ಮಂಗಳೂರು, ನ.೧೦: ಖ್ಯಾತ ಸಾಂಸ್ಕ್ರತಿಕ ಸಂಘಟಕ ಮತ್ತು ಕೊಂಕಣಿ ನಾಟಕ ಸಭಾ ಸಂಸ್ಥೆ ಹಾಗೂ ಮಂಗಳೂರಿನ ಹೆಸರಾಂತ ಡಾನ್ ಬಾಸ್ಕೋ ಸಭಾಂಗಣದ ದೀರ್ಘಕಾಲದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ (೬೨.) ಅಲ್ಪಾವಧಿಯ ಆರೋಗ್ಯ ಸಮಸ್ಯೆಯಿಂದ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು.
ಬೋನಿಫಾಸ್ ಪಿಂಟೋ ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ೨೮ ವರ್ಷಗಳ ಕಾಲ ಕೆಎನ್‌ಎಸ್‌ಗೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಸಂಘಟನಾ ಚಾತುರ್ಯತೆ, ಸಮಯಪ್ರಜ್ಞೆ ಮತ್ತು ಸರಳ ಸ್ವಭಾವದಿಂದಾಗಿ ಜನರ ಮನ್ನಣೆ ಗಳಿಸಿದ್ದರು.
ಸ್ಪರ್ಧೆಗಳ ಆಯೋಜನೆ, ರಂಗಭೂಮಿ ವಿನ್ಯಾಸ ಮತ್ತು ರಂಗಭೂಮಿಯ ವಸ್ತ್ರವಿನ್ಯಾಸ ಹಾಗೂ ನಿರ್ವಹಣೆಯಲ್ಲಿ ವಿಶೇಷ ಪರಿಣಿತಿ ಹೊಂದಿದವರಾಗಿದ್ದರು.ಮೃತರು ರೀಟಾ ಪಿಂಟೋ ಮತ್ತು ದಿವಂಗತ ಸಿಪ್ರಿಯನ್ ಪಿಂಟೋ ಅವರು ಪುತ್ರರಾಗಿದ್ದು, ಜಿನ್ನಾ, ಲೋನಾ, ಡಯಾನಾ, ಆಶಾ ಅವರ ಸಹೋದರಿಯರನ್ನು ಅಗಲುದ್ದಾರೆ.
ಇನ್ನು ಬೋನಿಫೇಸ್ ಪಿಂಟೋ ಅವರ ಪಾರ್ಥಿವ ಶರೀರವನ್ನು ನ. ೧೧ರಂದು ಡಾನ್ ಬಾಸ್ಕೋ ಹಾಲ್‌ನಲ್ಲಿ ಮಧ್ಯಾಹ್ನ ೨.೧೫ ಕ್ಕೆ ಮತ್ತು ಜೆಪ್ಪು ಚರ್ಚ್ ನಲ್ಲಿ ೩.೩೦ಕ್ಕೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಸಂಜೆ ೪ ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now