ವ್ಯವಹಾರಿಕ ಜ್ಞಾನದ ತೀವ್ರತೆಯಿಂದ ಸಾಹಿತ್ಯ ಒಲವು ಕ್ಷೀಣಿಸುತ್ತಿದೆ : ಡಾ. ರಾಘವೇಂದ್ರ ರಾವ್

ವ್ಯವಹಾರಿಕ ಜ್ಞಾನದ ತೀವ್ರತೆಯಿಂದ ಸಾಹಿತ್ಯ ಒಲವು ಕ್ಷೀಣಿಸುತ್ತಿದೆ : ಡಾ. ರಾಘವೇಂದ್ರ ರಾವ್

0Shares

ಮಂಗಳೂರು,ನ.20: ಪ್ರಸ್ತುತ ಜಗತ್ತು ವ್ಯವಹಾರದ ಸುತ್ತ ಅಲೆಯುತ್ತಿದ್ದು ಸಾಹಿತ್ಯದ ಮೇಲಿನ ಒಲವು ಕಡಿಮೆಯಾಗಿದೆ. ವ್ಯವಹಾರಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಸಾಹಿತ್ಯದ ಮೇಲಿನ ಒಲವು ಕ್ಷೀಣಿಸುತ್ತಿದೆ. ಯುವಜನರಲ್ಲಿ ಸಾಹಿತ್ಯ ಕುರಿತಾದ ಒಲವು ಇರಲೇಬೇಕು ಎಂದು ಪಡುಬಿದ್ರಿ ಪ್ರೌಢಶಾಲಾ ಸಂಸ್ಕೃತ ಉಪನ್ಯಾಸಕ ವಿದ್ವಾನ್ ಡಾ. ರಾಘವೇಂದ್ರ ರಾವ್ ತಿಳಿಸಿದರು.

ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾರತ್ ಫೌಂಡೇಶನ್ ಹಾಗೂ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಲಿಟ್ ಫೆಸ್ಟ್ ಪ್ರಯುಕ್ತ ನಡೆದ ಅಂತರ್ ಕಾಲೇಜು ರಸಪ್ರಶ್ನೆ ಮತ್ತು ಪುಸ್ತಕ ವಿಮರ್ಶಾ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಇವರು ಸಾಹಿತ್ಯವು ಸಾಮಾನ್ಯ ವಿಚಾರದ ಮೂಲಕ ಅಪೂರ್ವ ಚಿಂತನೆಯನ್ನು ಹುಟ್ಟಿಸುತ್ತದೆ. ಇದು ಮಾನವೀಯ ಧರ್ಮವನ್ನು ಜಗತ್ತಿಗೆ ತೋರಿಸಿಕೊಂಡು ಬಂದಿದೆ. ಸಾಹಿತ್ಯ ಸಾಗರವಿದ್ದಂತೆ, ಇವು ಮನಸಿನ ಭಾವ ತರಂಗಗಳನ್ನು ಎಬ್ಬಿಸುವ ಕಾರ್ಯ ಮಾಡುತ್ತವೆ. ಜಗತ್ತಿನಲ್ಲಿ ಎರಡು ಶ್ರೇಷ್ಠವಾದ ತತ್ವವೆಂದರೆ ಅನ್ನ ಮತ್ತು ಅಕ್ಷರ. ಯಾವಾಗ ನಾವು ಅಧ್ಯಯನಶೀಲ ಹಾಗೂ ಜ್ಞಾನಶೀಲರಾಗುತ್ತೇವೆಯೋ ಆಗ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಆತ್ಮವಿಶ್ವಾಸ ಇದ್ದಾಗ ಅಸಾಧ್ಯವಾದುದು ಯಾವುದು ಇಲ್ಲ. ಪ್ರಯತ್ನ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now