
ಮಂಗಳೂರು: ’ಮನುಷ್ಯನ ಜೀವನದಲ್ಲಿ ಕಾಲಕ್ಕೆ ಮೌಲ್ಯ ಕೊಡಬೇಕೆಂಬುದನ್ನು ನಮ್ಮ ಸಮಾಜ ಕಲಿಸಿಕೊಟ್ಟಷ್ಟು ಬೇರೆಲ್ಲೂ ಕಲಿಸಿಕೊಟ್ಟಿರಲಿಕ್ಕಿಲ್ಲ. ಆ ಕಲಿಕೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ದೃಷ್ಟಿಯಿಂದ ಯುಗಾದಿ ಉತ್ಸವವನ್ನು ಆಚರಿಸಲಾಗುತ್ತದೆ,’ ಎಂದು ಎಂ.ಐ.ಟಿ ಮಣಿಪಾಲದ ಪ್ರಾಧ್ಯಾಪಕ ಡಾ.ವಾದಿರಾಜ ಗೋಪಾಡಿ ಹೇಳಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆಆರ್‌ಎಂಎಂಎಸ್) ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗ ಇತ್ತೀಚೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಧಾರಣೆ, ಪರಿವರ್ತನೆ ನಿರಂತರ ಪ್ರಕ್ರಿಯೆ. ಇಂತಹ ಪ್ರಕ್ರಿಯೆಗಳನ್ನು ಶಿಕ್ಷಕರಾದ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರ ದೃಷ್ಟಿ,ವಿದ್ಯಾರ್ಥಿಗಳ ದೃಷ್ಟಿಯಿಂದ ಸಮಸ್ಯೆಯನ್ನು ಅರಿತು ಜೀವನವನ್ನು ಸಾರ್ಥಕಗೊಳಿಸಬೇಕು, ಎಂದರು.
ಎಂಜಿಎಂ ಕಾಲೇಜು ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಿನಾರಾಯಣ ಕಾರಂತರು ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸುರೇಂದ್ರ ಶೆಟ್ಟಿ, ಕೆಆರ್‌ಎಂಎಸ್‌ಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಡಾ.ಮಾಧವ ಎಂ ಕೆ, ಪುತ್ತಿ ವಸಂತ ಕುಮಾರ್, ರಾಘವೇಂದ್ರ ತುಂಗಾ ಮುಂತಾದವರು ಉಪಸ್ಥಿತರಿದ್ದರು.
ಕೆಆರ್‌ಎಂಎಸ್‌ಎಸ್ ಮಂಗಳೂರು ವಿಭಾಗದ ಅಧ್ಯಕ್ಷೆ ಪ್ರೊ. ವಾಣಿ ಯು ಸ್ವಾಗತಿಸಿದರು. ವಿಭಾಗ ಕಾರ್ಯದರ್ಶಿ ರಾಜೇಶ್ ಕುಮಾರ್ ವಂದಿಸಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























