ಯುವ ವಿಚಾರ ವೇದಿಕೆ (ರಿ.) ಉಪ್ಪೂರು ಕೊಳಲಗಿರಿJCI ಕಲ್ಯಾಣಪುರ ಇದರ ಜಂಟಿ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಹಾಗೂ ನಾಯಕತ್ವ ತರಬೇತಿ ಕಾರ್ಯಾಗಾರ

ಯುವ ವಿಚಾರ ವೇದಿಕೆ (ರಿ.) ಉಪ್ಪೂರು ಕೊಳಲಗಿರಿJCI ಕಲ್ಯಾಣಪುರ ಇದರ ಜಂಟಿ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಹಾಗೂ ನಾಯಕತ್ವ ತರಬೇತಿ ಕಾರ್ಯಾಗಾರ

0Shares

ಯುವ ವಿಚಾರ ವೇದಿಕೆ (ರಿ.) ಉಪ್ಪೂರು ಕೊಳಲಗಿರಿ
ಹಾಗೂ
JCI ಕಲ್ಯಾಣಪುರ ಇದರ ಜಂಟಿ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಹಾಗೂ ನಾಯಕತ್ವ ತರಬೇತಿ ಕಾರ್ಯಾಗಾರ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಯುವ ವಿಚಾರ ವೇರಿಕೆ (ರಿ.) ಉಪ್ಪೂರು ಕೊಳಲಗಿರಿ ಹಾಗೂ JCI ಕಲ್ಯಾಣಪುರ ಇದರ ಜಂಟಿ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಹಾಗೂ ಕಾರ್ಯಾಗಾರವನ್ನು ಯುವ ವಿಚಾರ ವೇದಿಕೆ ವೇದಿಕೆಯಲ್ಲಿ ಆಯೋಜಿಸಲಾಯಿತು, ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂದೀಪ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. JCI ಅಧ್ಯಕ್ಷರಾದ ಎವಿಟಾ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಲೇಡಿ ಜೆಸಿಐ ಕೋರ್ಡಿನೇಟರ್ ಶ್ವೇತಾ ಅರುಣ್, ಜೋನಲ್ ತರಬೇತಿ ಸಂಪನ್ಮೂಲರಾದ ಶ್ರೀಮತಿ ಅನಿತ ನರೇಂದ್ರ ಕುಮಾರ್, ಯುವ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸದಾಶಿವ ಕುಮಾರ್, ಜೊತೆ ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಸುಕೇಶ್, ಜೆ.ಸಿ.ಐ ಜೋನಲ್ ಚೇರ್ ಪರ್ಸನ್ ಶ್ರೀಮತಿ ಆಶಾ ಅಲೆನ್ ವಾಸ್ ರವರು ಉಪಸ್ಥಿತರಿದ್ದರು. ಟ್ರೈನರ್ ಶ್ರೀಮತಿ ಅನಿತ ನರೇಂದ್ರ ಕುಮಾರ್ ಅವರು ಮಹಿಳೆಯರಿಗೆ ನಾಯಕತ್ವ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರೇಷ್ಠ ಸೇವೆ ಮಾಡುತ್ತಿರುವ ಸ್ವಚ್ಛತಾ ಸಾರಥಿ ಶ್ರೀಮತಿ ಕಮಲ ಹಾಗೂ ಸ್ವಚ್ಛತಾ ಸೇನಾನಿ ಶ್ರೀಮತಿ ಗೀತಾ ಇವರನ್ನು ಗೌರವಿಸಿ ಸಮ್ಮಾನಿಸಲಾಯಿತು. ತದನಂತರ ಮಹಿಳೆಯರಿಗೆ ಮನೋರಂಜನಾ ಕ್ರೀಡಾಕೂಟವನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಕರಾವಳಿ ಕಾವಲು ಪಡೆ ಗಂಗೊಳ್ಳಿ ಠಾಣೆಯ ಠಾಣಾಧಿಕಾರಿಯವರಾದ ಶ್ರೀಮತಿ ಮುಕ್ತಾ ಮೇಡಂ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಕಾಮಾನು ಮಾಹಿತಿ ನೀಡಿದರು. ಕು. ಶಬರಿ ಮತ್ತು ಧನ್ಯ ಪಾರ್ಥನೆ ಮಾಡಿದರು. ಶ್ರೀಮತಿ ಶೋಭಾ ಯೋಗಿಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸದಾಶಿವ ವಂದನಾರ್ಪಣೆ ಮಾಡಿದರು ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಣೆ ಮಾಡಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now