
ದಕ್ಷಿಣಕನ್ನಡ ಆಲ್ಫ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ನಿಗಮ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಇದರ ಸಹಯೋಗದೊಂದಿಗೆ ಅಲ್ಪಾಸಂಖ್ಯಾತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರವನ್ನು ವಿಧಾನ ಪರಿಷತ್ತು ಸದಸ್ಯರಾದ ಮಾನ್ಯ ಶ್ರೀ ಐವಾನ್ ಡಿಸೋಜಾ ರವರು ಉದ್ಗಾಟಿಸಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಆಗೂ ಕ್ರಿಷಿಯನ್ ಅಭಿವೃದ್ಧಿ ನಿಗಮದಿಂದ ಸಿಗುವ ನಮ್ಮ ಸಮುದಾಯದ ಫಲಾನುಭವಿ ಗಳಿಗೆ ಸರಕಾರ ಕೊಡುವ ಸಾವುಲಭ್ಯಗಳ ಮಾಹಿತಿಯನ್ನು ಪಡೆದು ಅದನ್ನು ಪಡೆಯಲು ಪ್ರಯತ್ನಿಸಬೇಕು. ಕಥೋಲೀಕ್ ಸಭಾ ಅಧಾರಕ್ ಮುಂದಾಳತ್ವವನ್ನು ವಹಿಸಿ ಅಗತ್ಯವಿರುವ ಎಲ್ಲಾ ಫಲಾನುಭವಿಗಳಿಗೆ ಸಿಗುವ ಹಾಗೆ ಮಾಡಬೇಕೆಂದು ಕರೆ ಕೊಟ್ಟರು.

ಈ ಕಾರ್ಯಕ್ರಮಕ್ಕೆ ಆಶೀರ್ವಚನವನ್ನಿತ್ತು ಮಾತನಾಡಿದ ಕ್ಯಾಥೊಲೀಕ್ ಸಭೆಯ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಫಾ। ವಿಕ್ಟರ್ ಡಿಸೋಜಾ ರವರು ಮಾತನಾಡಿ ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಅಗತ್ಯಇರುವ ಫಲಾನುಭವಿಗಳಿಗೆ ಎಲ್ಲಾ ಚರ್ಚ್ ಹಾಗೂ ವಾಳೆಯ ಮುಖಾಂತರ ದೊರಕಿಸಿ ಕೊಡಬೇಕಾಗಿ ಕರೆ ಕೊಟ್ಟರು.
ಮುಖ್ಯ ಅಥಿತಿಯಾಗಿ ಬಾಗವಹಿಸಿದ ಕಥೋಲಿಕ್ ಸಭಾ ಮಾಂಗ್ಳೂರು ಪ್ರದೇಶ್(ರಿ) ಅಧ್ಯಕ್ಷರಾದ ಸಂತೋಷ್ ಡಿಸೋಜಾ ರವರು ಮಾತನಾಡಿ ಅಲ್ಪಸಂಖ್ಯಾತರಿಗೆ ಸಿಗುವ ಸವಲತ್ತುಗಳನ್ನು ಮತ್ತು ಮಾಹಿತಿ ಶಿಬಿರವನ್ನು ಆಯೋಜಿಸಿದಕ್ಕೆ ಅದ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಅಭಿನಂದಿಸಿದರು.
ಇನ್ನೋರ್ವ ಮುಖ್ಯ ಅಥಿತಿ ಪಿಯೂಸ್ ಎಲ್ ರೋಡ್ರಿಗಸ್ ಇವರು ಮಾತನಾಡಿ ಕೇವಲ ಅಲ್ಪಸಂಖ್ಯಾತರಿಗೆ ಹಾಗೂ ಕ್ರಿಶ್ಚಿಯನ್ ಅಭಿರ್ವದ್ಧಿ ನಿಗಮದಿಂದ ಸಿಗುವ ಮಾಹಿತಿ ನೀಡಿದರೆ ಸಾಕಾಗದು. ನಮ್ಮ ಸಮುದಾಯದಲ್ಲಿ ಕೆಲವು ಜನರು ಖಖಿಅ ಹಾಗೂ ಇತರ ಸವಲತ್ತುಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಅವರಿಗಾಗಿ ಮುಂದಿನ ದಿನಗಳಲ್ಲಿ ಅವರ ಕೆಲಸವನ್ನು ಮಾಡಿ ಕೊಡಬೇಕಾಗಿ ಕಥೋಲಿಕ್ ಸಭಾ ಮುಂದಾಳತ್ವವನ್ನು ವಹಿಸಿ ಕೊಳ್ಳಬೇಕಾಗಿ ವಿನಂತಿಸಿದರು
ಇನ್ನೋರ್ವ ಮುಖ್ಯ ಅಥಿತಿ ಶ್ರೀ ಅರುಣ್ ರೋಶನ್ ಡಿಸೋಜಾ ರವರುಕ್ ಮಾತನಾಡಿ ಮಾಹಿತಿ ಶಿಬಿರವನ್ನು ಆಯೋಜಿಸಿದಕ್ಕಾಗಿ ಕಥೋಲಿಕ್ ಸಭಾ ಬಂಟ್ವಾಳ ವಲಯವನ್ನು ಆಭಿನಂದಿಸಿ ನಮ್ಮಸಮುದಾಯವು ಅಲ್ಪಸಂಖ್ಯಾತ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಮುಂದೆ ಬರುತ್ತಿಲ್ಲ. ಈ ಮಾಹಿತಿ ಶಿಬಿರವು ಅಗತ್ಯವಾಗಿರುತ್ತದೆ ಎಂದು ನುಡಿದರು.

ಇನ್ನೋರ್ವ ಮುಖ್ಯ ಅಥಿತಿ ಶ್ರೀ ಸ್ಟ್ಯಾನಿ ಲೋಬೊ ಕೇಂದ್ರೀಯ ಮಾಜಿ ಅಧ್ಯಕ್ಷರು ಹಾಗೂ ರಾಜಕೀಯ ಸಂಚಾಲಕರು ಮಾತನಾಡಿ ಅಲ್ಪಸಂಖ್ಯಾತ ಇಲಾಖೆ ಮತ್ತು ನಿಗಮ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಹಾಗೂ ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳಿಗೆ ಸಿಗುವಾಗೆ ಕಥೋಲಿಕ್ ಸಭಾ ಮಾಂಗ್ಳೂರು ಪ್ರದೇಶ್ (ರಿ) ಇದರ ನೇತ್ರತ್ವದಲ್ಲಿ ಇಲ್ಲಿಯವರೆಗೆ ಎರಡು ಸಭೆಗಳನ್ನು ಮಾಡಿ ಕಾರ್ಯಯೋಜನೆಯನ್ನು ಸಿದ್ಧಪಡಿಸುತಿದ್ದೇವೆ. ಮುಂದಿನ ದಿನ ದಿನಗಳಲ್ಲಿ ಎಲ್ಲಾ ಗಟಕಗಳು ಹಾಗೂ ಕಥೋಲಿಕ್ ಸಭೆಯ ಸದಸ್ಯರುಗಳು ಮುಂದಾಳತ್ವವನ್ನು ವಹಿಸಿ ನಮ್ಮ ಸಮುದಾಯದ ಜನರಿಗೆ ಸವಲತ್ತುಗಳನ್ನು ಸಿಗುವ ಹಾಗೆ ಹಮ್ಮಿಕೊಳ್ಳಬೇಕಾಗಿ ಕರೆ ಕೊಟ್ಟರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸಿಗುವ ಸವಲತ್ತುಗಳ ಮಾಹಿತಿಯನ್ನು ಜಿಲ್ಲಾ ವ್ಯವಸ್ಥಾಪಕರಾದ ಮಂಜುನಾಥ್ ಆರ್ ರವರು ನೀಡಿದರು
ಅಲ್ಪಕ್ಷಂಖ್ಯಾತ ನಿಗಮ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಜಿಲ್ಲಾ ವ್ಯವಸ್ಥಾಪಕರಾದ ಯಶೋಧರ ಜೆ ರವರು ನೀಡಿದರು.
ಸಮರoಭದ ಅಧ್ಯಕ್ಷತೆಯನ್ನು ವಹಿಸಿದ ವಲಯ ಅಧ್ಯಕ್ಷರಾದ ಶ್ರೀಯುತ ಜೋನ್ ಲಾಸ್ರಾಡೊ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಆಸ್ಟಿನ್ ಲೋಬೋ ರವರು ವಂದಿಸಿದರು. ಕಾರ್ಯಕ್ರಮವನ್ನು ಬಾoಬಿಲ ಗಟಕದ ಕೆಲ್ವಿನ್ ಫೆರ್ನಾಂಡಿಸ್ ರವರು ನಿರೂಪಿಸಿದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























