
ಸತ್ಯವಂತರಿಗಿದು ಕಾಲವಲ್ಲ
*ಅಂದು ಆ ರಾಜ್ಯದ ದೊರೆ .ರಾಜ್ಯದ ದುಃಖ ತೃಪ್ತ ಪ್ರಜೆಗಳನ್ನು ಕುಷಿ ಪಡಿಸಲೋಸ್ಕರ ಒಂದು ಯಕ್ಷಗಾನ ವನ್ನು ತನ್ನ ಆಸ್ಥಾನದಲ್ಲಿ ಆಯೋಸಿದ್ದ
ಅಲ್ಲಿ ಆ ರಾಜ್ಯದ ಗಣ್ಯಾದಿ ಗಣ್ಯರ ಜೊತೆ ಸಮಸ್ತ ಊರಿನ ಜನ ,ಮುಖಂಡರು ಬಂದಿದ್ದರು ..
ಆ ಯಕ್ಷ ಗಾನ ದಲ್ಲಿ ಕೈಕೇಯಿ ದಶರಥನಲ್ಲಿ ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂದು ವಿನಂತಿಸುವ ದೃಶ್ಯ ನಡೆಯುತಿತ್ತು ..ಆ ಕೈಕೇಯಿ ಪಾತ್ರದಾರಿ ಗೆ ಪ್ರಸ್ತುತ ರಾಜ್ಯದ ಪರಿಸ್ಥಿತಿಯ ಅರಿವಿತ್ತು …ಆತ ಸ್ವಲ್ಪ ಹಾಸ್ಯ ಪ್ರಜ್ಞೆ ಉಳ್ಳ ಕಲಾವಿದ ನಾಗಿದ್ದ ಆತ ದಶರಥನಿಗೆ ಇಲ್ಲಿ ಜನ ಹೇಗೆ ನಿನ್ನ ಬಗ್ಗೆ ಆಡಿಕೊಳ್ಳುತಿದ್ದಾರೆ ಎಂದು ಒಂದು ಸುಂದರ ಹಾಸ್ಯ ಭರಿತ ಚುಟುಕ ದ ಮೂಲಕ ಹೀಗೆ ಹೇಳಿದ …
*ನಿನ ಗಂಡ ಮುದುಕ
*ಹೆಚ್ಚು ಕಾಲ ಬದುಕ*
ಅವನಿಗೆ ಯಾಕೆ ಪಟ್ಟ
*ಕಟ್ಟಬೇಕು ಚಟ್ಟ
*ಎನ್ನುತಿದ್ದಾರೆ ಎಂದ
*ಇಡೀ ಸಭೆ ಗೊಳ್…ಎಂದು ನಕ್ಕಿತು…ಇಡೀ ಸಭೆಗೆ ಗೊತ್ತಿತ್ತು ಇದು ಇದೆ ರಾಜ್ಯದ ಮುದುಕ ರಾಜನ ಕುರಿತು ಹೇಳಿದ ಮಾತು ಎಂದು .
*ಆದರೆ ಇಡೀ ಸಭೆಯಲ್ಲಿ ನಗದೇ ಗಂಭೀರ ವಾಗಿ ಕೂತಿದ್ದು ಆ ರಾಜ ಮಾತ್ರ ..ಆತನಮುಖ ಇಂಗು ತಿಂದ ಮಂಗನಂತಾಗಿತ್ತು ..ತಲೆ ಬಗ್ಗಿಸಿ *ಕೂತ…ಕಲಾವಿದನಿಗೆ..ಪರಿಸ್ಥಿತಿ*
ಬಿಸಿ ಏರುತ್ತಿರುವುದು,ತನ್ನ ತಮಾಷೆ ತನಗೇ ಉರುಳಾಗಿದ್ದು ಗಮನಕ್ಕೆ ಬಂದಿತ್ತು.
ತಕ್ಷಣ ಇನ್ನೊಂದು ಡೈಲಾಗು ಹೊರಬಂತು ..” ಆದರೂ ಮಹಾಸ್ವಾಮಿ ಜನ ಈಗಲೂ ನಮ್ಮ ರಾಜರನ್ನು ಹೊಗಳುತ್ತಿದ್ದಾರೆ,ನೀವು ಬುದ್ದಿವಂತರಂತೆ,ಪುಣ್ಯಾತ್ಮರಂತೆ
ಅನುಭವಸ್ಥ ರಂತೆ ಅಂದಾಗ ರಾಜ ಮತ್ತೆ ಎದೆ ಉಬ್ಬಿಸಿ ಕೂತ
*ಆದರೆ ಈಬಾರಿ ಇಡೀಸಭೆ ಯಲ್ಲಿ ರಾಜ ಮಾತ್ರ ನಗುತ್ತಿದ್ದ …ಬೇರೆ ಎಲ್ಲರೂ ಗಂಭೀರ ವಾಗಿದ್ದರು
ಕಲಾವಿದ ತನ್ನ ಕುತ್ತಿಗೆ ಯಲ್ಲಿದ್ದ ಉರುಳಿನಿಂದ ಬಚಾವಾಗಿದ್ದ..ಆದರೆ ಹೇಳಿದ್ದು ಸುಳ್ಳು ಎಂದು ಆತನಿಗೆ ಸ್ಪಷ್ಟವಾಗಿ ಗೊತ್ತಿತ್ತು…
ಇನ್ನು ಇಂದಿನ ಸ್ಥಿತಿ ಗೆ ಕತೆಯನ್ನೊಮ್ಮೆ ಅವಲೋಕಿಸೋಣ..ಅದೆಷ್ಟೋ ಬಾರಿ ನಮ್ಮ ನ್ನಾಳುವ ಕೆಲವು ರಾಜರು ಗಳು ವಯಸ್ಸಾಗಿಯೋ ,ಇನ್ನೊಬ್ಬರ ಮಾತು ಕೇಳಿಯೋ ಮಾಡುವ ತಪ್ಪುಗಳನ್ನು ತಪ್ಪು ಎಂದು ಗೊತ್ತಿದ್ದೂ ಅದನ್ನು ಹೇಳಲು ಹೆದರಬೇಕು ನೋಡಿ,ಅದೆಷ್ಟೋ ಬಾರಿ ತಪ್ಪನ್ನು ತಪ್ಪು ಎನ್ನುವ ನಮ್ಮ ನಿಮ್ಮ ಪರಿಸ್ಥಿತಿ ಹೀಗೇ ಆಗುವುದುಂಟು ಕಟುವಾದ ಸತ್ಯ ಕೆಲವರಿಗೆ ಬೇಸರವಾದಾಗ,ಅವರ ಕೋಪಾಗ್ನಿ ಯನ್ನು ತಣಿಸಲು
ಆಗಾಗ ಸುಳ್ಳು ಹೇಳಿ ಅವರನ್ನು ಮೆಚ್ಚಿಸ ಬೇಕಾಗಬಹುದು..ಇಲ್ಲದೆ ಇದ್ದರೆ ಆ ಪೆಟ್ಟಾದ ಪ್ರಾಣಿ ಸಂದರ್ಭ ಸಿಕ್ಕಿದರೆ ಮೊದಲು ನಮಗೆ ಕಚ್ಚುವುದು …ಮಾತ್ರ ಕಟು ಸತ್ಯ
ಇದು ಮಾತ್ರ ಸತ್ಯ ನೋಡಿ
ಸತ್ಯವಂತರಿಗಿದು ಕಾಲವಲ್ಲ

ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
ನಿಮ್ಮ ಅಭಿಪ್ರಾಯ ನೇರವಾಗಿ ನನಗೆ ವಾಟ್ಸಪ್ ಮಾಡಿ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























