ನಾಗರಾಜ ಗಿಳಿಯಾರು ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್. ಡಿ. ಪದವಿ

ನಾಗರಾಜ ಗಿಳಿಯಾರು ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್. ಡಿ. ಪದವಿ

0Shares

ಕುಂದಾಪುರ :ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನಾಗರಾಜ ಗಿಳಿಯಾರು ಅವರು ಮಂಡಿಸಿದ “ಕಮ್ಯೂನಿಟಿ ಇನ್ವೊಲ್ವ್‌ಮೆಂಟ್ ಅಂಡ್ ಪಾರ್ಟಿಸಿಪೇಷನ್ ಇನ್ ದಿ ಡೆವಲಪ್ಮೆಂಟ್ ಆಫ್ ಟೂರಿಸಮ್ ಇಂಡಸ್ಟ್ರಿ – ಅ ಸ್ಟಡಿ ಇನ್ ದಿ ಕೋಸ್ಟಲ್ ಡಿಸ್ಟ್ರಿಕ್ಟ್ಸ್ ಆಫ್ ಕರ್ನಾಟಕ” (Community Involvement and Participation in the Development of Tourism Industry – A Study in the Coastal Districts of Karnataka) ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್. ಡಿ. ಪದವಿಯನ್ನು ಪ್ರದಾನಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಅಬೂಬಕ್ಕರ್ ಸಿದ್ದೀಕ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮಂಡಿಸಿದ್ದರು. ಇವರು ಗಿಳಿಯಾರು ಗೋಪಾಲ ಆಚಾರ್ಯ ಮತ್ತು ವಿಜಯಲಕ್ಷ್ಮಿ ಆಚಾರ್ಯ ದಂಪತಿಯ ಪುತ್ರ. ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಪದವಿ ಪಠ್ಯಪುಸ್ತಕದ ಲೇಖಕರಾಗಿದ್ದು, ರಾಜ್ಯ ಶಿಕ್ಷಣ ನೀತಿಯ ಅಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಪಠ್ಯಕ್ರಮ ತಯಾರಿ ಸಮಿತಿಯ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now