿ, ಆಹಾರ ತಯಾರಿಕಾ ಉಪಕರಣಗಳ ಯಾಂತ್ರೀಕರಣದ ತಂತ್ರಜ್ಞದ ಪರಿಣಿತರಾದ ಅಲೆಕ್ಸ್ ಜಾನ್ ಜೆ., ಮಾಹೆ ಮಣಿಪಾಲ ಕ್ಯಾಂಪಸ್ನ ಆಹಾರ ಮತ್ತು ನೈರ್ಮಲ್ಯ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್, ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರಾದ ಡಾ. ಮುರಳೀಧರ್ ವರ್ಮ, ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ದಿವ್ಯಾ ಅರವಿಂದ್ ಪ್ರಭು, ಎನ್ಐಟಿಕೆ ಸುರತ್ಕಲ್ನ ರಸಾಯನಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಜಗನ್ನಾಥ್ ಟಿ. ಕಲಾಥಿ, ವಾಗ್ಶಾದ ಸಹಾಯಕ ಪ್ರಾಧ್ಯಾಪಕರಾದ ಅಜಿತ್ ನಾಯಕ್ ಹಾಗೂ ಆಹಾರ ತಜ್ಞರಾದ ಸುವರ್ಣ ಹೆಬ್ಬಾರ್ ಅವರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ 143 ಜನ ಸಂಬಂಧಿಸಿದ ವಿಭಾಗಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now