ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) – ದಿವಂಗತ ಕಾಸ್ಮಿರ್ ಮಿನೇಜಸ್ ರಿಗೆ ಶೃದ್ಧಾಂಜಲಿ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) – ದಿವಂಗತ ಕಾಸ್ಮಿರ್ ಮಿನೇಜಸ್ ರಿಗೆ ಶೃದ್ಧಾಂಜಲಿ

0Shares

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮಾಜಿ ಅಧ್ಯಕ್ಷರಾದ ದಿವಂಗತ ಕಾಸ್ಮಿರ್ ಮಿನೇಜಸ್ ಇವರಿಗೆ ಶೃದ್ಧಾಂಜಲಿ ಅರ್ಪಿಸುವ ಸಲುವಾಗಿ ಹಾಗೂ ಅವರು ಸಮಾಜಕ್ಕೆ ನೀಡಿದ ದೇಣಿಗೆಯನ್ನು ಪರಿಗಣಿಸಿ “ಧೀರ್ ತಾಂಡೆಲಿ” ಎಂಬ ಬಿರುದನ್ನು ನೀಡಿ ಗೌರವಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ದಿನಾಂಕ 17/3/2025 ರಂದು ಮಂಗಳೂರಿನ ಬಿಜೈಯಲ್ಲಿರುವ ಬಿಜೈ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ದಿವ್ಯ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|ಪೀಟರ್ ಪೌಲ್ ಸಲ್ಡಾನ್ಹಾರವರು ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ|ಜೆ.ಬಿ.ಸಲ್ಡಾನ್ಹಾ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಎಪಿಸ್ಕೊಪಾಲ್ ಸಿಟಿ ವಲಯ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಜೋನ್ ವಾಸ್ ಇವರು ನೆರವೇರಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.

ನಂತರ ಬಿಜೈ ಚರ್ಚ್ ಸಭಾಂಗಣದಲ್ಲಿ ಮೃತರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಗಣ್ಯರು ಶೃದ್ಧಾಂಜಲಿಯನ್ನು ಅರ್ಪಿಸಿದರು. ಈ ಕಾರ್ಯಕ್ರಮಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಮತ್ತು ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಇದರ ಎಲ್ಲಾ ಮಾಜಿ ಅಧ್ಯಕ್ಷರುಗಳು, ಪ್ರಸ್ತುತ ಪದಾಧಿಕಾರಿಗಳು ಮತ್ತು ವಿವಿಧ ಚರ್ಚ್‍ಗಳಿಂದ ಬಂದ ಕಥೊಲಿಕ್ ಸಭಾದ ಸದಸ್ಯರುಗಳು ಭಾಗವಹಿಸಿದ್ದರು. ವಂದನೀಯ ಡಾ|ಜೆ.ಬಿ.ಸಲ್ಡಾನ್ಹಾ, ಹಾಗೂ ಇತರರು ಮೃತರು ಸಮಾಜಕ್ಕೆ ನೀಡಿದ ದೇಣಿಗೆಯ ವಿವರವನ್ನು ವಿವರಿಸಿದರು. ಹಾಗೂ ಅವರು ನಡೆದ ದಾರಿಯನ್ನು ಅನುಸರಿಸಲು ಆದೇಶಿಸಿದರು. ಮೃತರು ಕ್ರೈಸ್ತ ಧರ್ಮದಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಇತರ ಧರ್ಮಗಳೊಂದಿಗೆ ಹಾಗೂ ಧರ್ಮದ ಜನರೊಂದಿಗೆ ಪ್ರೀತಿ ವಿಶ್ವಸದಿಂದ ಬೆಳೆದು ಬೆಳ್ತಂಗಡಿಯಲ್ಲಿರುವ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನೀಡಿದ ಮಹಾನ್ ವ್ಯಕ್ತಿ ಇವರು ಆಗಿದ್ದು ಎಲ್ಲಾ ಜನರ ನೆಚ್ಚಿನ ‘ಕಾಸ್ಮಿರ್ ಅಣ್ಣಾ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಕಥೊಲಿಕ್ ಸಭಾ ಮಂಗ್ಳುರ್ ಪದೇಶ್(ರಿ) ಇದರ ಅಧಕ್ಷರಾದ ಶ್ರೀ ಆಲ್ವಿನ್ ಡಿ ಸೋಜಾ ಪಾನೀರ್ ಇವರು ಮತ್ತು ಈ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪೌಲ್ ರೋಲ್ಫಿ ಡಿಕೋಸ್ತಾರವರು ತಮ್ಮ ಸಂದೇಶವನ್ನು ನೀಡಿದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಉಪಾಧ್ಯಕ್ಷರಾದ ಶ್ರೀ ಸ್ಟೀವನ್ ರೊಡ್ರಿಗಸ್ ಸ್ವಾಗತಗೈದು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಆಲ್ವಿನ್ ಪ್ರಶಾಂತ್ ಮೊಂತೆರೊರವರು ವಂದನಾರ್ಪನೆಗೈದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಸಹ ಖಜಾಂಚಿಯಾದ ಶ್ರೀ ವಿಲ್ ಫ್ರೆಡ್ ಆಲ್ವಾರಿಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಖಜಾಂಚಿಯಾದ ಕುಮಾರಿ ಮೆಲ್ರಿಡಾ ರೊಡ್ರಿಗಸ್ ರವರು ಮೃತರಿಗೆ ನೀಡಿದ ಬಿರುದನ್ನು ಓದಿ ಹೇಳಿದರು. ಮಧ್ಯಾಹ್ನದ ಭೋಜನದೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಗೊಳಿಸಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now