
ಮಣಿಪಾಲದ ಅದರ್ಶ ನಗರದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಗ್ನಿಶಾಮಕ ದಳದ ಕಚೇರಿ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು
ಅಗ್ನಿಶಾಮಕ ದಳದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ ನಗರದ ಬಹು ವರ್ಷಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ದಳ ಘಟಕಕ್ಕೆ ನನ್ನ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಆಗ್ನಿ ಶಾಮಕ ದಳವನ್ನು ಮಂಜೂರು ಮಾಡಿದ್ದು, ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಮಣಿಪಾಲ ಕೈಗಾರಿಕಾ ಪ್ರದೇಶ, ಬೃಹತ್ ವಸತಿ ಸಮುಚ್ಚಯಗಳನ್ನು ಒಳಗೊಂಡ ಮಣಿಪಾಲ ನಗರಕ್ಕೆ ತುರ್ತು ಸಂದರ್ಭದಲ್ಲಿ ಉಡುಪಿಯಿಂದ ಅಗ್ನಿಶಾಮಕ ವಾಹನ ಬರುವ ಅನಿವಾರ್ಯತೆಯಿಂದ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಲು ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಅತ್ಯವಶ್ಯಕವಾಗಿದ್ದ ಅಗ್ನಿಶಾಮಕ ದಳ ಶೀಘ್ರ ಕಾರ್ಯಾರಂಭಗೊಳ್ಳುವ ಮೂಲಕ ಜನರ ಸೇವೆಗೆ ಲಭ್ಯವಾಗಲಿದೆ ಎಂದರು.
ಮಣಿಪಾಲ ವಾರ್ಡಿನ ಮಾಜಿ ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ ಮಣಿಪಾಲ ಭಾಗಕ್ಕೆ ಅತೀ ಅವಶ್ಯಕವಾಗಿದ್ದ ಅಗ್ನಿಶಾಮಕ ದಳ ಘಟಕ ಆರಂಭಕ್ಕೆ ವಿಶೇಷ ಮುತುವರ್ಜಿವಹಿಸಿ ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಶ್ರೀಮತಿ ಕಲ್ಪನಾ ಸುಧಾಮ, ಶ್ರೀ ಹರೀಶ್ ಶೆಟ್ಟಿ, ಶ್ರೀ ಟಿ ಜಿ ಹೆಗಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ಈಶ್ವರ ನಗರ ವಾರ್ಡ್ ಅಧ್ಯಕ್ಷರಾದ ಶ್ರೀ ಸುರೇಶ್ ಆಚಾರ್ಯ, ಕಾರ್ಯದರ್ಶಿ ಶ್ರೀ ಕೃಷ್ಣ ನಾಯ್ಕ್, ಪ್ರಮುಖರಾದ ಶ್ರೀ ನರಸಿಂಹ ನಾಯಕ್, ಶ್ರೀ ಪೃಥ್ವಿರಾಜ್, ಶ್ರೀ ನಿತಿನ್ ಪೈ, ಶ್ರೀ ಗುರುರಾಜ್ ಭಂಡಾರಿ, ಶ್ರೀ ಸತೀಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now