
ಯುವ ವಿಚಾರ ವೇದಿಕೆ ಕೊಳಲಗಿರಿಯಲ್ಲಿ ರಜತ ಸಂಭ್ರಮ :
ಆಶಾ ಪ್ರಕಾಶ್ ಶೆಟ್ಟಿ ಬೆಂಗಳೂರು MRG Group ಪ್ರವೇಶದ್ವಾರ ಉದ್ಘಾಟನೆ :
ಸುಗ್ಗಿ ಸುಧಾಕರ ಶೆಟ್ಟಿ
ಮಾಜಿ ಸಚಿವರು ಜಯಪ್ರಕಾಶ್ ಹೆಗ್ಡೆ ರಜತ ಸಂಭ್ರಮದ ಕಾರ್ಯಕ್ರಮ ಉದ್ಘಾಟನೆ
ಸಂಘದ ಯೂಟ್ಯೂಬ್ ಉದ್ಘಾಟನೆ ವೆರೋನಿಕಾ ಕರ್ನೇಲಿಯೋ.
ಕೊಳಲಗಿರಿ ಯುವ ವಿಚಾರ ವೇದಿಕೆಯ ಎರಡು ದಿನಗಳ ರಜತ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ದೊರೆತು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಮತ್ತು ಕಲೆ ಶಿಕ್ಷಣದ ಒಂದು ಭಾಗ ವಾಗಿದ್ದು ಮಕ್ಕಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು ಎಂದರು. ಯುವ ವಿಚಾರ ವೇದಿಕೆಯ ಅಧ್ಯಕ್ಷ ಸಂದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಶೇಷವಾಗಿ ರಥದ ಪ್ರತಿಕೃತಿಯಲ್ಲಿ ಸ್ಮರಣ ಸಂಚಿಕೆಯನ್ನು ರಥ ಎಳೆಯುವ ಮೂಲಕ ವೇದಿಕೆಗೆ ತಂದು ಬಿಡುಗಡೆ ಗೊಳಿಸಲಾಯಿತು. ಉದ್ಯಮಿ ಹರೀಶ್ ಪೂಜಾರಿ ಒಳಮಡಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ವೆರೋನಿಕಾ ಕರ್ನೇಲಿಯೋ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿಯವರು ತಮ್ಮ ಭಾಷಣದ ಸಾಲುಗಳಲ್ಲಿ ವಿದ್ಯಾರ್ಥಿಗಳು ಪೋಷಕರು ನಡುವಿನ ಸಂಬಂಧ ಮಾನವೀಯ ಮೌಲ್ಯಗಳು ಸಂಪ್ರದಾಯ ಆಚಾರ ವಿಚಾರಗಳ ಕುರಿತು ಮಾತನಾಡಿದರು. ಸ್ಥಾಪಕ ಅಧ್ಯಕ್ಷ ಜಯಪ್ರಕಾಶ್ ಕುಮಾರ್, ರೋಯಲ್ ರತ್ನಾಕರ ಶೆಟ್ಟಿ, ರಮೇಶ್ ಕರ್ಕೆರ, ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಉಪಸ್ಥಿತರಿದ್ದರು. ಸಾಧಕರಾದ ರೋಯಲ್ ರತ್ನಾಕರ ಶೆಟ್ಟಿ, ಸ್ಥಾಪಕ ಅಧ್ಯಕ್ಷ ಜಯಪ್ರಕಾಶ್ ಕುಮಾರ್, ಹೋಂ ಡಾಕ್ಟರ್ ಫೌಂಡೇಶನ್ನ ಡಾ.ಶಶಿಕಿರಣ್ ಶೆಟ್ಟಿ, ಶಿಕ್ಷಕ ಪ್ರಶಾಂತ್ ಶೆಟ್ಟಿ, ಸಮಾಜ ಸೇವೆ ಮಾಡುತ್ತಿರುವ ಅಶ್ವಿನ್ ರೋಚ್, ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ, ದಿನೇಶ್ ಪೂಜಾರಿ ಅಮ್ಮುಂಜೆ ಮತ್ತು ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಮೇಶ್ ಕರ್ಕೇರ ಇವರು ಸಂಘ 25 ವರ್ಷಗಳ ಸಂತಸಕ್ಕೆ ಒಂದೇ ವರ್ಷದಲ್ಲಿ ಹಮ್ಮಿಕೊಂಡ 25 ಕಾರ್ಯಕ್ರಮಗಳ ಸಂಕ್ಷಿಪ್ತ ಪರಿಚಯ ಅನುಭವ ಹಂಚಿದರು. ವೇದಿಕೆಯು ನಡೆದು ಬಂದ ದಾರಿಯ ಬಗ್ಗೆ ಆಧುನಿಕ ತಂತ್ರಜ್ಞಾನದ ಮೂಲಕ ವೀಡಿಯೋ ಚಿತ್ರೀಕರಿಸಿ ಸಭಿಕರಿಗೆ ರಚಿಸಲು ಅವಕಾಶ ಕಲ್ಪಿಸಲಾಯಿತು . ಇದೇ ವೇದಿಕೆಯಲ್ಲಿ ಹಡಿಲು ಭೂಮಿಯ ಕ್ರೃಷಿಯಲ್ಲಿ ಬಂದ ಫಸಲಾದ ಅಕ್ಕಿಯನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ಸುಬ್ರಹ್ಮಣ್ಯ ಆಚಾರ್ಯ ಬಹುಮಾನಿತರ ಪಟ್ಟಿ ವಾಚಿಸಿದರು. ರವೀಂದ್ರ ಕುಮಾರ್ ವಂದಿಸಿದರು. ನಂತರ ಆಸುಪಾಸಿನ ಪರಿಸರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಖ್ಯಾತ ರಂಗ ನಿರ್ದೇಶಕ ಯೋಗೀಶ್ ಕೊಳಲಗಿರಿ ನಿರ್ದೇಶನದಲ್ಲಿ ಸಂಘದವರೇ ಪ್ರಬುದ್ಧ ಸದಸ್ಯ ಕಲಾವಿದರು ಅಭಿನಯಿಸಿದ “ಮದಿಮೆದ ಇಲ್ಲಡ್” ನಾಟಕ ಪ್ರದರ್ಶನ ನಡೆಯಿತು. ರಜತ ಸಂಭ್ರಮದಲ್ಲಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ರವರು ಯುವ ವಿಚಾರ ವೇದಿಕೆಗೆ ಪ್ರಾರಂಭದ ದಿನಗಳಲ್ಲಿ ಅಂದು ಮಾರ್ಗದರ್ಶನ ನೀಡಿದ್ದ ಕೀರ್ತಿಶೇಷರುಗಳಾದ ಡಾಕ್ಟರ್ ರಾಘವೇಂದ್ರ ರಾವ್, ರೊಟೇರಿಯನ್ ಸುಬ್ಬಣ್ಣ ಪೈ, ಬೋನಿಪಾಸ್ ಮಸ್ಕರೇನಸ್, ಸಂಜೀವ ಸುವರ್ಣ, ಕೃಷ್ಣಪ್ಪ ಪೂಜಾರಿ ಇವರುಗಳನ್ನು ಸ್ಮರಿಸಿದರು.
ಸಂಘಕ್ಕೆ 25 ವರ್ಷಗಳಿಂದಲೂ ಮಾರ್ಗದರ್ಶಕರಾದ ಕೊಳಲಗಿರಿ ಆಲ್ಫ್ರೆಡ್ ಡಿಸೋಜರವರ ಸಂಪೂರ್ಣ ಸಹಕಾರಕ್ಕೆ ಹಾಗೂ ದಾನಿಗಳು ಮಹನೀಯರುಗಳನ್ನು ಶ್ಲಾಘಿಸಿದರು.





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now