ಸೇಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕ ಹಬ್ಬ ಆಚರಣೆ

ಸೇಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕ ಹಬ್ಬ ಆಚರಣೆ

0Shares

ವಾರ್ಷಿಕ ಹಬ್ಬದ ಆಚರಣೆಯು (Annual Feast Celebration) ಚರ್ಚ್‌ಗಳಲ್ಲಿ ನಡೆಯುವ ಒಂದು ಪವಿತ್ರ ಮಾಸಾಚರಣೆ (Mass), ವಿಶೇಷ ಪ್ರಾರ್ಥನೆಗಳು, ಧರ್ಮೋಪದೇಶಗಳು ನಡೆಯುತ್ತದೆ. ಇದು ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುವ ಧಾರ್ಮಿಕ ಉತ್ಸವವಾಗಿದೆ.
ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಇಂದು ವಾರ್ಷಿಕ ಹಬ್ಬದ ವಿಶೇಷ ಪೂಜೆ ಮತ್ತು ಬಲಿಪೂಜೆಯನ್ನು ನೆರವೇರಿಸಲಾಯಿತು. ಈ ಬಲಿಪೂಜೆಯ ಪ್ರಧಾನ ಯಾಜಕರಾಗಿ ವಂದನೀಯ ಬೋನಿಫಾಸ್ ಪಿಂಟೋ (ಮೂಡುಬೆಳ್ಳೆ ತರಬೇತಿ ಕೇಂದ್ರದ ಆತ್ಮಿಕಾ ನಿರ್ದೇಶಕರು), ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜೆನರಲ್ ಮೊನ್ಸಿಜ್ಞೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಚರ್ಚಿನ ಧರ್ಮಗುರುಗಳಾದ ವಂದನೀಯ ಜೋಸೆಫ್ ಮಚಾದೋ, ಅತಿಥಿ ಧರ್ಮಗುರುಗಳು ಹಾಗೂ ವಾರಾಡೋದ ಧರ್ಮಗುರುಗಳ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಈ ಹಬ್ಬವು ನಂಬಿಕೆ ಮತ್ತು ಒಗ್ಗಟ್ಟನ್ನು ಆಚರಿಸುವ ಒಂದು ದೊಡ್ಡ ಕೂಟವಾಗಿದೆ..
ಈ ಹಬ್ಬದ ಮುಖ್ಯ ಪ್ರಾಯೋಜಕರು ಅಂತೋನಿ, ಮಾರಿಯೆಟ್ ಮತ್ತು ಅಂಡ್ರಿಯಾ ಡಿ’ಸೋಜಾ, ಹಾಗೂ ಕುಟುಂಬ ಕುಕ್ಕಿ ಕಟ್ಟೆ ವಾರ್ಡ್ ಇವರು ವಹಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now