
ದಿನಾಂಕ:11-10-2024 ರಂದು ಶ್ರೀ ಪ್ರವೀಣ್ ಕುಮಾರ್ ಆರ್. PSI ಮಲ್ಪೆ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 7:00 ಗಂಟೆ ಸಮಯಕ್ಕೆ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಜನರು ಅನುಮಾನಸ್ಪದವಾಗಿ ಲಗೇಜ್ ಸಮೇತ ಒಡಾಡುತ್ತಿರುವುದನ್ನು ಕಂಡು ಅನುಮಾನಗೊಂಡು ವಿಚಾರಿಸಲಾಗಿ, ಆರೋಪಿತರು ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ, ವಂಚಿಸುವ ಉದ್ದೇಶದಿಂದ ಸುಳ್ಳು ಸ್ಪಷ್ಟನೆಯನ್ನು ನೀಡಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದಾಗಿ ತಿಳಿದುಬಂದಿದ್ದು, ಅವರು ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವುದು ತಿಳಿದುಬಂದ ಪ್ರಕಾರ ಅವರನ್ನು ವಶಕ್ಕೆ ಪಡೆದು ಠಾಣೆಗೆ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ದ ಅಪರಾಧ ಕ್ರಮಾಂಕ : 138/2025 ಕಲಂ 336(2). 336(3), 340(2), 319(2), 318(4) ಜೊತೆಗೆ 3(5) BNS ಮತ್ತು 14(A) foreigners act, ಕಲಂ:34 ,42 ಆಧಾರ್ ಆಕ್ಟ್ ನಂತೆ ಪ್ರಕರಣ ದಾಖಲಾಗಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಪೊಲೀಸ್ ವೃತ್ತ ನಿರೀಕ್ಷಕರು ಮಲ್ಪೆ ವೃತ್ತ ರವರು ಕೈಗೊಂಡು ಉಳಿದ 3 ಮಂದಿ ಅಕ್ರಮ ವಲಸಿಗರನ್ನು ದಸ್ತಗಿರಿ ಮಾಡಿ ಒಟ್ಟು 10 ಮಂದಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದ ಆರೋಪಿತರಾದ
1) ಹಕೀಮ್ ಆಲಿ, 2) ಸುಜೋನ್ ಎಸ್.ಕೆ @ ಫಾರೂಕ್ 3) ಇಸ್ಮಾಯಿಲ್ ಎಸ್.ಕೆ @ ಮಹಮದ್ ಇಸ್ಮಾಯಿಲ್ ಹಾಕ್ 4) ಕರೀಮ್ ಎಸ್.ಕೆ @ ಅಬ್ದುಲ್ ಕರೀಮ್ 5) ಸಲಾಂ ಎಸ್.ಕೆ @ ಎಮ್‌ಡಿ ಅಬ್ದುಲ್ ಅಜೀಜ್ 6) ರಾಜಿಕುಲ್ ಎಸ್.ಕೆ 7) ಮೊಹಮ್ಮದ್ ಸೋಜಿಬ್ @ ಎಮ್ ಡಿ ಅಲ್ಲಾಂ ಆಲಿ 8). ರಿಮೂಲ್ @ ಅಬ್ದುಲ್ ರೆಹಮಾನ್ 9). ಮೊಹಮ್ಮದ್ ಇಮಾಮ್ ಶೇಖ್, 10).ಮೊಹಮ್ಮದ್ ಜಹಾಂಗಿರ್ ಆಲಂ ಇವರ ವಿರುದ್ದ ಮಾನ್ಯ ಉಡುಪಿ Prl Sr Civil Judge & CJM ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ವಿಚಾರಣೆ ನಡೆದು ಮಾನ್ಯ ನ್ಯಾಯಾಲಯವು ದಿನಾಂಕ: 08/12/2025 ರಂದು 10 ಮಂದಿ ಆರೋಪಿತರಿಗೆ 2 ವರ್ಷಗಳ ಕಾಲ ಸಜೆಯನ್ನು ಮತ್ತು ತಲಾ 10,000/- ರೂ ದಂಡವನ್ನು ವಿಧಿಸಿ ಆದೇಶಿಸಿರುವುದಾಗಿದೆ.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now