ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: 11 ಮಂದಿಯ ಬಂಧನ

ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: 11 ಮಂದಿಯ ಬಂಧನ

0Shares

ದಿನಾಂಕ:10.02.2026 ರಂದು ಬೆಳಗಿನ ಜಾವ ಪಿರ್ಯಾದು ಸಂತೋಷ. ಎ ಕಾಯ್ಕಿಣಿ, ಪೊಲೀಸ್ ನಿರೀಕ್ಷಕರು, ಕುಂದಾಪುರ ವೃತ್ತ ಇವರಿಗೆ ಕಂಡ್ಲೂರು ಬಿಡ್ಜ್ ನ ಕೆಳಗಡೆ ದೋಣಿಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ತುಂಬುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಮಾಹಿತಿಯಂತೆ ದಾಳಿ ನಡೆಸುವರೇ ಬೆಳಗಿನ ಜಾವ 02:00 ಗಂಟೆಗೆ ಕಂಡ್ಲೂರು ಬ್ರಿಡ್ಜ್ ನ ಬಳಿ ತಲುಪಿ ನೋಡಲಾಗಿ ವರಾಹಿ ನದಿಯ ಕಂಡ್ಲೂರು ಬ್ರಿಡ್ಜ್ ನ ಕೆಳ ಭಾಗದಲ್ಲಿ ನದಿಯಿಂದ ಮರಳನ್ನು ತೆಗೆದು ದೋಣಿಯಲ್ಲಿ ತುಂಬುತ್ತಿರುವುದು ಕಂಡು ಬಂದಿದ್ದು, ಸದ್ರಿ ದೋಣೆಗಳನ್ನು ಮತ್ತು ಅದರಲ್ಲಿದ್ದ ಮರಳನ್ನು ಸ್ವಾದೀನಪಡಿಸಿಕೊಳ್ಳುವರೇ ಹೋದಾಗ ನದಿಯಲ್ಲಿ ದೋಣಿಯಲ್ಲಿದ್ದವರು ಸಮವಸ್ತ್ರದಲ್ಲಿದ್ದ ಪಿರ್ಯಾದುದಾರರನ್ನು ನೋಡಿ ದೋಣಿಗಳನ್ನು ಪೊದೆಯ ಕಡೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಅಡಗಿಕೊಂಡಿದ್ದು ನಂತರ ಪಿರ್ಯಾದುದಾರರು ಸಿಬ್ಬಂದಿಗಳನ್ನು ಬರಮಾಡಿಕೊಂಡು ಸಮೀಪದ ಮರಳು ಧಕ್ಕೆಯಾದ ಕೆ.ಆರ್.ಐ.ಡಿ.ಎಲ್ ಮರಳು ಧಕ್ಕೆಗೆ ಹೋಗಿ ಅಲ್ಲಿಂದ ದೋಣಿಯಲ್ಲಿ ಆರೋಪಿಗಳು ದೋಣಿಯನ್ನು ನದಿಯ ಪೊದೆಯಲ್ಲಿ ನಿಲ್ಲಿಸಿದ ಸ್ಥಳಕ್ಕೆ ಹೋಗಿ ಮರಳು ತುಂಬಿದ 4 ದೋಣಿಗಳನ್ನು ಹಾಗೂ ಅದರಲ್ಲಿದ್ದ ಆಪಾದಿತರನ್ನು ಕರೆದುಕೊಂಡು ಹಳ್ನಾಡು KRIDL ಮರಳು ಧಕ್ಕೆಯ ದಡಕ್ಕೆ ತೆಗೆದುಕೊಂಡು ಬಂದು ನಂತರ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ನದಿಯ ದಡದಲ್ಲಿ ನಿಂತಿದ್ದ 4 ದೋಣಿಯಲ್ಲಿದ್ದ ಆಪಾದಿತರನ್ನು ವಿಚಾರಿಸಿದಾಗ ಆಪಾದಿತರುಗಳು ಹಳ್ನಾಡು KRIDL ಮರಳು ಧಕ್ಕೆಯಲ್ಲಿ ಮರಳು ತೆಗೆಯುವ ದಿನಗೂಲಿ ಕೆಲಸದವರಾಗಿರುವುದಾಗಿ ತಿಳಿಸಿದ್ದು

ನಂತರ ಅವರ ಹೆಸರು & ವಿಳಾಸವನ್ನು ವಿಚಾರಿಸಲಾಗಿ 1) ರಾಮಶಂಕರ ರಾಜಬೀರ್(35 ವರ್ಷ), 2) ರಾಮ ಕುಮಾರ್ (40 ವರ್ಷ), 3) ಗೋವಿಂದ ಚೌದರಿ(26 ವರ್ಷ), 4) ಶಿವಮುನಿ(32 ವರ್ಷ), 5) ಜುನ್ನ ರಾಜಬೀರ್(35 ವರ್ಷ), 6) ಸತ್ಯಾದೇವ(30 ವರ್ಷ), 7) ಕಮಲೇಶ ನಿಸಾದ್(35 ವರ್ಷ), 8) ಸಂತೋಷ ನಿಸಾದ್(23 ವರ್ಷ), 9) ಓಂ ಪ್ರಕಾಶ ರಾಜಬರ್(34 ವರ್ಷ), 10) ರಮೇಶ ರಾಜಬರ್(35 ವರ್ಷ), ಎಂಬುವುದಾಗಿ ತಿಳಿಸಿದ್ದು ನಂತರ ಸದ್ರಿಯವಲ್ಲಿ ಮರಳು ತೆಗೆಯುತ್ತಿರುವ ಬಗ್ಗೆ ವಿಚಾರಿಸಿದಾಗ ಮರಳು ಧಕ್ಕೆಯ ಮಾಲಿಕರಾದ ಸುನಿಲ್ ಶೆಟ್ಟಿ ಹಾಗೂ ದಕ್ಕೆಯ ಸುಪರ್ ವೈಸರ್ ಆದ ಅಜ್ಮಲ್ ರವರು ಒಳ್ಳೆಯ ಮರಳನ್ನು ತಂದುಕೊಟ್ಟಲ್ಲಿ ಹೆಚ್ಚಿನ ಹಣವನ್ನು ನೀಡುವುದಾಗಿ ಸೂಚಿಸಿದ್ದರಿಂದ ಮೇಲ್ಕಂಡ ಆಪಾದಿತರುಗಳು ಮರಳು ಧಕ್ಕೆಯ ಜಿಯೋ ಪೆನ್ಸಿಂಗ್ ಬೌಂಡರಿಯ ಆಚೆಗೆ ಒಳ್ಳೆಯ ಮರಳು ಸಿಗುವುದರಿಂದ ನಾವು ಹಣದ ಆಸೆಗೆ ಬೌಂಡರಿ ದಾಟಿ ಹೋಗಿ ರಾತ್ರಿ ವೇಳೆಯಲ್ಲಿ ನದಿಯಿಂದ ಮರಳು ತೆಗೆದು ದೋಣಿಯಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿರುತ್ತಾರೆ.

ನಂತರ ದಾಳಿಯ ಸಮಯ ಸಿಕ್ಕ ಸ್ವತ್ತುಗಳಾದ 1) ಹಳದಿ ಬಣ್ಣದ ಮಹಾಗಣಪತಿ-2 ಎಂಬ ಹೆಸರಿನ ದೋಣಿ-01(ಅಂದಾಜು ಮೌಲ್ಯ 75,000/-ರೂ), 2) ಹಳದಿ ಬಣ್ಣದ ಹೆಸರಿಲ್ಲದ ದೋಣಿ-, 01(ಅಂದಾಜು ಮೌಲ್ಯ 75,000/-ರೂ), 3) ಹಳದಿ ಬಣ್ಣದ ಚೇತನ್ ಎಂಬ ಹೆಸರಿನ ದೋಣಿ-01(ಅಂದಾಜು ಮೌಲ್ಯ 75,000/-ರೂ), 4) ಹಳದಿ ಬಣ್ಣದ ಸಮೃದ್ದಿ-2 ಎಂಬ ಹೆಸರಿನ ದೋಣಿ-01(ಅಂದಾಜು ಮೌಲ್ಯ 75,000/-ರೂ), 5) 4 ದೋಣಿಗಳಲ್ಲಿದ್ದ ಒಟ್ಟು ಸುಮಾರು 3 ½ ಯುನಿಟ್ ಮರಳು(ಅಂದಾಜು ಮೌಲ್ಯ 4,500/- ರೂ), 6) ಬಿದಿರಿನ ತೊಳೆ-04(ಯಾವುದೇ ಬೆಲೆ ಬಾಳುವುದಿಲ್ಲ.) ಸ್ವಾದೀನಪಡಿಸಿಕೊಂಡಿದ್ದು ಹಾಗೂ KRIDL ಮರಳು ಧಕ್ಕೆಯ ಮಾಲಕ ಸುನೀಲ್ ಶೆಟ್ಟಿ ಮತ್ತು ಧಕ್ಕೆಯ ಸೂಪರ್ ವೈಸರ್ ಅಜ್ಮಲ್ ರವರು ತಮ್ಮ ಕೆಲಸಗಾರರು ಮರಳು ಧಕ್ಕೆಯ ನಿಯಮ ಉಲ್ಲಂಘಿಸಿ ಜಿಯೋ ಪೆನ್ಸಿಂಗ್ ಬೌಂಡರಿಯ ಆಚೆಗೆ ಕಂಡ್ಲೂರು ಬ್ರಿಡ್ಜ್‌ ನ ಸಮೀಪ ಹೋಗಿ ಮರಳನ್ನು ತೆಗೆಯುತ್ತಿರುವುದು ಕಾನೂನು ಬಾಹಿರ ಎಂದು ತಿಳಿದಿದ್ದರು ಕೂಡ ಈ ಕೃತ್ಯಕ್ಕೆ ಸಹಕರಿಸಿರುವುದು ಕಂಡುಬಂದಿರುತ್ತದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 08/2026 ಕಲಂ: 303(2) R/W 3(5) BNS & & 4, 4(1)(a),21 MMDR Act ಮತ್ತು 3(1), 42(1), 43(2), 44 Karnataka Minor Mineral Consistent Rule 1994ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಧಕ್ಕೆಯ ಸೂಪರ್ ವೈಸರ್ ಅಜ್ಮಲ್ ಸೇರಿದಂತೆ ಎಲ್ಲಾ 11 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now