ಸರಸ್ವತಿ ಪ್ರಭಾ ಪುರಸ್ಕಾರ -2025 ಕ್ಕೆ ಆಯ್ಕೆಯಾದವರ ಮಾಹಿತಿ.

ಸರಸ್ವತಿ ಪ್ರಭಾ ಪುರಸ್ಕಾರ -2025 ಕ್ಕೆ ಆಯ್ಕೆಯಾದವರ ಮಾಹಿತಿ.

0Shares

೧೯೮೯ರ ಮೇ ತಿಂಗಳಿನಿಂದ ನಿರಂತರ ಹಾಗೂ ನಿಯಮಿತವಾಗಿ ಪ್ರಕಟಗೊಳ್ಳುತ್ತಿರುವ ಸರಸ್ವತಿ ಪ್ರಭಾ ಕೊಂಕಣಿ ಮಾಸಿಕವು ತನ್ನ ೩೬ ವರ್ಷಗಳ ಪ್ರಕಟಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪತ್ರಿಕೆಯು ೨೦೨೨ನೇ ಸಾಲಿನಿಂದ ಸಾಧನೆಗೈದೂ ಪ್ರಶಸ್ತಿ-ಪುರಸ್ಕಾರಗಳಿಂದ ವಂಚಿತರಾದ ಕೊಂಕಣಿಯ ವಯೋವೃದ್ಧ ಸಾಧಕರಿಗೆಸರಸ್ವತಿ ಪ್ರಭಾ ಪುರಸ್ಕಾರವನ್ನು ನೀಡುತ್ತಾ ಬಂದಿದೆ. ಪುರಸ್ಕಾರದೊಂದಿಗೆ ಸ್ಮರಣಿಕೆ, ಸನ್ಮಾನಪತ್ರ, ರೂ. ೫,೦೦೦/-ಗಳ ನಗದನ್ನು ಸಹ ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುವುದು.
೨೦೨೫ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಇಸ್ಕಾನನ ಅಕ್ಷಯ ಪಾತ್ರೆಗೆ ಕೋಟಿಗಟ್ಟಲೆ ರೂಪಾಯಿ ಬೆಲೆಬಾಳುವ ವಾಹನಗಳನ್ನು ದಾನವಾಗಿ ನೀಡಿರುವ ಕೊಂಕಣಿ ಸಾಹಿತಿ, ದಾನಿ ಶ್ರೀ ಕೆ. ಜನಾರ್ಧನ ಭಟ್ ಮೈಸೂರು ಅವರನ್ನು ಆಯ್ಕೆಮಾಡಲಾಗಿದೆ.

ಶ್ರೀ ಜನಾರ್ಧನ ಭಟ್ ರವರ ಭಾವಚಿತ್ರ, ಅವರ ಸಾಧನೆಯ ಕೆಲ ಫೋಟೊಗಳು ಹಾಗೂ ಅಧಿಕೃತ ಪತ್ರವನ್ನು(ಎPಉ) ಇದಕ್ಕೆ ಲಗತ್ತಿಸಿರುತ್ತೇನೆ.
ಗೌರವದ ವಂದನೆಗಳೊಂದಿಗೆ

ತಮ್ಮ ವಿಶ್ವಾಸಿ
ಆರಗೋಡು ಸುರೇಶ ಶೆಣೈ
ಸಂಪಾದಕರು, ಸರಸ್ವತಿ ಕೊಂಕಣಿ ಮಾಸಿಕ
ಹುಬ್ಬಳ್ಳಿ. ಮೊ : ೯೪೮೩೭೮೩೯೭೭

ಶ್ರೀ ಕೆ. ಜನಾರ್ಧನ ಭಟ್ಟ ಅವರ ಕುರಿತು ಅಧಿಕ ಮಾಹಿತಿಗಾಗಿ ಈ ಲಿಂಕ್ ಅನ್ನು ನೋಡಬಹುದು
https://saraswatiprabha.com/ಸರಸ್ವತಿ-ಪ್ರಭಾ-ಪುರಸ್ಕಾರ-2025-ಕ/

ಸರಸ್ವತಿ ಪ್ರಭಾ ಪುರಸ್ಕಾರ -೨೦೨೫ಕ್ಕೆ ಆಯ್ಕೆ ಶ್ರೀ ಕೋಟೇಶ್ವರ ಜನಾರ್ಧನ ಭಟ್, ಮೈಸೂರು

ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಲೋಕವೇದ, ಸಮಾಜ ಕಲ್ಯಾಣ ಇತ್ಯಾದಿ ಬೇರೆ ಬೇರೆ ಕ್ಷೇತ್ರಕ್ಕೆ ಹಾಗೂ ತಮ್ಮ ಸುತ್ತಲ ಸಮಾಜಕ್ಕೆ ಅಪಾರ ದೇಣಿಗೆ, ಸೇವ ನೀಡಿಯೂ ಗುರುತಿಸಲ್ಪಡದ ಅಪಾರ ಹಿರಿಯ ಎಲೆಮರೆಯ ಸಾಧಕರು ನಮ್ಮ ನಡುವೆ ಇದ್ದಾರೆ. ಅವರು ಕೊಂಕಣಿ ಭಾಷೆ ಹಾಗೂ ತಾವಿರುವ ಸಮಾಜಕ್ಕೆ ೩೦ರಿಂದ ೫೦ ವರ್ಷಗಳ ಕಾಲ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ ಆದರೂ ನಾನಾ ಕಾರಣಗಳಿಂದ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾಗಿದ್ದಾರೆ. ಕರ್ನಾಟಕದಲ್ಲಿರುವ ಇಂಥಹ ಕೊಂಕಣಿ ಸಾಧಕರನ್ನು ಗುರುತಿಸಿ ಗೌರವಿಸ ಬೇಕೆನ್ನುವ ಉದ್ದೇಶದಿಂದ ಹುಬ್ಬಳ್ಳಿಯಿಂದ ನಿಯಮಿತವಾಗಿ ಪ್ರಕಟಗೊಳ್ಳುತ್ತಾ ಇದೀಗ ಪ್ರಕಟಣೆಯ ೩೬ ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿಯಮಿತ ಪ್ರಕಟಣೆಯ ೩೭ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆಯು ೨೦೨೨ರಿಂದ ವಯೋವೃದ್ಧ ಕೊಂಕಣಿ ಭಾಷಾ ಸಾಧಕರನ್ನು ಆಯ್ಕೆ ಮಾಡಿಸರಸ್ವತಿ ಪ್ರಭಾ ಪುರಸ್ಕಾರವನ್ನು ನೀಡುತ್ತಾ ಬಂದಿದೆ. ೨೦೨೫ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಕುಂದಾಪುರ ತಾ|| ಕೋಟೇಶ್ವರದಲ್ಲಿ ಜನಿಸಿ ಇದೀಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಮಹಾದಾನಿ, ಅಸಹಾಯಕರ ಆಶಾದೀಪ, ಕೊಂಕಣಿ ಸಾಹಿತ್ಯ ಹಾಗೂ ಹರಿಕಥಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ೭೬ ವರ್ಷ ವಯಸ್ಸಿನ ಶ್ರೀ ಕೆ. ಜನಾರ್ಧನ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.

ಇಸ್ಕಾನ್ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಸ್ವತಃ ತಾವೇ ಕೋಟಿ ರೂಪಾಯಿಗಳಿಗಿಂತ ಅಧೀಕ ಮೌಲ್ಯದ ೧೨ ಬಿಸಿಯೂಟ ಸಾಗಾಟದ ವಾಹನಗಳನ್ನು ಶ್ರೀ ಕೆ. ಜನಾರ್ಧನ ಭಟ್‌ರವರು ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೇ ಇತರ ಸಂಘ-ಸಂಸ್ಥೆಗಳಿಂದಲೂ ಕೋಟಿ ಕೋಟಿ ರೂಪಾಯಿಗಳ ದೇಣಿಗೆ ದೊರೆಯುವಂತೆ ಮಾಡಿ ದುರ್ಬಲರು, ಬಡವರ ಬಗ್ಗೆ ಅಂತಃಕರಣಪೂರ್ವಕ ಕಾಳಜಿ ತೋರಿಸಿದವರು ಶ್ರೀ ಕೆ. ಜನಾರ್ಧನ ಭಟ್ ಮೈಸೂರು ಇವರು. ಇಸ್ಕಾನ್‌ಗೆ ಮಾತ್ರವಲ್ಲದೇ ಇತರ ಹಲವಾರು ಧಾರ್ಮಿಕ ಮತ್ತು ಸಾರ್ವಜನಿಕ ಕಾರ್ಯಗಳಿಗೂ ಕೋಟಿಗಟ್ಟಲೆ ರೂಪಾಯಿಗಳ ಹಣವನ್ನು ದಾನ ಮಾಡಿದ್ದಾರೆ. ಕಟ್ಟಾ ಧರ್ಮಾಭಿಮಾನಿಗಳೂ ಆಗಿದ್ದು ನಮ್ಮ ಹಿಂದೂ ಧರ್ಮದ ತತ್ತ್ವ-ಸಿದ್ಧಾಂತಗಳಲ್ಲಿ ಅಪಾರ ವಿಶ್ವಾಸವಿಟ್ಟಿರುವ ಶ್ರೀ ಕೆ. ಜನಾರ್ಧನ ಭಟ್‌ರವರು ಅಂತ್ಯಸಂಸ್ಕಾರವಿಲ್ಲದೇ ಮಡಿದಿರುವ ದೇಶಬಾಂದವರ ಅತ್ಮಸದ್ಘತಿಗಾಗಿ ಹಲವಾರು ಸಲ ತಾವೇ ಕೈಯಾರೆ ಹಣ ವೆಚ್ಚ ಮಾಡಿ ಸಾಮೂಹಿಕ ಅಂತ್ಯಸಂಸ್ಕಾರ ಕಾರ್ಯವನ್ನು ಮಾಡಿದ್ದಾರೆ

ಕೊಂಕಣಿ ಭಾಷೆಯಲ್ಲಿಯೂ ಬಹಳಷ್ಟು ಸಾಹಿತ್ಯ ರಚಿಸಿದ್ದು ಅದರಲ್ಲಿ ಉಪನಿಷತ್ ಪ್ರಭಾ ಹಾಗೂಭಾಗವತಾಚೆ ದಶಮಸ್ಕಂದ ಕೃತಿಗಳು ಇದಾಗಲೇ ಪ್ರಕಟಗೊಂಡಿವೆ. ಕೊಂಕಣಿ ಹರಿಕೀರ್ತನೆ, ಕೊಂಕಣಿ ಭಜನೆಗಳಲ್ಲಿಯೂ ಪರಿಶ್ರಮ ಹೊಂದಿದವರಾಗಿದ್ದಾರೆ. ಆರೋಗ್ಯ ರಕ್ಷಣೆಯ ಸಲುವಾಗಿಯೂ ಹಲವಾರು ಸುಲಭಕರ ಪ್ರಯೋಗವನ್ನು ಮಾಡಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಮೆನೇಜರ ಆಗಿ ನಿವೃತ್ತರಾದ ನಂತರ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿ, ಅದರಿಂದ ಬಂದ ಎಲ್ಲಾ ಲಾಭಾಂಶವನ್ನೂ ಸಮಾಜ ಸೇವೆಗೆ ದಾನ ಮಾಡಿ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಎಂದೂ ಪ್ರಚಾರ, ಪುರಸ್ಕಾರಗಳಿಗೆ ಹಾತೊಯದೆ ಈಗಲೂ ಬಸವಣ್ಣನವರ ಉಕ್ತಿಯಂಥೇ ಕಾಯಕವೇ ಕೈಲಾಸವೆಂಬಂತೆ
ಬಾಳಿದ್ದಾರೆ. ಇವರ ಬಹುಮುಖ ಸಾಧನೆಯನ್ನು ಪರಿಗಣಿಸಿ ಈ ಸಾಲಿನ ಸರಸ್ವತಿ ಪ್ರಭಾ ಪ್ರಭಾ ಪುರಸ್ಕಾರ ೨೦೨೫ಕ್ಕೆ ಆಯ್ಕೆ ಮಾಡಲಾಗಿದೆ.

ಸರಸ್ವತಿ ಪ್ರಭಾ ಪುರಸ್ಕಾರ – ೨೦೨೩ ಕ್ಕೆ ಆಯ್ಕೆಯಾದ ಶ್ರೀ ಕೆ. ಜನಾರ್ಧನ ಭಟ್, ಮೈಸೂರು ಇವರಿಗೆ ಸರಸ್ವತಿ ಪ್ರಭಾ ಪತ್ರಿಕೆಯ ವತಿಯಿಂದ ಶಾಲು, ಸ್ಮರಣಿಕೆ, ಹಾರ, ಸನ್ಮಾನ ಪತ್ರ, ಫಲತಾಂಬೂಲ ಹಾಗೂ ರೂ. ೫೦೦೧/-(ರೂ. ಐದು ಸಾವಿರದ ಒಂದು) ಗಳ ನಗದು ಹಣದೊಂದಿಗೆ ಸದ್ಯದಲ್ಲಿಯೇ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸರಸ್ವತಿ ಪ್ರಭಾ ಪತ್ರಿಕೆಯ ಸಂಪಾದಕರಾದ ಆರಗೋಡು ಸುರೇಶ ಶೆಣೈಯವರು ಪ್ರಕಟಣೆಯು ಮೂಲಕ ತಿಳಿಸಿದ್ದಾರೆ.

ಕಳೆದ ೨೦೨೨ರ ಸಾಲಿನಲ್ಲಿ ೨೫ಕ್ಕಿಂತ ಅಧಿಕ ಸಾಹಿತ್ಯ ಕೃತಿಗಳನ್ನು ಬರೆದ (ಅವುಗಳಲ್ಲಿ ೬ ಕೊಂಕಣಿ ಕೃತಿಗಳು) ಬೆಂಗಳೂರಿನ ಕೊಂಕಣಿ ಸಹಿತ ಕನ್ನಡ, ಇಂಗ್ಲೀಷ್, ಹಾಗೂ ಹಿಂದಿ ಸೇರಿ ಚತುರ್ಭಾಷಾ ಸಾಹಿತಿ ೮೦ಕ್ಕಿಂತ ಅಧಿಕ ವಯಸ್ಸಾದ ವಯೋವೃದ್ಧ ಡಾ|| ಮೋಹನ ಜಿ. ಶೆಣೈ ಮತ್ತು ಕೊಂಕಣಿ ಸಾಹಿತ್ಯ ಹಾಗೂ ರಂಗಕಲೆಗೆ ಅಪಾರ ಸೇವೆ ಸಲ್ಲಿಸಿ, ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ೩೦ಕ್ಕಿಂತ ಅಧಿಕ ನಾಟಕಗಳನ್ನು ಬರೆದ ೭೫ ವರ್ಷ ವಯಸ್ಸಿನ ಶಿರಸಿಯ ಶ್ರೀ ಅನಿಲ ಪೈ ಇವರಿಗೆ, ೨೦೨೩ನೇ ಸಾಲಿನಲ್ಲಿ ಕೊಂಕಣಿಯ ಹೆಸರಾಂತ ಬರಹಗಾರ್ತಿ, ಕೊಂಕಣಿ ಜಾನಪದ ಸಾಹಿತ್ಯ ರಕ್ಷಕಿಯಾದ ೮ ಕೊಂಕಣಿ ಕೃತಿಗಳನ್ನು ಪ್ರಕಟಿಸಿರುವ ೭೭ ವರ್ಷ ವಯಸ್ಸಿನ ಶಿರಸಿಯ ಶ್ರೀಮತಿ ಜಯಶ್ರೀ ನಾಯಕ ಎಕ್ಕಂಬಿ ೨೦೨೪ರಲ್ಲಿ ಕುಂದಾಪುರದ ಹಾಲಾಡಿ ಲಕ್ಷೀದೇವಿ ವಾಸುದೇವ ಕಾಮತ ಇವರಿಗೆ ಸರಸ್ವತಿ ಪ್ರಭಾ ಪುರಸ್ಕಾರವನ್ನು ಪ್ರಧಾನ ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now