
ಮಲ್ಪೆ ಜಂಕ್ಷನ್ ಬಳಿ ಇರುವ ಜಾಮೀಯಾ ಮಸೀದಿಯ ಬಳಿ ಮಸೀದಿಗೆ ಸಂಬಂಧಿಸಿದ 2 ಅಂತಸ್ತಿನ ಕಟ್ಟಡವಿದ್ದು, ಕಟ್ಟಡದಲ್ಲಿರುವ ಕೆಲಸಗಾರರಿಗಾಗಿ ಕಟ್ಟಡದ ಬದಿಯಲ್ಲಿ ಇರುವ ಶೌಚಾಲಯದಲ್ಲಿ ದಿನಾಂಕ 14/04/2025 ರಂದು 13:10 ಗಂಟೆಗೆ ಒಂದು ನವಜಾತ ಶಿಶುವು ಬಿದ್ದುಕೊಂಡಿದ್ದು, ಶೌಚಾಲಯದ ಒಳಗಿನ ಗೋಡೆಯ ಮೇಲೆ ರಕ್ತದ ಕಲೆಗಳು ಇರುವುದು ಕಂಡು ಬಂದಿದ್ದು, ನವಜಾತ ಶಿಶು ಜನನಕ್ಕೆ ಮುಂಚೆ ಅಥವಾ ಆ ತರುವಾಯ ಅಥವಾ ಜನನದ ಕಾಲದಲ್ಲಿ ಮರಣ ಹೊಂದಿದ್ದು, ಯಾರೋ ಅಪರಿಚಿತರು ಆ ಮಗುವಿನ ಮೃತದೇಹವನ್ನು ರಹಸ್ಯವಾಗಿ ವಿಲೇ ಮಾಡಿ, ಮಗುವಿನ ಜನನವನ್ನು ಮರೆಮಾಚಿರುತ್ತಾರೆ ಎಂಬುದಾಗಿ ಮಸೀದಿ ವತಿಯಿಂದ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2025 ಕಲಂ: 94 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಪ್ರಥಮವಾಗಿ ಈ ಮಗು ಸ್ಥಳೀಯ ರಾಗಿರುವ ಆಫ್ರಿನಾ ಎಂಬುವರದ್ದಾಗಿರುತ್ತದೆ ಎಂದು ತಿಳಿಬಂದಿರುತ್ತದೆ. ಈಗಾಗಲೇ ಅವರದ್ದೇ ಅದ ಒಂದು ಮಗು ಇದ್ದು, ಇನ್ನೊಂದು 7-8 ತಿಂಗಳ ಗರ್ಭವನ್ನು, ಗರ್ಭಪಾತ ಮಾಡಿಸಿಕೊಳ್ಳಲು ಯಾವುದೇ ವೈದ್ಯಕೀಯ ನೆರವನ್ನು ಪಡೆದುಕೊಳ್ಳದೆ, ಇವರೇ ಸ್ವತಹ ಪ್ರಯತ್ನಿಸಿದ್ದು, ಈ ಬಗ್ಗೆ ತೀರ ಹೊಟ್ಟೆ ನೋವಿನಿಂದ ಬಳಲಿ ಅಲ್ಲಿಯೇ ಇರುವ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಅದನ್ನು ಅಲಿಯೇ ಬಿಟ್ಟು ತೆರಳಿರುವುದಾಗಿ ಅವರ ಸ್ವ-ಇಚ್ಛಾ ಹೇಳಿಕೆಯಲ್ಲಿ ತಿಳಿಸುತ್ತಾರೆ. ಪ್ರಸ್ತುತ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿರುತ್ತಾರೆ. ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಮಗು ಬೇರೆಯವರದ್ದೆಂದು ಹೇಳುವ ಕೆಲವೊಂದು ಅನುಮಾನಾಸ್ಪದ ಆಡಿಯೋಗಳು ಬಂದಿದ್ದು, ಈ ರೀತಿಯಾಗಿ ಯಾರೂ ಕೂಡ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಈ ರೀತಿಯಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























