ವಿಶೇಷ ಅಗತ್ಯವುಳ್ಳ ಮಕ್ಕಳು ಎಂದಿಗೂ ಹೊರೆಯಲ್ಲ ಅವರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಮೂಲಕ ಅವರೂ ಕೂಡ ಸಮಾಜದ ಆಸ್ತಿಯಾಗಿಸಲು ಸಾಧ್ಯವಿದೆ ಎಂದು ತೊಟ್ಟಂ ಸಂತ ಅನ್ನಮ್ಮ ದೇವಾಲದಯ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು.
ಅವರು ಗುರುವಾರು ನೇಜಾರು ಸ್ಪಂದನ ವಿಶೇಷ ಶಾಲೆಯಲ್ಲಿ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಇದರ ವತಿಯಿಂದ ಆಯೋಜಿಸಲಾಗಿದ್ದ ಸರ್ವಧರ್ಮ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಿಶೇಷ ಅಗತ್ಯವುಳ್ಳ ಮಕ್ಕಳು ಬೆಳಗುವ ದೀಪಗಳಂತೆ. ದೀಪಕ್ಕೆ ಎಣ್ಣೆ ಹೇಗೆ ಅಗತ್ಯವೋ ಅಂತೆಯೇ ಈ ಮಕ್ಕಳಿಗೆ ಅನುಕಂಪ ತೋರುವ ಬದಲು ಅವಕಾಶ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಾಗ ಪ್ರಕಾಶಮಾನವಾಗಿ ತಮ್ಮ ಪ್ರತಿಭೆಗಳನ್ನು ಬೆಳಗಿಸಲು ಸಾಧ್ಯವಿದೆ.
ವಿಶೇಷ ಅಗತ್ಯತೆವುಳ್ಳ ಮಕ್ಕಳ ಪಾಲನೆ, ಕಲಿಕೆ ಸುಲಭದ ಕೆಲಸವಲ್ಲ ಅವರ ಅಗತ್ಯತೆಗೆ ತಕ್ಕಂತೆ ಅವರನ್ನು ಸಮಾಜದಲ್ಲಿ ಬೆಳೆಯಲು ಅವಕಾಶವನ್ನು ನೀಡಿ ಈ ಮೂಲಕ ಅವರೂ ಕೂಡ ಇತರರಂತೆ ಸಾಧನೆ ತೋರುವ ನಿಟ್ಟಿನಲ್ಲಿ ಸ್ಪಂದನಾ ಸಂಸ್ಥೆ ಮಾಡುತ್ತಿರುವ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ
ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಅಧ್ಯಕ್ಷರಾದ ರಮೇಶ್ ತಿಂಗಳಾಯರವರು ಮಾತನಾಡಿ ಬಾಹ್ಯ ಆಡಂಬರದ ಆಚರಣೆಗಿಂತ ಇವತ್ತಿನ ಆಚರಣೆ ಬಲು ಅರ್ಥಪೂರ್ಣ. ಇಲ್ಲಿ ಸೇವೆ ನೀಡುವ ಶ್ರೀ ಉಮೇಶ್ ಹಾಗೂ ತಂಡದವರ ಕೆಲಸ ತುಂಬಾ ಶ್ಲಾಘನೀಯ ಎಂದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now