ಮಿಜಾರ್ – ಕುಡುಬಿ ಜಾನಪದ ಸಮಾವೇಶ- 2025

ಮಿಜಾರ್ – ಕುಡುಬಿ ಜಾನಪದ ಸಮಾವೇಶ- 2025

0Shares

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ ಕುಡುಬಿ ಜಾನಪದ ಸಮಾವೇಶ 2025 ಕಾರ್ಯಕ್ರಮವು 27-04-2025ರಂದು ಮಿಜಾರಿನ, ಮಿಜಾರು ಅಣ್ಣಪ್ಪ ಸಭಾಂಗಣದಲ್ಲಿ ಜರುಗಿತು. ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಮೆರವಣಿಗೆಯು ವೈಭವಯುತವಾಗಿ ದೂಮಚಡವು ಮುಖ್ಯರಸ್ತೆಯಿಂದ ಮಿಜಾರ್ ಅಣ್ಣಪ್ಪ ಸಭಾಭವನದವರೆಗೆ ನಡೆಯಿತು. ಮೆರವಣಿಗೆಯಲ್ಲಿ 1500 ಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮೋಹನ್ ಆಳ್ವರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ತನಗೂ, ತನ್ನ ಕುಟುಂಬದವರಿಗೂ ಕುಡುಬಿ ಜನಾಂಗದವರೊಂದಿಗೆ ಹಾಗೂ ಅವರು ದುಡಿದು ಸುರಿಯುವ ಬೆವರಿಗೂ ತುಂಬಾ ಹತ್ತಿರದ ಸಂಬಂಧವಿದೆ . ಬದಲಾಗುತ್ತಿರುವ ಕಾಲದಲ್ಲಿ ಬದಲಾವಣೆಗೆ ಸರಿಯಾಗಿ ಕುಡುಬಿ ಸಮುದಾಯವು ಬದಲಾಗಬೇಕು. ಎಲ್ಲರೂ ಶಿಕ್ಷಿತರಾಬೇಕು. ತಮ್ಮ ವಿದ್ಯಾ ಸಂಸ್ಥೆಯಲ್ಲಿ ಕುಡುಬಿ ಸಮುದಾಯದ ಮಕ್ಕಳಿಗೆ ಉಚಿತ ಪ್ರವೇಶಾತಿ ನೀಡಲು ತಯಾರಿದ್ದೇನೆ ಎಂದೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ಮೂಡಬಿದ್ರಿ ಇದರ ಮಾಲಕರಾದ ಶ್ರೀಪತಿ ಭಟ್ ಉಪಸ್ಥಿತರಿದ್ದು ಅಕಾಡೆಮಿ ಆಯೋಜಿಸಿದ ಕುಡುಬಿ ಜಾನಪದ ಸಮಾವೇಶವು ಅದ್ದೂರಿಯಾಗಿ ನೆರವೇರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶೇಖರ್ ಗೌಡರವರು ಬರೆದ ’ತ್ಹೊಹೀ ತ್ಹೊಹೀ ಗುಮ್ಮಟ್’ ಪುಸ್ತಕದ ವಿಮೋಚನೆಯಾಯಿತು. ವೇದಿಕೆಯಲ್ಲಿ ಗೌರವ ಸಂಚಾಲಕರು, ಮಾರ್ಗದರ್ಶಕರಾದ ಶ್ರೀ ಮೋನಪ್ಪ ಗುರಿಕಾರ,ಕುತ್ತಾರು, ನಿರ್ವಹಣಾ ಸಮಿತಿ ಸಂಚಾಲಕರು ಶ್ರೀ ಸದಾಶಿವ ಮಿಜಾರು, ಅಸ್ಟ್ರಾ ಚೆಕ್ ಪ್ರೈ. ಲಿ. ಮುಂಬಯ್ ಇದರ ಮಾಲಕರಾದ ಶ್ರೀ ಪದ್ಮನಾಭ, ಕರ್ನಾಟಕ ರಾಜ್ಯ ಕುಡುಬಿ ಸಮಾಜ ಸೇವಾ ಸಂಘ (ರಿ) ಇದರ ಪ್ರಧಾನ ಕಾರ್ಯದರ್ಶಿ ಶ್ರೀ ನಾರಾಯಣ ನಾಯ್ಕ್ ಗೋಳಿಯಂಗಡಿ ಹಾಗೂ ಎಲ್ಲಾ ವಾಳೆಯ ಅಧ್ಯಕ್ಷರು, ಹುದ್ದೆದಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಶ್ರೀನಿವಾಸ್ ಗೌಡ, ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ದಯಾನಂದ್ ಮಡ್ಕೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುಮಾರು 30ಕ್ಕೂ ಮಿಕ್ಕಿ ಕುಡುಬಿ ಕಲಾತಂಡಗಳಿಂದ ಗುಮಟೆ, ಕೋಲಾಟ ಮತ್ತು ಜಾನಪದ ನೃತ್ಯ ರೂಪಕಗಳ ಪ್ರದರ್ಶನ ಜರಗಿತು.

  ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಡಪದವಿನ ಸಮಾಜ ಸೇವಕರಾದ ಶ್ರೀ ಆರ್.ಕೆ. ಪ್ರಥ್ವಿರಾಜ್ ರವರು ಮಾತಾನಾಡಿ, ಕುಡುಬಿಯವರು ಸಂಖ್ಯಾಬಲದಲ್ಲಿ ಕಡಿಮೆಯಿದ್ದರೂ, ಉಳಿದ ವಿಚಾರದಲ್ಲಿ ಮುಂದೆಯಿದೆ.  ಕುಡುಬಿ ಸಮಾಜದವರು ಬೆಳೆಯಲಿ ಎಂದು ಹಾರೈಸಿದರು. ಮೂಲ್ಕಿ- ಮೂಡುಬಿದಿರೆ ವಿಧಾನಸಭಾ ಶಾಸಕರಾದ ಮಾನ್ಯ ಶ್ರೀ ಉಮಾನಾಥ ಕೋಟ್ಯಾನ್ ರವರು ಮಾತಾನಾಡಿ, ಕುಡುಬಿ ಸಮಾಜವು ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಕುಡುಬಿ ಸಮಾಜವು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು. ಕುಡುಬಿ ಸಮಾಜದ ಹಿರಿಯರಾದ ಶ್ರೀ ಸುಂದರ ಗೌಡ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ, ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ (ರಿ.) ಇದರ ಅಧ್ಯಕ್ಷರಾದ ಕೃಷ್ಣ ಕೊಂಪದವು, ಕಾರ್ಯದರ್ಶಿ ಶೇಖರ್ ಗೌಡ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಶ್ರೀನಿವಾಸ್ ಗೌಡ, ಅಕಾಡೆಮಿ ಸದಸ್ಯರಾದ ನವೀನ್ ಲೋಬೊ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಮತ್ತು ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ದ.ಕ. ಜಿಲ್ಲಾ ಕುಡುಬಿ ಸಮಾಜ್ ಸೇವಾ ಸಂಘ್(ರಿ) ಕೊಂಪದವು ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಕೊಂಪದವುರವರು ಧನ್ಯವಾದಗಳನ್ನು ಸಮರ್ಪಿಸಿದರು. ರಂಜಿತಾ, ಸಿದ್ದಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾವೇಶದಲ್ಲಿ ಹಳೆಯ ಕಾಲದ ವಸ್ತುಗಳ ಪ್ರದರ್ಶನ ಹಾಗೂ ಅಕಾಡೆಮಿಯಿಂದ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಮಳಿಗೆ ಏರ್ಪಡಿಸಲಾಗಿತ್ತು.
ಸಮಾರೋಪ ಕಾರ್ಯಕ್ರಮದ ಬಳಿಕ ವಿವಿಧ ವಿನೋದಾವಳಿಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಬೆಳಿಗ್ಗೆಯಿಂದ – ರಾತ್ರಿಯವರೆಗೆ ಸರಿಸುಮಾರು 5000ಕ್ಕೂ ಮಿಕ್ಕಿ ಕುಡುಬಿ ಸಮಾಜದ ಜನರು ಭಾಗವಹಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now