ಕುಂದಾಪುರ: ಚಿನ್ನವನ್ನು ತೆಗೆದುಕೊಳ್ಳುವ ನೆಪದಲ್ಲಿ ಚಿನ್ನದ ಸರವನ್ನು ಕಳವು ಮಾಡಿರುವ ಬಗ್ಗೆ ಪ್ರಕಟನೆ

ಕುಂದಾಪುರ: ಚಿನ್ನವನ್ನು ತೆಗೆದುಕೊಳ್ಳುವ ನೆಪದಲ್ಲಿ ಚಿನ್ನದ ಸರವನ್ನು ಕಳವು ಮಾಡಿರುವ ಬಗ್ಗೆ ಪ್ರಕಟನೆ

0Shares

ದಿನಾಂಕ 27-01-2026 ರಂದು ಸಂಜೆ 17:56 ಸಮಯಕ್ಕೆ ಸುಮಾರು 40 ವರ್ಷ ಪ್ರಾಯದ ಒರ್ವ ಅಪರಿಚಿತ ಗಂಡಸು ಬಂದು ಕುಂದಾಪುರ ಶಾಸ್ತ್ರೀಸರ್ಕಲ್ ಬಳಿಯ ಇರುವ SPG GOLD AND DIAMAND ಅಂಗಡಿಗೆ ಬಂದು ಚಿನ್ನವನ್ನು ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿಯ ಕೆಲಸದವರಿಂದ ಚಿನ್ನದ ಸರವನ್ನು ನೋಡಿ ಅವರ ಕಣ್ಣು ತಪ್ಪಿಸಿ ಸುಮಾರು 09 ಗ್ರಾಮ ಮೌಲ್ಯದ 125000 ರೂ ಬೆಲೆ ಬಾಳುವ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 05/2026 ಕಲಂ. 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಹೆಚ್‌ ಡಿ ಕುಲಕರ್ಣಿ, ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ. ಮಾರ್ಗದರ್ಶನದಂತೆ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕರಾದ ಜಯರಾಮ್ ಡಿ ಗೌಡ ಸಾರಥ್ಯದಲ್ಲಿ, ಠಾಣಾ ಪಿಎಸ್ಐ ರವರಾದ ನಂಜಾನಾಯ್ಕ್ ಎನ್ (ಕಾ&ಸು) , ಶ್ರೀಮತಿ ಪುಷ್ಪ (ತನಿಖೆ) ಹಾಗೂ ಸಿಬ್ಬಂದಿಗಳಾದ ಸಂತೋಷ, ಮಹಾಬಲ ಶೆಟ್ಟಿಗಾರ, ಪ್ರೀನ್ಸ್,ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ,ಲೋಹಿತ್ ,ಚಂದ್ರಶೆಟ್ಟಿ ರವರ ತಂಡವ ನಡೆಸಿ ಕೃತ್ಯದ ಆರೋಪಿ ರಮೇಶ(42), ತಂದೆ ದಿ. ಶೀನ, ಬಡಗ ಕಜೆಕಾರ್ ಗ್ರಾಮ ಬಂಟ್ವಾಳ ತಾಲೂಕು ದ.ಕ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ SPG GOLD and DIAMAND ಅಂಗಡಿಯಿಂದ ಕಳ್ಳತನ ಮಾಡಿದ ಚಿನ್ನದ ಚೈನ್ ಮತ್ತು ಆತನ ವಶದಲ್ಲಿದ್ದ ರೂಪಾಯಿ 33000/- ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now