
ದಿನಾಂಕ 03/03/2026 ರಂದು ರಾತ್ರಿ 21:30 ಗಂಟೆಗೆ ಆರೋಪಿತರುಗಳಾದ 1.ಅಮೃತ್ ಭಂಢಾರಿ, 2.ಪ್ರಜ್ಞೇಶ್, 3.ಪುನಿತ್ ಪೂಜಾರಿ, 4.ಅಭೀಜಿತ್ ಎಂಬುವವರು ಕಾನೂನಿನ ಸಂಘರ್ಷಕ್ಕೋಳಗಾದ ಬಾಲಕನ ಜೊತೆ ಬಂದು ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ಸೇರಿಕೊಂಡು, KA19AD1036 ಬಿಳಿ ಬಣ್ಣದ ಬೊಲೆರೊ ವಾಹನದಲ್ಲಿ ಮಾರಕಾಯುಧವಾದ ಚಾಕುವನ್ನು ತಮ್ಮಲ್ಲಿ ಇಟ್ಟುಕೊಂಡು, ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಬೀಚ್ನ ಬಳಿ ಇರುವ ಬ್ಲೂ ವೇವ್ಸ್ ಗೆಸ್ಟ್ ಹೌಸ್ನ ಬಳಿಗೆ ಬಂದು ಬಳಿಗೆ ಬಂದು, ಬೀಚ್ನಲ್ಲಿ ಮರಳಿನಲ್ಲಿ ಕುಳಿತಿದ್ದ ಪಿರ್ಯಾದು ಸಂತೋಷ್ ಎ ಅಮೀನ್ ರವರು ಹಾಗೂ ಅವರ ಸ್ನೇಹಿತ ಮಂಜುನಾಥ ಸಾಲಿಯಾನ್@ಮಂಜು ಕೊಳ, ಧನುಷ್, ಲತೀಶ್ ಮತ್ತು ವರುಣ್ ರವರಲ್ಲಿ ಅಮೃತ್ ಭಂಢಾರಿಯ ತಂಗಿಯ ವಿಚಾರದಲ್ಲಿ ತಗಾದೆ ತೆಗೆದಿದ್ದು, ಇದನ್ನು ಪ್ರಶ್ನಿಸಿದ ಮಂಜು ಕೊಳ ರವರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಮಂಜುರವರನ್ನು ಮತ್ತು ಪಿರ್ಯಾದಿ ಸಂತೋಷ್, ಧನುಷ್, ಲತೀಶ್ ಮತ್ತು ವರುಣ್ರವರಿಗೆ ಕೈಯಿಂದ ಹೊಡೆದು ದೂಡಿ ತಳ್ಳಾಡಿದ್ದು, ಆರೋಪಿ ಪ್ರಜ್ಞೇಶ್ನು ಮಂಜುರವರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು, ಅವನನ್ನು ಕೊಲ್ಲುವ ಉದ್ದೇಶದಿಂದ ಆತನ ಪ್ಯಾಂಟ್ ಕಿಸೆಯಲ್ಲಿದ್ದ ಚಾಕುವನ್ನು ತೆಗೆದು ಮಂಜು ರವರ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿ ತೀವ್ರ ರಕ್ತ ಗಾಯಗೊಳಿಸಿರುತ್ತಾನೆ. ಅಲ್ಲದೆ ವರುಣ್ ಹಾಗೂ ಲತೀಶ್ ರವರಿಗೂ ಚಾಕುವಿನಿಂದ ಗಾಯಗೊಳಿಸಿ, ತಡೆಯಲು ಬಂದ ಪಿರ್ಯಾದು ಸಂತೋಷ್ರವರಿಗೆ ಮತ್ತು ಧನುಷ್, ಲತೀಶ್, ವರುಣ್ನಿಗೆ ಕೈಯಿಂದ ಹಲ್ಲೆ ಮಾಡಿ, ಕಾಲಿನಿಂದ ತುಳಿದು, ಎಲ್ಲರಿಗೂ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿರುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 25/2026 ಕಲಂ: 189(2), 191(2), 191(3), 352, 109, 115(2), 118(1), 351(2) ಜೊತೆಗೆ 190 ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದ ತನಿಖೆಯನ್ನು ಕೈಗೊಂಡ ಮಲ್ಪೆ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಈರಣ್ಣ ಶಿರಗುಂಪಿರವರು, ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಾದ 1) ಅಮೃತ್ ಭಂಢಾರಿ(22), ತಂದೆ: ಲಕ್ಷ್ಮಣ್ ಭಂಢಾರಿ, ಮೂಡುಪಲಿಮಾರು, ಪಲಿಮಾರು ಗ್ರಾಮ, ಕಾಪು, ತಾಲೂಕು ಉಡುಪಿ. 2) ಪ್ರಜ್ಞೇಶ್(22), ತಂದೆ: ಪ್ರಶಾಂತ್, ಪಲಿಮಾರು ಗ್ರಾಮ, ಕಾಪು ತಾಲೂಕು, ಉಡುಪಿ, 3) ಪುನಿತ್ ಪೂಜಾರಿ(24), ತಂದೆ: ಗೋವಿಂದ, ಪಲಿಮಾರು ಗ್ರಾಮ, ಕಾಪು ತಾಲೂಕು, ಉಡುಪಿ ಮತ್ತು 4) ಅಭೀಜಿತ್(20), ತಂದೆ: ದಿ.ಶೇಖರ, ಗಾಂದೊಟ್ಟು, ಇನ್ನಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ರವರನ್ನು ದಸ್ತಗಿರಿ ಮಾಡಲಾಗಿದ್ದು, ತನಿಖೆ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಕಾನೂನಿನ ಸಂಘರ್ಷಕ್ಕೋಳಗಾದ ಬಾಲಕನನ್ನು ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಲಾಗುವುದು. ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಈ ಕಾರ್ಯಾಚರಣೆಯನ್ನು ಬೆಳ್ಳಿಯಪ್ಪ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ-ವಿಭಾಗ ಮತ್ತು ರಾಮಚಂದ್ರ ನಾಯಕ್, ಸಿಪಿಐ, ಮಲ್ಪೆ ವೃತ್ತರವರ ಮಾರ್ಗದರ್ಶನದಲ್ಲಿ, ಈರಣ್ಣ ಶಿರಗುಂಪಿ, ಪೊಲೀಸ್ ಉಪನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಹೆಚ್‌ಸಿ ಆದರ್ಶ್ ರವರು ಪತ್ತೆ ಕಾರ್ಯ ನಡೆಸಿರುತ್ತಾರೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now