ಹಾಸ್ಯರಂಗದಲ್ಲಿ ಮೈಲುಗಲ್ಲು ರೂಪಿಸಿಕೊಂಡ ದಾಯ್ಜಿವಲ್ರ್ಡ್‍ನ ಪ್ರೈವೇಟ್ ಚಾಲೆಂಜ್
ACD Systems Digital Imaging

ಹಾಸ್ಯರಂಗದಲ್ಲಿ ಮೈಲುಗಲ್ಲು ರೂಪಿಸಿಕೊಂಡ ದಾಯ್ಜಿವಲ್ರ್ಡ್‍ನ ಪ್ರೈವೇಟ್ ಚಾಲೆಂಜ್

0Shares

ಮಂಗಳೂರು, ಆ.10: ಕರ್ನಾಟಕ ಕರಾವಳಿಯ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ದಾಯ್ಜಿವಲ್ರ್ಡ್ ಟೆಲಿವಿಷನ್‍ನ ಜನಪ್ರಿಯ ತುಳು ಹಾಸ್ಯ ಕಾರ್ಯಕ್ರಮ ಪ್ರೈವೇಟ್ ಚಾಲೆಂಜ್ ಮೈಲುಗಲ್ಲು ರೂಪಿಸಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಹಾಸ್ಯ ಕಾರ್ಯಕ್ರಮದÀ 200ನೇ ಸಂಚಿಕೆ ಇದೇ ಭಾನುವಾರ (ಆ.10) ರಾತ್ರಿ 9.00 ಗಂಟೆಗೆ ದಾಯ್ಜಿವಲ್ರ್ಡ್ ಟಿವಿಯಲ್ಲಿ ಹಾಗೂ ಯೂಟ್ಯೂಬ್ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲೂ ಏಕಕಾಲದಲ್ಲಿ ಪ್ರಸಾರವಾಗಲಿದೆ ಎಂದು ದಾಯ್ಜಿವರ್ಲ್ಡ್ ವಿೂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ವಾಲ್ಟರ್ ಡಿ’ಸೋಜಾ ನಂದಳಿಕೆ ತಿಳಿಸಿದ್ದಾರೆ.

ತುಳು ನಟ ಮತ್ತು ರಂಗ ಕಲಾವಿದ ಅರವಿಂದ ಬೋಳಾರ್ ಹಾಗೂ ವಾಲ್ಟರ್ ನಂದಳಿಕೆ ನಿರೂಪಣೆಯಲ್ಲಿ ಕಳೆದು ಹೋದ ಕೊವಿಡ್-19 ಲಾಕ್‍ಡೌನ್ ಅವಧಿಯಲ್ಲಿ, 2020ರ ಮೇ 18ರಂದು ಆರಂಭವಾದ ಈ ಕಾರ್ಯಕ್ರಮ ಜಾಗತಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ. ಸಾಂಕ್ರಮಿಕ ಸಂದರ್ಭದಲ್ಲಿ ಪ್ರೇಕ್ಷಕರನ್ನು ಮನರಂಜಿಸಲು ಕೆಲವೇ ಸಂಚಿಕೆಗಳ ಮಟ್ಟಿಗೆ ಯೋಜಿಸಿದ್ದರೂ, ಪ್ರೇಕ್ಷಕರಿಂದ ಬಂದ ಭಾರೀ ಪ್ರತಿಕ್ರಿಯೆ ಇದನ್ನು ವಿಶ್ವವ್ಯಾಪಿ ಜನಪ್ರಿಯ ಸರಣಿಯನ್ನಾಗಿ ರೂಪಿಸಿತು.

ನಾಲ್ಕು ಯಶಸ್ವಿ ಸೀಸನ್‍ಗಳಲ್ಲಿ, ಅರವಿಂದ ಬೋಳಾರ್ ತುಳುನಾಡಿನ ಸಮೃದ್ಧ ಸಂಸ್ಕೃತಿ, ಜೀವನಶೈಲಿ ಮತ್ತು ವೃತ್ತಿಗಳನ್ನು ಪ್ರತಿಬಿಂಬಿಸುವ 200 ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಸೃಜನಶೀಲ ವೈವಿಧ್ಯತೆ ಮತ್ತು ನಗುವು ಹುಟ್ಟಿಸುವ ಕಥನಶೈಲಿ ತುಳು ಭಾಷಿಗರಷ್ಟೇ ಅಲ್ಲದೆ, ಜಗತ್ತಿನಾದ್ಯಂತ ತುಳು ತಿಳಿಯದವರನ್ನೂ ಆಕರ್ಷಿಸಿದೆ.

ಯೂಟ್ಯೂಬ್‍ನಲ್ಲಿ 3 ಕೋಟಿ ವೀಕ್ಷಣೆಗಳನ್ನು ದಾಟಿರುವ ಈ ಕಾರ್ಯಕ್ರಮ, ಆನ್‍ಲೈನ್‍ನಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ತುಳು ಹಾಸ್ಯ ಸರಣಿಗಳಲ್ಲಿ ಒಂದಾಗಿದೆ. ದೂರದರ್ಶನದ ಹೊರತಾಗಿ, ಪ್ರೈವೇಟ್ ಚಾಲೆಂಜ್ ಎಂಎಕ್ಸ್ ಪ್ಲೇಯರ್, ವಿಐ (ವೋಡಾಫೆÇೀನ್ ಐಡಿಯಾ) ಮತ್ತು ಹುಂಗಾಮಾ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿಯೂ ಪ್ರಸಾರಗೊಳ್ಳುತ್ತಿದೆ.

ಈ ಸರಣಿಯ ಜನಪ್ರಿಯತೆ ಬೋಳಾರ್ ವರ್ಸಸ್ ನಂದಳಿಕೆ ಜೋಡಿಯನ್ನು ಪೆರ್ಥ್ ಮತ್ತು ಸಿಡ್ನಿ (ಆಸ್ಟ್ರೇಲಿಯಾ), ಇಸ್ರೇಲ್, ಥೈಲ್ಯಾಂಡ್, ನೈಜೀರಿಯಾ ಹಾಗೂ ಯುಎಇ, ಖತರ್, ಬಹ್ರೈನ್, ಕುವೈತ್ ಸೇರಿದಂತೆ ಬಹುತೇಕ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಲೈವ್ ಪ್ರದರ್ಶನಗಳು ಹಾಗೂ ಅತಿಥಿs ಹಾಜರಾತಿಗಳಿಗೆ ಕರೆದುಕೊಂಡು ಹೋಗುವಷ್ಟು ಪ್ರಸಿದ್ಧಿ ಪಡೆಯುವಂತಾಗಿದೆ.

ಈ ವಿಶೇಷ 200ನೇ ಸಂಚಿಕೆನೊಂದಿಗೆ ಸೀಸನ್ 4 ಮುಕ್ತಾಯ ಗೊಳ್ಳಲಿದ್ದು, ಸ್ವಲ್ಪ ವಿರಾಮದ ನಂತರ ಹೊಸ ಆಲೋಚನೆಗಳು, ಹೊಸ ತತ್ವಗಳು ಮತ್ತು ಇನ್ನಷ್ಟು ಮನರಂಜನೆಯೊಂದಿಗೆ ಪ್ರೈವೇಟ್ ಚಾಲೆಂಜ್ ಜಾಗತಿಕ ಪ್ರೇಕ್ಷಕರಿಗಾಗಿ ಮರಳುವುದಾಗಿ ರಚನೆಕಾರÀರು ಭರವಸೆ ನೀಡಿದ್ದಾರೆ ಎಂದು ವಾಲ್ಟರ್ ನÀಂದಳಿಕೆ ತಿಳಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now