
ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 128/2025, ಕಲಂ: 152, 61(1) BNS 2023 ಮತ್ತು ಕಲಂ: 3, 5 OFFICIAL SECRETS ACT 1923 ಮತ್ತು 18 Indiaʼs Unlawful Activities (prevention) Act(UAPA)ರಂತೆ ದಾಖಲಾದ ನೌಕಾಪಡೆಯ ಹಡಗುಗಳ ರಹಸ್ಯ ಮಾಹಿತಿ ರವಾನೆ ಪ್ರಕರಣಕ್ಕೆ ಸಂಬಂಧಿಸಿದಂತೆ, 5ನೇ ಆರೋಪಿಯಾದ ಆಲಿಫ್ ಇಸ್ಲಾಮ್ ( 21), ತಂದೆ:ದಿ. ಇಜಾಜುಲ್ ಇಸ್ಲಾಂ, ವಾಸ: ಬರಗಾರಿಯ ಗ್ರಾಮ, ಜಾಲ್ ಫೈಗುರಿ ಜಿಲ್ಲೆ, ಪಶ್ಚಿಮ ಬಂಗಾಲ ರಾಜ್ಯ-735210, ಪ್ರಸ್ತುತ ವಿಳಾಸ: ಬಾಡಿಗೆ ಮನೆ: ಕೋಕಿಲ್ಕಟ್ಟ, ಮರಾಯು ಗ್ರಾಮ, ಮುನಾರ್, ಇಡುಕಿ ಜಿಲ್ಲೆ, ಕೇರಳ ರಾಜ್ಯ ಈತನನ್ನು ದಿನಾಂಕ 16/02/2026 ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಯನ್ನು ಈ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ದಿನಾಂಕ 21.02.2026 ರವರೆಗೆ ನ್ಯಾಯಾಂಗ ಬಂಧನ ವಿಧಿಸುತ್ತಾರೆ.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now