ಕೊಂಕಣಿ ರಂಗತರಂಗ ಮತ್ತು ಸಾಹಿತ್ಯ ಸಂಭ್ರಮ-3

ಕೊಂಕಣಿ ರಂಗತರಂಗ ಮತ್ತು ಸಾಹಿತ್ಯ ಸಂಭ್ರಮ-3

0Shares

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಿ.ಎಸ್.ಬಿ. ಮಹಿಳಾ ಮಂಡಳಿ, ಪುತ್ತೂರು ಇವರ ಸಹಯೋಗದಲ್ಲಿ ದಿನಾಂಕ 14.09.2025ರಂದು ಕೊಂಕಣಿ ರಂಗ ತರಂಗ ಮತ್ತು ಸಾಹಿತ್ಯ ಸಂಭ್ರಮ-3 ಕಾರ್ಯಕ್ರಮವನ್ನು ಪುತ್ತೂರಿನ ಸುಕ್ರತೀಂದ್ರ ಕಲಾಮಂದಿರದಲ್ಲಿ ಹಮ್ಮಿಕೊಂಡಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ʼಕರ್ನಾಟಕ ಸರ್ಕಾರವು ಸಾಹಿತ್ಯ, ಕಲೆ, ಜಾನಪದ ಕ್ಷೇತ್ರದ ಬೆಳವಣಿಗಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಚನೆ ಮಾಡಿದೆ. ಅಕಾಡೆಮಿಯು ಜನರ ಹತ್ತಿರ ಹೋಗಿ, ಜನರಿಗೆ ಅಕಾಡೆಮಿಯ ಬಗ್ಗೆ ಪರಿಚಯಿಸಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರದಲ್ಲಿ ದುಡಿದವರನ್ನು ಹತ್ತಿರ ತರಲು ಪ್ರಯತ್ನಿಸುತ್ತಿದೆʼ ಎಂದರು.

ಶ್ರೀ ಲಕ್ಷ್ಮೀ ವೆಂಕಟರಮನ ದೇವಸ್ಥಾನದ ಧರ್ಮದರ್ಶಿ ವ್ಯವಸ್ಥಾಪಕರಾದ ಡಾ| ಆಶೋಕ್‌ ಪ್ರಭುರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ʼಪ್ರಸ್ತುತ ಕಾಲದಲ್ಲಿ ಕೊಂಕಣಿ ಭಾಷೆಯನ್ನು ಬಳಸುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಕೊಂಕಣಿ ಮಾತಾನಾಡುವುದನ್ನು ಮನೆಯಿಂದಲೇ ಪ್ರಾರಂಭಿಸಬೇಕು. ಆಗ ಮಾತ್ರ ಕೊಂಕಣಿ ಭಾಷೆಯನ್ನು ಬೆಳೆಸಬಹುದುʼ ಎಂದರು. ಮುಖ್ಯ ಅತಿಥಿಯಾದ ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ ಸಮಾಜದ ಮುಖಂಡರಾದ ಡಾ| ವೈ. ಉಮಾನಾಥ ಶೆಣೈಯವರು ಕೊಂಕಣಿ ಮೂಡಿ ಬಂದ ದಾರಿ, ಕೊಂಕಣಿ ಇತಿಹಾಸದ ಬಗ್ಗೆ ನಡೆಸಿದ ಅಧ್ಯಯನದ ಬಗ್ಗೆ ಮಾತಾನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now