ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

0Shares

ಕೊಳಲಗಿರಿ, 24 ಡಿಸೆಂಬರ್ 2025: ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ದಿವ್ಯ ಬಲಿಪೂಜೆಯ ಪ್ರಧಾನ ಯಾಜಕರಾಗಿ ಅತೀ ವಂದನಿಯ ಧರ್ಮಗುರುಗಳಾದ ಮನೋಹರ್ ಡಿ’ಸೋಜಾ,ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ (ಟ್ರಿನಿಟಿ ವಿಹಾರ ಇದರ ಪ್ರಧಾನರು) ಹಾಗೂ ಚರ್ಚಿನ ಧರ್ಮಗುರು ವಂದನಿಯ ಧರ್ಮಗುರುಗಳಾದ ಜೋಸೆಫ್ ಮಾಚಾದೋ ಅವರು ನೆರವೇರಿಸಿದರು.


ಕ್ರಿಸ್‌ಮಸ್‌ ಕೇವಲ ಕೇಕ್ ತಿನ್ನುವ ಅಥವಾ ಉಡುಗೊರೆ ಹಂಚುವ ಹಬ್ಬವಲ್ಲ. ಇದು ‘ಕ್ಷಮೆ’ ಮತ್ತು ’ತ್ಯಾಗ’ವನ್ನು ಕಲಿಸುವ ದಿನ. ಯೇಸುಕ್ರಿಸ್ತನು ಶತ್ರುಗಳನ್ನು ಪ್ರೀತಿಸಬೇಕು ಮತ್ತು ದೀನದಲಿತರಿಗೆ ಸಹಾಯ ಮಾಡಬೇಕು ಹಾಗೂ ಈ ದಿನದಂದು ಜನರು ತಮ್ಮ ಹಳೆಯ ವೈಷಮ್ಯಗಳನ್ನು ಮರೆತು ಪರಸ್ಪರ ಶುಭಾಶಯ ಕೋರಬೇಕು ಎಂದು ಬೋಧಿಸಿದರು.
ಮಧ್ಯರಾತ್ರಿಯೇ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಗಳು ನಡೆದಿದ್ದು, ‘ಗ್ಲೋರಿಯಾ’ ಗೀತೆಗಳ ಮೊಳಗಿನೊಂದಿಗೆ ಬಾಲ ಯೇಸುವನ್ನು ಬರಮಾಡಿಕೊಳ್ಳಲಾಯಿತು.


ಸಹಸ್ರಾರು ಭಕ್ತಾದಿಗಳು ಆಚರಣೆಯಲ್ಲಿ ಭಾಗಿದಾರರಾದರು.
ಪೂಜೆಯ ಬಳಿಕ ಕಥೋಲಿಕ್ ಸಭಾ, ಐಸಿವೈಯಮ್ ಹಾಗೂ ವೈಸಿಯಸ್ ಇವರಿಂದ ಮನೋರಂಜನಾ ಕಾರ್ಯಕ್ರಮವನ್ನು ನೀಡಿದರು..

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now