ರಾಜ್ಯಮಟ್ಟದ ಯುವಜನೋತ್ಸವ: ಪದಕ ಪಡೆದ ಸಂದೀಪ್ ಸಾಮಾಯಿ

ರಾಜ್ಯಮಟ್ಟದ ಯುವಜನೋತ್ಸವ: ಪದಕ ಪಡೆದ ಸಂದೀಪ್ ಸಾಮಾಯಿ

0Shares

ಮಂಗಳೂರು: ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿ ಸಂದೀಪ್ ಸಾಮಾಯಿ ಹಲವು ಸ್ಪರ್ಧೆಯಲ್ಲಿ ಪದಕ ಪಡೆದಿದ್ದಾರೆ.

ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಾರಾವಿ, ಗದಗ ಇಲ್ಲಿ ಫೆ. 18 ರಿಂದ 22ರವರೆಗೆ ನಡೆದ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿ ಪ್ರಹಸನ ಸ್ಪರ್ಧೆ ದ್ವಿತೀಯ ಸ್ಥಾನ, ಸಮೂಹ ಗಾಯನ ಸ್ಪರ್ಧೆ ದ್ವಿತೀಯ ಸ್ಥಾನ, ಏಕಪಾತ್ರ ಅಭಿನಯ ತೃತೀಯ ಸ್ಥಾನ, ಮೂಕಾಭಿನಯ ಸ್ಪರ್ಧೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಾಗಿರುವ ಸಂದೀಪ್ ಸಾಮಾಯಿ ಇವರು ಪ್ರಸ್ತುತ ದ್ವಿತೀಯ ಬಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಎರಡು ವಾರ್ಷಿಕ ವಿಶೇಷ ಶಿಬಿರಗಳಲ್ಲಿ ಭಾಗವಹಿಸಿ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದಿರುತ್ತಾರೆ. ಇತ್ತೀಚಿಗೆ ಸಂಪನ್ನಗೊಂಡ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ 8 ಸ್ವಯಂಸೇವಕರ ತಂಡವನ್ನು ಪ್ರತಿನಿಧಿಸಿ ಸಮಗ್ರ ಚಾಂಪಿಯನ್‌ ಶಿಪ್ ಪ್ರಶಸ್ತಿ ಪಡೆದಿದ್ದಾರೆ.

ಇದರ ಜೊತೆಗೆ ಇತ್ತೀಚಿಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನಡೆದ ಪೂಜ್ಯಶ್ರೀ ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಅತ್ಯುತ್ತಮ ವೈಯಕ್ತಿಕ ಚರ್ಚಾ ಸ್ಪರ್ಧಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಜೊತೆಗೆ ಮಾ. 27ರಂದು ರಾಷ್ಟ್ರೀಯ ಸ್ವಯಂಸೇವಕರಿಗಾಗಿ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಅರ್ಧಾವಳಿಯಲ್ಲಿ ತರ್ಕ ಮಂಚ (ವಾಗ್ವಾದ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು 5,000 ರೂ ನಗದು ಬಹುಮಾನ ಪಡೆದಿದ್ದಾರೆ.

ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುರೇಶ್, ಹಾಗೂ ಡಾ. ಗಾಯತ್ರಿ ಎನ್. ಇವರು ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now