ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 24

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 24

0Shares

ಗಂಧದ ಹಾರ*…

ಡಾ.ಶಶಿಕಿರಣ್ ಶೆಟ್ಟಿ

ಆತ, ಅಂದು ಚುನಾವಣೆ ಜಯಿಸಿದವನೇ ಗಂಧದ ಹಾರದೊಂದಿಗೆ ತೆರೆದ ಕಾರಿನಲ್ಲಿ ಹಲ್ಲು ಬಿಡುತ್ತ ಮೆರವಣಿಗೆ ಮಾಡುತಿದ್ದ …ಆತ ನಗುತಿದ್ದರೆ ಜನರೆಲ್ಲಾ ಜಯಕಾರ ಹಾಕುತಿದ್ದರು …
ಅವನ ಕೊರಳಲ್ಲಿದ್ದ ಗಂಧದ ಹಾರ ತನ್ನೊಳಗೇ ಹೇಳಿತ್ತಂತೆ ..

ಇಂದು ನಾನು ನಿನ್ನ ಕೊರಳಲ್ಲಿದ್ದೇನೆ ನೀನು ನಗುತಿರುವೆ ಜನರೆಲ್ಲಾ ನಿನ್ನ ಹೊಗಳುತಿದ್ದಾರೆಂದು ಜಾಸ್ತಿ ಮೆರೆಯಬೇಡ..ಮುಂದೊಂದು ದಿನ ಮತ್ತೆ ನಾನೇ ನಿನ್ನ ಕೊರಳಿಗೆ ಬರುತ್ತೇನೆ ಆ ದಿನ ನೀನು ಮೌನ ವಾಗಿ ಜೀವ ಇಲ್ಲದೆ ಮಲಗಿರುತ್ತಿ.ಇದೇ ಜನ ಸುತ್ತ ನೆರೆದಿರುತ್ತಾರೆ ಅಂದೂ ಕೂಡ ಇವರು ಗಳು ನಿನ್ನನ್ನು ಇದೇ ರೀತಿ ಹೊಗಳು ತಿರಲಿ ..
ಹಾಗೆ ಬದುಕುವುದ ಕಲಿ ಎಂದಿತಂತೆ ಮನಸ್ಸಿನಲ್ಲಿ ….

ಹೌದು ಗೆದ್ದಾಗ ಬೀಗದೆ ಸೋತಾಗ ಕುಗ್ಗದೇ, ಇನ್ನೊಬ್ಬರ ಕಷ್ಟ ಗಳಿಗೆ ಸ್ಪಂದಿಸುವ ಮನಸ್ಥಿತಿಯ ಜೀವನ ವ ನಾವು ನೀವೆಲ್ಲರೂ ಕಲಿಯಬೇಕಾಗಿದೆ,ನಿನ್ನ ಉಸಿರು ನಿಂತಾಗ,ಜನರು ಹೊಗಳುವುದು
ಅಥವಾ ತೆಗಳುವುದು ನಿನ್ನ ಉಸಿರಿರುವಾಗ ನಿನ್ನ ಬದುಕು ಹೇಗಿತ್ತು ಅನ್ನುವುದರ ಮೂಲಕ ಇದಕ್ಕೆ ಸಾಕ್ಷಿ ಯಾಗಲು ನೀನಿರುವುದಿಲ್ಲ ಆದರೆನಿನ್ನ ಕೊರಳಲ್ಲಿರುವ ಗಂಧದ ಹಾರ ಮಾತ್ರ ಸಾಕ್ಷಿಯಾಗಿ ಉಳಿಯಲಿದೆ

ಡಾ.ಶಶಿಕಿರಣ್ ಶೆಟ್ಟಿ


9945130630
(ವಾಟ್ಸಪ್)
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
ನಿಮ್ಮ ಅಭಿಪ್ರಾಯ ನೇರವಾಗಿ ನನಗೆ ವಾಟ್ಸಪ್ ಮಾಡಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now