ಕೊಳಲಗಿರಿ ಉಚಿತ ವೈದ್ಯಕೀಯ ಶಿಬಿರ

ಕೊಳಲಗಿರಿ ಉಚಿತ ವೈದ್ಯಕೀಯ ಶಿಬಿರ

0Shares


ಆರ್ಥಿಕವಾಗಿ ಸದೃಡರಾಗುವುದರ ಜೊತೆಗೆ ಉತ್ತಮ ಆರೋಗ್ಯ ಅತೀ ಮುಖ್ಯ.. ರೋಯಲ್ ರತ್ನಾಕರ್ ಶೆಟ್ಟಿ.

ಬ್ಯಾಂಕ್ ಆಫ್ ಬರೋಡ ಕೊಳಲಗಿರಿ ಶಾಖೆ ಮತ್ತು ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ. ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ, ಹಾವಂಜೆ ಗ್ರಾಮ ವಿಕಾಸ ಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳಲಗಿರಿ, ಬಿಲ್ಲವ ಸೇವಾ ಸಂಘ ಹಾವಂಜೆ ಇವರ ಸಹಕಾರದೊಂದಿಗೆ.. ಹಾವಂಜೆ ನಾರಾಯಣ ಗುರು ಸಭಾಭವನದಲ್ಲಿ “ಉಚಿತ ವೈದ್ಯಕೀಯ ಶಿಬಿರ” ನೆರವೇರಿತು…


ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿಗಳು ಕೃಷಿತಜ್ಞ ರೋಯಲ್ ರತ್ನಾಕರ್ ಶೆಟ್ಟಿಯವರು ಮಾತನಾಡುತ್ತಾ ನಾವುಗಳು ಆರ್ಥಿಕವಾಗಿ ಸ್ವಾವಲಂಬಿ ಆಗುವುದರ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು.. ಜನಹಿತ ಕೈಂಕರ್ಯ ಮಾಡುತ್ತಿರುವ ಕೊಳಲಗಿರಿ ಶಾಖೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.. ವೇದಿಕೆಯಲ್ಲಿ ರೈತಸೇವಾ ಸಹಕಾರಿ ಸಂಘ ಹಿರಿಯಡ್ಕ ಇದರ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳಾದ ಪ್ರಶಾಂತ್ ಶೆಟ್ಟಿ.. ಸಮುದಾಯ ವೈದ್ಯಕೀಯ ವಿಭಾಗದ ಡಾಕ್ಟರ್ ಹರ್ಷಿತ, ಹಾವಂಜೆ ಬಿಲ್ಲವ ಸಂಘದ ಅಧ್ಯಕ್ಷ ದೋಗು ಪೂಜಾರಿ, ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಕೊಳಲಗಿರಿ ಶಾಖಾಧಿಕಾರಿ ಮನು ಕೆ.ಎಸ್, ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾಲತಾ ಉಪಸ್ಥಿತರಿದ್ದರು.. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್ ಆಫ್ ಬರೋಡ ಇದರ ಡೆಪ್ಯೂಟಿ ರೀಜನಲ್ ಮೆನೇಜರ್ ಉಡುಪಿ ವಿದ್ಯಾಧರ ಶೆಟ್ಟಿ ಮಾತನಾಡುತ್ತಾ.. ನಮ್ಮ ಬ್ಯಾಂಕ್ ಸದಾ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತಾ ಸಾರ್ವಜನಿಕರಿಗೆ ಉಪಯೋಗವಾಗುವ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ… ಯುವಕ ಯುವತಿಯರು ಬ್ಯಾಂಕ್ ಉದ್ಯೋಗದ ಕಡೆಗೆ ಗಮನಹರಿಸಿ, ಇದರಲ್ಲಿ ಒಳ್ಳೆಯ ಭವಿಷ್ಯವಿದೆ ಎನ್ನುವ ಮಾತುಗಳನ್ನಾಡಿದರು… ಶಾಖಾಧಿಕಾರಿ ಮನು ಕೆ.ಎಸ್ ಸ್ವಾಗತಿಸಿ, ಶಾಖಾ ಉಪ ಪ್ರಬಂಧಕರಾದ ಅಜು ಯು ಮೇಡಮ್ ಅತಿಥಿ ಗಣ್ಯರಿಗೆ ವಿಶೇಷವಾದ ಗಿಡವನ್ನು ನೀಡಿ ಗೌರವಿಸಿದರು, ಮುಖ್ಯ ಕ್ಯಾಶಿಯರ್ ಮಂಜುನಾಥ್ ವಂದನಾರ್ಪಣೆಗೈದರು, ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.. ಬ್ಯಾಂಕ್ ಸಿಬ್ಬಂದಿಗಳಾದ ಕ್ಯಾರಲ್ ಹಾಗೂ ಸುಧಾ ಸಹಕರಿಸಿದರು ಸಾರ್ವಜನಿಕರು ಅನೇಕ ರೀತಿಯ ತಪಾಸಣೆಗೈದು ಶಿಬಿರವನ್ನು ಯಶಸ್ವಿಗೊಳಿಸಿದರು..

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now